ETV Bharat / state

ವಿಧಾನಸಭಾ ಚುನಾವಣೆ 2023: ದೇವರಾಜ ಅರಸು ಜನ್ಮಭೂಮಿಯಲ್ಲಿ ಕಾಂಗ್ರೆಸ್​ ಜೆಡಿಎಸ್ ಮಧ್ಯೆ ಜಿದ್ದಾಜಿದ್ದಿ​ - ದೇವರಾಜ ಅರಸು ಅವರ ಜನ್ಮ ಭೂಮಿ

ದೇವರಾಜ ಅರಸು ಅವರ ಜನ್ಮ ಭೂಮಿ ಹುಣಸೂರು ವಿಧಾನಸಭಾ ಮತಕ್ಷೇತ್ರ ಚುನಾವಣಾ ಕಣವಾಗಿ ಮಾರ್ಪಟ್ಟಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ನೇರ ಪೈಪೋಟಿ ಇದ್ದು ಇದರ ಮಧ್ಯೆ ಬಿಜೆಪಿ ಕೂಡ ಪ್ರಬಲ ಪಕ್ಷವಾಗಿ ಹೊರಹೊಮ್ಮುತ್ತಿದೆ.

ಹುಣಸೂರು ವಿಧಾನಸಭಾ ಕ್ಷೇತ್ರ
ಹುಣಸೂರು ವಿಧಾನಸಭಾ ಕ್ಷೇತ್ರ
author img

By

Published : Mar 21, 2023, 6:00 PM IST

Updated : Mar 21, 2023, 6:05 PM IST

ಮೈಸೂರು: ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸು ಅವರ ಜನ್ಮ ಭೂಮಿ, ರಾಜಕೀಯ ಜಿದ್ದಾಜಿದ್ದಿಗೆ ಹೆಸರಾದ ಹುಣಸೂರು ವಿಧಾನಸಭಾ ಮತ ಕ್ಷೇತ್ರದಲ್ಲಿ ಚುನಾವಣಾ ಲೆಕ್ಕಾಚಾರ ಜೋರಾಗಿದೆ. ಈ ಕ್ಷೇತ್ರದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದ್ದು, ಈ ಬಾರಿ ಜೆಡಿಎಸ್‌ನಿಂದ ಶಾಸಕ ಜಿ.ಟಿ. ದೇವೇಗೌಡ ಪುತ್ರ ಹರೀಶ್ ಗೌಡ ಹಾಗೂ ಕಾಂಗ್ರೆಸ್​ನ ಮಂಜುನಾಥ್ ನಡುವೆ ನೇರ ಪೈಪೋಟಿ ಇದೆ. ಕ್ಷೇತ್ರದಲ್ಲಿ ಪರೋಕ್ಷವಾಗಿ ಜಿ.ಟಿ. ದೇವೇಗೌಡ ಹಾಗೂ ಸಿದ್ದರಾಮಯ್ಯನವರ ವರ್ಚಸ್ಸಿನ ಮೇಲೆ ಚುನಾವಣೆ ನಡೆಯಲಿದ್ದು, ಯಾರು ಮೇಲುಗೈ ಸಾಧಿಸಲಿದ್ದಾರೆ ಅನ್ನೋದು ಕುತೂಹಲ ಮೂಡಿಸಿದೆ.

ಜಿಟಿಡಿ ಪುತ್ರ ಹರೀಶ್‌ಗೌಡ ಸ್ಪರ್ಧೆಯಿಂದ, ದೇವರಾಜ ಅರಸು ಅವರ ಕರ್ಮಭೂಮಿಯೂ ಆಗಿದ್ದರಿಂದ ಈ ಕ್ಷೇತ್ರ ಸದ್ಯ ರಾಜ್ಯ ರಾಜಕೀಯದಲ್ಲೂ ಸದ್ದು ಮಾಡುತ್ತಿದೆ. ಅವರಿಗೆ ಪೈಪೋಟಿ ನೀಡಲು ಹಾಲಿ ಶಾಸಕ ಮಂಜುನಾಥ್ ಕೂಡ ಭಾರೀ ಸಿದ್ಧತೆ ಮಾಡಿಕೊಂಡಿದ್ದು ಈ ಬಾರಿ ಇಲ್ಲಿ ಯಾರೆ ಗೆದ್ದರೂ ಐತಿಹಾಸಿಕ ದಾಖಲೆ ಬರೆಯುವುದು ನಿಶ್ಚಿತ ಅನ್ನೋದು ರಾಜಕೀಯ ವಿಶ್ಲೇಷಕರ ಅನಿಸಿಕೆ.

