ETV Bharat / state

ನಾನು ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ನಿಶ್ಚಿತವಾಗಿ ಗೆಲ್ಲುತ್ತೇನೆ: ಪ್ರಮೋದ್ ಮುತಾಲಿಕ್ - ಕಾರ್ಕಳ ವಿಧಾನಸಭಾ ಕ್ಷೇತ್ರ

ಪಕ್ಷೇತರ ಅಭ್ಯರ್ಥಿಯಾಗಿ ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ನಾನು ಸ್ಪರ್ಧೆ ಮಾಡುತ್ತೇನೆ. ನಾನು ನಿಶ್ಚಿತವಾಗಿಯೂ ಗೆಲ್ಲುತ್ತೇನೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್​ ಮುತಾಲಿಕ್​​ ಹೇಳಿದ್ದಾರೆ.

i-will-definitely-win-from-karkala-constituency-says-pramod-muthalik
ನಾನು ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ನಿಶ್ಚಿತವಾಗಿ ಗೆಲ್ಲುತ್ತೇನೆ : ಪ್ರಮೋದ್ ಮುತಾಲಿಕ್
author img

By

Published : Apr 5, 2023, 4:38 PM IST

ನಾನು ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ನಿಶ್ಚಿತವಾಗಿ ಗೆಲ್ಲುತ್ತೇನೆ : ಪ್ರಮೋದ್ ಮುತಾಲಿಕ್

ಮೈಸೂರು : ಹಿಂದುತ್ವದ ರಕ್ಷಣೆ ಹಾಗೂ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಲು ಉಡುಪಿ ಜಿಲ್ಲೆಯ ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರನಾಗಿ ಸ್ಪರ್ಧೆ ಮಾಡುತ್ತೇನೆ. ಇಲ್ಲಿ ನನಗೆ ನಿಶ್ಚಿತವಾಗಿಯೂ ಗೆಲುವು ಸಿಗಲಿದೆ ಎಂದು ಶ್ರೀ ರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಾನು ಬಿಜೆಪಿ ಪಕ್ಷದಿಂದ ಟಿಕೆಟ್​ ಕೇಳಿದ್ದೆ. ಆದರೆ ಬಿಜೆಪಿ ನನ್ನಂತ ಪ್ರಾಮಾಣಿಕರಿಗೆ ಟಿಕೆಟ್​ ನೀಡಲಿಲ್ಲ. ಆದ್ದರಿಂದ ಕಾರ್ಕಳ ಕ್ಷೇತ್ರದಲ್ಲಿ ಪಕ್ಷೇತರನಾಗಿ ಸ್ಪರ್ಧೆ ಮಾಡಲಿದ್ದೇನೆ. ನಾನು ಹಿಂದುತ್ವ ರಕ್ಷಣೆ ಹಾಗೂ ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದೇನೆ. ನನ್ನ ಗೆಲುವು ನಿಶ್ಚಿತ ಎಂದು ಪ್ರಮೋದ್ ಮುತಾಲಿಕ್ ವಿಶ್ವಾಸ ವ್ಯಕ್ತಪಡಿಸಿದರು. ಜೊತೆಗೆ ಚಾಮುಂಡಿ ಬೆಟ್ಟಕ್ಕೆ ಹೋಗಿ ತಾಯಿಯ ದರ್ಶನ ಪಡೆದು ಬಂದಿದ್ದೇನೆ ಎಂದರು.

