ETV Bharat / state

ಮೀಟರ್ ಬಡ್ಡಿಯವರ ಕಿರುಕುಳ: ಇನ್ಪೋಸಿಸ್​ ಉದ್ಯೋಗಿ ಆತ್ಮಹತ್ಯೆ - ಮೈಸೂರು ಇತ್ತೀಚಿನ ಸುದ್ದಿ

ಮೀಟರ್ ಬಡ್ಡಿಯವರ ಕಿರುಕುಳಕ್ಕೆ ಬೇಸತ್ತ ಯುವಕನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೆಆರ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಇನ್ಫೋಸಿಸ್​ ಕೆಲಸಗಾರ ಆತ್ಮಹತ್ಯೆ
ಇನ್ಫೋಸಿಸ್​ ಕೆಲಸಗಾರ ಆತ್ಮಹತ್ಯೆ
author img

By

Published : Jan 7, 2021, 4:34 PM IST

ಮೈಸೂರು: ಮೀಟರ್ ಬಡ್ಡಿಯವರ ಕಿರುಕುಳ ತಾಳಲಾರದೆ ಇನ್ಫೋಸಿಸ್​ನಲ್ಲಿ ಕೆಲಸ ಮಾಡುತಿದ್ದ ಯುವಕ ನೇಣಿಗೆ ಶರಣಾದ ಘಟನೆ ಕೆಆರ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ನಗರದ ಕೆಆರ್ ಮೊಹಲ್ಲಾದ ಸೀತಾರಾಮರಾವ್ ರಸ್ತೆಯ ನಿವಾಸಿ ಗಗನ್ (23) ನೇಣಿಗೆ ಶರಣಾದ ಯುವಕ. ಈತ ಇನ್ಫೋಸಿಸ್​ನಲ್ಲಿ ಕೆಲಸ ಮಾಡುತ್ತಿದ್ದು ಜಯಂತ್, ಹರ್ಷ, ಪ್ರಕಾಶ್ ಮತ್ತು ತಂಗವೇಲು ಎಂಬುವರಿಂದ ಸಾಲ ಪಡೆದಿದ್ದಾನೆ. ಆದರೆ ಹೆಚ್ಚಿನ ಬಡ್ಡಿ ವಿಧಿಸಿದ್ದಲ್ಲದೆ, ಬಡ್ಡಿ ಕೊಡದ ಕಾರಣ ಮಾನಸಿಕವಾಗಿ ಹಿಂಸೆ ಕೊಡುತ್ತಿದ್ದರು. ಇದರಿಂದ ಮನನೊಂದ ಗಗನ್ ಡೆತ್​ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾನೆ.

ತಮ್ಮ ಮಗ ನಾಲ್ಕು ಜನ ಮೀಟರ್ ಬಡ್ಡಿಯವರ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಗಗನ್ ತಂದೆ ಕೆಆರ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.