70 ದಶಕದಲ್ಲಿ 2 ಬಾರಿ ಅಧಿಕಾರದ ಚುಕ್ಕಾಣಿ ಹಿಡಿದು, ಪರಿವರ್ತನೆಯ ಹರಿಕಾರ ಎನಿಸಿಕೊ೦ಡಿದ್ದ ಡಿ.ದೇವರಾಜ ಅರಸು ಅವರನ್ನು ಮುಖ್ಯಮಂತ್ರಿ ಗದ್ದುಗೆಗೆ ಕಳುಹಿಸಿದ ರಾಜಕೀಯ ಪುಣ್ಯಭೂಮಿ ಕ್ಷೇತ್ರ ಎನ್ನಲಾಗುತ್ತಿದೆ. ಚುನಾವಣೆಯಿಂದಲೂ ಅಸ್ತಿತ್ವದಲ್ಲಿರುವ ಈ ಕ್ಷೇತ್ರದಲ್ಲಿ ಈವರೆಗೆ ಮೂರು ಉಪಚುನಾವಣೆ ಸೇರಿದಂತೆ ಒಟ್ಟು 19 ಚುನಾವಣೆ ನಡೆದಿವೆ. ಲಕ್ಷಣತೀರ್ಥ ಆಸುಪಾಸಿನಲ್ಲಿ ನದಿಯ ಹರಡಿಕೊಂಡಿರುವ ಈ ಕ್ಷೇತ್ರ ರಾಜ್ಯಕ್ಕೆ ಮುಖ್ಯಮಂತ್ರಿ ನೀಡಿದರೂ ಪಟ್ಟಣದ ನಡುವೆ ಸಮಸ್ಯೆಗಳಿಂದ ಮುಕ್ತವಾಗಿಲ್ಲ. ಲಕ್ಷ್ಮಣತೀರ್ಥ ನದಿ ವಿಪರೀತ ಕಲ್ಮಶವಾಗಿದೆ. ಆದಿವಾಸಿಗಳ ಕೆಲ ಸಮಸ್ಯೆಗಳು ಇನ್ನೂ ಬಗೆಹರಿದಿಲ್ಲ. ಬಿಜೆಪಿ ಅಭ್ಯರ್ಥಿಯಾಗಿರುವ ವಿಶ್ವನಾಥ್ ಪ್ರತ್ಯೇಕ ಜಿಲ್ಲೆಯ ಕೂಗು ಎತ್ತಿರುವರಾದರೂ ಅದು ಈಡೇರಿಲ್ಲದಿರುವುದು ಕ್ಷೇತ್ರದ ವೈಶಿಷ್ಟ್ಯ.

19 ಬಾರಿ ನಡೆದಿ ಚುನಾವಣೆಯಲ್ಲಿ 12 ಬಾರಿ ಕಾಂಗ್ರೆಸ್, 5 ಬಾರಿ ಜೆಡಿಎಸ್, 2 ಬಾರಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದಿದೆ. ಆದರೆ, ಅರಸು ನಂತರ ಕಾಂಗ್ರೆಸ್ ಪಕ್ಷದಲ್ಲಿ ಕಾಲೆಳೆಯುವ ಸ್ಥಿತಿ ನಿರ್ಮಾಣವಾಗಿದ್ದು ಮರೆಯುಂತಿಲ್ಲ. ಶತಾಯಗತಾಯ 11 ವರ್ಷಗಳ ನಂತರ ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಅವಕಾಶ ಸಿಕ್ಕಿತ್ತು. ಮಧ್ಯದಲ್ಲಿ ಅಂತರ ಕಾದು ಜೆಡಿಎಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದರು. ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಗೆಲವು ಕಂಡಿದೆ. ಸದ್ಯ 2023ರ ಚುನಾವಣೆಗಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿ ನಡುವೆ ಜಿದ್ದಾ ಜಿದ್ದಿ ನಡೆಯುತ್ತಿದೆ. ಇದರೊಟ್ಟಿಗೆ ಬಿಜೆಪಿಯಿಂದ ಜಿಪಂ ಮಾಜಿ ಸದಸ್ಯ ಜಿ.ಎಸ್‌.ರಮೇಶ್‌ಕುಮಾರ್‌, ಬಿ.ಎಸ್‌.ಯೋಗನಂದಕುಮಾರ್‌, ನಾಗಣ್ಣಗೌಡ, ಹೆಚ್​.ಎನ್‌.ಮಂಜುನಾಥ್‌, ಚಂದ್ರಶೇಖರ್‌, ಮಹದೇವ ಹೆಗ್ಗಡೆ ಸಹ ಬಿಜೆಪಿಯ ಟಿಕೆಟ್​ ಆಕಾಂಕ್ಷಿತರ ಸಾಲಿನಲ್ಲಿದ್ದಾರೆ. ಘಟಾನುಘಟಿಗಳು ಪ್ರತಿನಿಧಿಸಿದ ಈ ಕ್ಷೇತ್ರದಲ್ಲಿ ಶಾಸಕ ಸ್ಥಾನಕ್ಕೆ ಮತದಾರರು ಯಾರನ್ನು ಆಯ್ಕೆ ಮಾಡುತ್ತಾರೆ ಕಾದು ನೋಡಬೇಕಿದೆ.

