ETV Bharat / state

ವೈರಲ್​ ಆಗಿರುವ ಆಡಿಯೋಗೂ ನನಗೂ ಸಂಬಂಧ ಇಲ್ಲ: ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ - ಸೋಮಣ್ಣ ಸ್ಪಷ್ಟೀಕರಣ

ಚಾಮರಾಜನಗರದ ಜೆಡಿಎಸ್ ಅಭ್ಯರ್ಥಿ ಜೊತೆ ಸಚಿವ ವಿ ಸೋಮಣ್ಣ ಮಾತನಾಡಿದ್ದಾರೆ ಎನ್ನಲಾದ ವಿಡಿಯೋವೊಂದು ವೈರಲ್​ ಆಗಿತ್ತು.

Minister V Somanna
ಸಚಿವ ವಿ ಸೋಮಣ್ಣ
author img

By

Published : Apr 26, 2023, 7:56 PM IST

ಸಚಿವ ವಿ ಸೋಮಣ್ಣ

ಮೈಸೂರು: ಚಾಮರಾಜನಗರದ ಜೆಡಿಎಸ್ ಅಭ್ಯರ್ಥಿಯ ಜೊತೆ, ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ಮಾತನಾಡಿರುವ ಫೋನ್ ಸಂಭಾಷಣೆ ವೈರಲ್ ಬಗ್ಗೆ, ಸ್ವತಃ ಸಚಿವ ಸೋಮಣ್ಣ ಅವರೇ ಇಂದು ಪ್ರತಿಕ್ರಿಯೆ ನೀಡಿದ್ದಾರೆ. ವರುಣಾ ಹಾಗೂ ಚಾಮರಾಜನಗರದ ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ, ಚಾಮರಾಜನಗರದ ಜೆಡಿಎಸ್ ಅಭ್ಯರ್ಥಿಯ ಜೊತೆ ನಡೆಸಿರುವ ಮೊಬೈಲ್ ಸಂಭಾಷಣೆ ರಾಜ್ಯಾದ್ಯಂತ ವೈರಲ್ ಆಗಿದೆ. ಅದಕ್ಕೆ ಸೋಮಣ್ಣ ಸ್ಪಷ್ಟೀಕರಣ ನೀಡಿದ್ದಾರೆ.

ಈ ಬಗ್ಗೆ ವರುಣಾ ಕ್ಷೇತ್ರದ ಚಿನ್ನಂಬಳ್ಳಿ ಗ್ರಾಮದಲ್ಲಿ ಸೋಮಣ್ಣ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ವೈರಲ್​ ಆಗಿರುವ ಆಡಿಯೋಗೂ ನನಗೂ ಯಾವುದೇ ಸಂಬಂಧ ಇಲ್ಲ. ನನ್ನ ಬಗ್ಗೆ ಯಾವ ವಿಚಾರವೂ ಸಿಗುತ್ತಿಲ್ಲ. ಅದಿಕ್ಕೆ ಹೀಗೆ ಮಾಡುತ್ತಿದ್ದಾರೆ. ನಾನು ಯಾವುದೋ ನಾಯಿ ನರಿಗಳ ಮಾತಿಗೆ ಮಾತನಾಡುವ ಪರಿಸ್ಥಿತಿ ಇಲ್ಲ. ನಾನು ದಡ್ಡ ಅಲ್ಲ, 45 ವರ್ಷಗಳ ಕಾಲ ರಾಜಕಾರಣ ಮಾಡಿದ್ದೇನೆ. ಚುನಾವಣಾ ಮುಗಿದ ಮೇಲೆ ಈ ಬಗ್ಗೆ ಮಾತನಾಡುತ್ತೇನೆ.

ನನಗೂ ಈ ಅಡಿಯೋಗೂ ಸಂಬಂಧ ಇಲ್ಲ, ಯಾರೋ ಹೊಟ್ಟೆಪಾಡಿಗಾಗಿ ಈ ಕೆಲಸ ಮಾಡಿರಬಹುದು. ಇಂತಹ ಕ್ಷುಲ್ಲಕ ವಿಚಾರವನ್ನು ರಾಜ್ಯದ ಜನರ ಭಾವನೆಯನ್ನು ಕೆಡಿಸಲು ಮಾಡಿದ್ದಾರೆ. ಅಂತಹ ಹುಚ್ಚರು, ಪಾಪಿಗಳು ಮತ್ತೊಬ್ಬರಿಲ್ಲ. ಇವತ್ತು ಯಾರ ಭಾಷೆಯನ್ನು ಯಾರೂ ಬೇಕಾದರೂ ಮಾತನಾಡಬಹುದು. ಇಂತಹ ಕೀಳು ಮಟ್ಟಕ್ಕೆ ಯಾರಾದರೂ ಮಾತನಾಡಿರುವವರು ಇದ್ದರೆ, ಅವರಿಗಿಂತ ಪಾಪಿಗಳಿಲ್ಲ ಎಂದು ಸೋಮಣ್ಣ ತೀಕ್ಷ್ಣವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು.

ಇದನ್ನೂ ಓದಿ: ಕೆಜೆಪಿ ಕಟ್ಟಿ ದೊಡ್ಡ ಅಪರಾಧ ಮಾಡಿದ್ದೆ.. ರಾಜ್ಯದ ಜನತೆ ಕ್ಷಮೆ ಕೇಳಿದ್ದೇನೆ : ಬಿ‌. ಎಸ್. ಯಡಿಯೂರಪ್ಪ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.