ಹಾಸನದ ಬೇಲೂರಿನ ಚನ್ನಕೇಶವ ರಥೋತ್ಸವದ ವೇಳೆ ಕುರಾನ್ ಪಠಣ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಚನ್ನಕೇಶವ ರಥೋತ್ಸವದ ವೇಳೆ ಕುರಾನ್ ಪಠಣಕ್ಕೆ ಅವಕಾಶ ನೀಡಿದ್ದು ಕಾನೂನು ಬಾಹಿರ. ಅಲ್ಲಿನ ಸ್ಥಳೀಯ ಜೆಡಿಎಸ್ ನಾಯಕರ ಒತ್ತಡದಿಂದ ಅವಕಾಶ ಮಾಡಿಕೊಡಲಾಗಿದೆ. ಅಂದರೆ, ಚುನಾವಣೆ ದೃಷ್ಟಿಯಿಂದ ಈ ರೀತಿ ಮಾಡಲಾಗಿದ್ದು ಇಲ್ಲಿ ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ ಆಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಹುಂಡಿ ಹಣ ಬಳಕೆ ಸರಿಯಲ್ಲ: ನಂಜನಗೂಡಿನ ಶ್ರೀ ಕಂಠೇಶ್ವರ ದೇವಾಲಯದಲ್ಲಿ ಸಂಗ್ರಹವಾಗಿರುವ ಹುಂಡಿ ಹಣವನ್ನು ಸ್ಥಳೀಯ ಬಿಜೆಪಿ ಶಾಸಕರು ಶಾದಿ ಮಹಲ್ ನಿರ್ಮಾಣಕ್ಕೆ 10 ಲಕ್ಷ ರೂ ನೀಡಿದ್ದು ಸರಿಯಲ್ಲ. ಹಿಂದೂ ಭಕ್ತರು ಹುಂಡಿಗೆ ನೀಡಿದ ಹಣವನ್ನು ಶಾದಿ ಮಹಲ್ ನಿರ್ಮಾಣಕ್ಕೆ ಬಳಕೆ ಮಾಡುತ್ತಿರುವ ಕ್ರಮ ಸರಿಯಲ್ಲ. ಕೂಡಲೇ ಈ ನಿರ್ಧಾರ ಕೈ ಬಿಟ್ಟು ಹುಂಡಿ ಹಣ ವಾಪಸ್ ಪಡೆಯಬೇಕು. ಇದು ಧಾರ್ಮಿಕ ದತ್ತಿ ಇಲಾಖೆಯ ನಿಯಮಕ್ಕೆ ವಿರುದ್ಧ ಎಂದು ಹೇಳಿದರು.

ಕೊಲೆ ಕೇಸ್ ದಾಖಲಿಸಿರುವುದು ಸರಿಯಲ್ಲ: ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದ್ದರೂ, ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡುತ್ತಲೇ ಇದ್ದಾರೆ. ಈ ಸಂಬಂಧ ಅಕ್ರಮ ಗೋ ಸಾಗಾಟ ತಡೆಯಲು ಹೋದ ಹಿಂದೂ ಪರ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ವಿರುದ್ಧ ಕೊಲೆ ಕೇಸ್ ದಾಖಲಿಸಿ, ಆತನನ್ನು ಬಂಧಿಸಿರುವುದು ಸರಿಯಲ್ಲ. ಕೂಡಲೇ ಆ ಗೋವುಗಳು ಎಲ್ಲಿಂದ ಬಂದವು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸಲಿ. ಈ ಬಗ್ಗೆ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಒಂದು ವರ್ಗದ ಪರವಾಗಿ ಮಾತನಾಡುವುದು ಸರಿಯಲ್ಲ ಎಂದು ಹೇಳಿದರು.

ನನ್ನ ಮೇಲೆ ಐಟಿ, ಇಡಿ ರೈಡ್ ಮಾಡಲಿ : ನನ್ನ ಮೇಲೆ ಇಡಿ, ಐಟಿ ಯಾರು ಬೇಕಾದರೂ ರೈಡ್ ಮಾಡಲಿ. ನನ್ನ ಬಳಿ ಮನೆಯಿಲ್ಲ. ನಾನು ಮದುವೆಯಾಗಿಲ್ಲ. ನನ್ನ ಬಳಿ ಬ್ಯಾಂಕ್ ಖಾತೆಯೂ ಇಲ್ಲ ಎಂದು ಹೇಳಿದರು. ನಾನು ಬಿಕ್ಷೆ ಬೇಡುತ್ತೇನೆ. ಜನರ ಬಳಿ ಒಂದು ಓಟು ಹಾಗೂ ನೂರು ರೂಪಾಯಿ ಪಡೆದು ಚುನಾವಣೆಯನ್ನು ಎದುರಿಸುತ್ತಿದ್ದೇನೆ. ನನ್ನ ಗೆಲುವು ಖಚಿತ, ಗೆದ್ದ ನಂತರ ಪ್ರಧಾನಿ ನರೇಂದ್ರ ಮೋದಿ ಹಾಗೂ ಯೋಗಿ ಆದಿತ್ಯನಾಥ್ ಅವರ ರೀತಿಯಲ್ಲಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ : ಬೇಲೂರು ಚನ್ನಕೇಶವ ರಥೋತ್ಸವ ವೇಳೆ ಕುರಾನ್ ಪಠಣ ವಿರೋಧಿಸಿ ಪ್ರತಿಭಟನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.