ಸಿದ್ದು-ಜಿಟಿಡಿ ನಡುವೆ ಕದನ: ವಾಸ್ತವದಲ್ಲಿ ಕಾಂಗ್ರೆಸ್‌ನ ಹಾಲಿ ಶಾಸಕ ಹೆಚ್​.ಪಿ.ಮಂಜುನಾಥ್‌ ಅಭ್ಯರ್ಥಿಯಾದರೂ ನೇರವಾಗಿ ಸಿದ್ಧರಾಮಯ್ಯ ಕಣಕ್ಕಿಳಿಯುವುದು ನಿಶ್ಚಿತ. ಇದುವರೆವಿಗೂ ಒಕ್ಕಲಿಗರ ಪ್ರಾಬಲ್ಯದ ನಡುವೆಯೂ ಕಾಂಗ್ರೆಸ್‌ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಿದ್ದರು. ಆದರೆ, ಈ ಬಾರಿ ಮೂಲತಃ ಒಕ್ಕಲಿಗ ಪ್ರಬಲ ನಾಯಕರಾದ ಜಿ.ಡಿ.ಹರೀಶ್‌ಗೌಡ ವಿರುದ್ಧ ಚುನಾವಣೆ ಎದುರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿನ ತಮ್ಮ ಸೋಲನ್ನು ಜಿಟಿ ದೇವೇಗೌಡರಿಗೆ ತೋರಿಸಲು ಒಳಗೊಳಗೆ ಪಣ ತೊಟ್ಟಿರುವ ಸಿದ್ದರಾಮಯ್ಯ ಈ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ಪರಿಗಣಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಹೀಗಾಗಿ ಈ ಬಾರಿ ಇಬ್ಬರಲ್ಲಿ ಯಾರೇ ಗೆದ್ದರೂ ಅದು ಇತಿಹಾಸದಲ್ಲಿ ದಾಖಲೆಯಾಗಲಿದೆ.

ಕ್ಷೇತ್ರದ ಮತದಾರರ ನಡೆ ನಿಗೂಢ: ಪ್ರಬಲ ಸಮುದಾಯದ ಬೆಂಬಲದ ಕೊರತೆ ಇದ್ದರೂ ಶಿವ ಭಕ್ತರಾದ ಹಾಲಿ ಶಾಸಕ ಮಂಜುನಾಥ್‌, ಜನಾನೂರಾಗಿ ಕ್ಷೇತ್ರದಲ್ಲಿ ನಿರಂತರ ಸಂಚರಿಸುತ್ತಿದ್ದಾರೆ. ಇದೇ ಕಾರಣಕ್ಕೆ ಜನರು ಕೂಡ ಇವರು ಹೋದ ಕಡೆಯಲ್ಲೆಲ್ಲ ಓಡಾಡುತ್ತಿದ್ದಾರೆ. ಅಂತೆಯೇ ಪ್ರಬಲ ಸಮುದಾಯದ ಬೆಂಬಲದೊಂದಿಗೆ ಕಣಕ್ಕಿಳಿಯಲಿರುವ ಚಾಮುಂಡೇಶ್ವರಿ ದೇವಿ ವರಪುತ್ರ ಎನಿಸಿಕೊಳ್ಳುವ ಹರೀಶ್‌ಗೌಡ, ಈಗಾಗಲೇ ಯುವಕರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಇದೇ ಕಾರಣಕ್ಕೆ ಇವರಿಗೂ ಕೂಡ ಜನ ಬೆಂಬಲ ಹೆಚ್ಚಾಗಿದೆ. ಆದರೆ, ಮುಂದಿನ ದಿನಗಳಲ್ಲಿ ನಡೆಯುವ ಚುನಾವಣಾ ಕಾಳಗದಲ್ಲಿ ಇಬ್ಬರೂ ನಾಯಕರ ನಡೆ ಮೇಲೆ ಮತದಾರರು ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಹುಣಸೂರು ವಿಧಾನಸಭಾ ಮತಕ್ಷೇತ್ರ
ಹುಣಸೂರು ವಿಧಾನಸಭಾ ಮತಕ್ಷೇತ್ರ

ಮತದಾರರ ವಿವರ: 2,27,580 ಒಟ್ಟು ಮತದಾರರನ್ನು ಹೊಂದಿರುವ ಹುಣಸೂರು ವಿಧಾನಸಭಾ ಮತಕ್ಷೇತ್ರದಲ್ಲಿ, 1,14,580 ಪುರುಷರು, 1,13,388 ಮಹಿಳೆಯರು ಹಾಗೂ 6 ಮತಗಳಿವೆ. ಅಂದಾಜು 274 ಮತಗಟ್ಟೆಗಳನ್ನು ಹೊಂದಿದೆ. ಒಕ್ಕಲಿಗರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಕುರುಬ ಸಮೂದಾಯ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಇಲ್ಲಿಯವರೆಗೆ ಗೆದ್ದ ಅಭ್ಯರ್ಥಿ ವಿವರ: ಉಪಚುನಾವಣೆ ಸೇರಿದಂತೆ ಕ್ಷೇತ್ರದಲ್ಲಿ 19 ಬಾರಿ ನಡೆದಿ ಚುನಾವಣೆ ನಡೆದಿದೆ. ಅದರಲ್ಲಿ 12 ಬಾರಿ ಕಾಂಗ್ರೆಸ್, 5 ಬಾರಿ ಜೆಡಿಎಸ್, 2 ಬಾರಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದಿದೆ. ಸದ್ಯದ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿ ನಡುವೆ ಜಿದ್ದಾ ಜಿದ್ದಿ ನಡೆಯುತ್ತಿದ್ದು, ಬಿಜೆಪಿ ಕೂಡ ಪ್ರಬಲ ಪೈಪೋಟಿ ನೀಡಲು ತಯಾರಿ ನಡೆಸಿದೆ.

1952 : ಡಿ.ದೇವರಾಜ ಅರಸು (ಕಾಂಗ್ರೆಸ್‌)
1957 : ಡಿ.ದೇವರಾಜ ಅರಸು-ರಾಚಯ್ ಯ(ಕಾಂಗ್ರೆಸ್‌) ದ್ವಿಸದಸ್ಯ ಕ್ಷೇತ್ರ
1962 : ಡಿ.ದೇವರಾಜ ಅರಸು (ಕಾಂಗ್ರೆಸ್‌ನಿಂದ ಅವಿರೋಧ ಆಯ್ಕೆ)
1967 : ಡಿ.ದೇವರಾಜ ಅರಸು (ಕಾಂಗ್ರೆಸ್‌)
1972 : ಡಿ.ಕರಿಯಪ್ಪಗೌಡ (ಕಾಂಗ್ರೆಸ್‌)
1972 : ಡಿ.ದೇವರಾಜ ಅರಸು (ಕಾಂಗ್ರೆಸ್‌) ಉಪಚುನಾವಣೆ
1978 : ಡಿ.ದೇವರಾಜ ಅರಸು (ಕಾಂಗ್ರೆಸ್‌)
1983 : ಚಂದ್ರಪ್ರಭಾ ಅರಸು (ಜನತಾಪಕ್ಷ)
1985 : ಡಾ.ಹೆಚ್.ಎಲ್‌.ತಿಮ್ಮೇಗೌಡ (ಕಾಂಗ್ರೆಸ್‌)
1989 : ಚಂದ್ರಪ್ರಭಾ ಅರಸು (ಕಾಂಗ್ರೆಸ್‌)
1991 : ಚಿಕ್ಕಮಾದು (ಕಾಂಗ್ರೆಸ್‌) ಉಪಚುನಾವಣೆ
1994 : ಸಿ.ಹೆಚ್.ವಿಜಯಶಂಕರ್‌ (ಬಿಜೆಪಿ)
1998 : ಜಿ.ಟಿ.ದೇವೇಗೌಡ (ಜೆಡಿಎಸ್‌) ಉಪಚುನಾವಣೆ
1999 : ವಿ.ಪಾಪ್ಪಣ್ಣ (ಬಿಜೆಪಿ)
2004 : ಜಿ.ಟಿ.ದೇವೇಗೌಡ (ಜೆಡಿಎಸ್‌)
2008 : ಎ.ಪಿ.ಮಂಜುನಾಥ್‌ (ಕಾಂಗ್ರೆಸ್‌)
2013 : ಎ.ಪಿ.ಮಂಜುನಾಥ್‌ (ಕಾಂಗ್ರೆಸ್‌)
2018 : ಹೆಚ್.ವಿಶ್ವನಾಥ್‌ (ಜೆಡಿಎಸ್‌)
2019 : ಹೆಚ್​.ಪಿ.ಮಂಜುನಾಥ್‌ (ಕಾಂಗ್ರೆಸ್‌) ಉಪ ಚುನಾವಣೆ

ಇದನ್ನೂ ಓದಿ: ಸಿದ್ದರಾಮಯ್ಯ ಕುಟುಂಬದ ಭದ್ರಕೋಟೆ ವರುಣಾದಲ್ಲಿ ಬಯಲಾಗದ ಬಿಜೆಪಿಯ ತಂತ್ರ!

Last Updated : Mar 21, 2023, 6:05 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.