ETV Bharat / state

ಮಾವು ಹಾಗೂ ಹಲಸು ಮೇಳ... ರೈತರಿಂದ ನೇರ ಗ್ರಾಹಕರಿಗೆ ನೈಸರ್ಗಿಕ ಹಣ್ಣು - undefined

ನಗರದ ಕರ್ಜನ್ ಪಾರ್ಕ್​ನಲ್ಲಿ ತೋಟಗಾರಿಕೆ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಮಾವು ಹಾಗೂ ಹಲಸು ಹಣ್ಣಿನ ಮೇಳವನ್ನು ಏರ್ಪಡಿಸಲಾಗಿದ್ದು, ಈ ಮೇಳೆದಲ್ಲಿ ಸುಮಾರು 40ಕ್ಕೂ ಹೆಚ್ಚು ಮಾವಿನ ಹಣ್ಣಿನ ಮಳಿಗೆಗಳನ್ನು ಹಾಕಲಾಗಿತ್ತು.

ಮಾವು ಹಾಗೂ ಹಲಸು ಮೇಳ
author img

By

Published : May 24, 2019, 4:58 PM IST

ಮೈಸೂರು: ನಗರದ ಕರ್ಜನ್ ಪಾರ್ಕ್​ನಲ್ಲಿ ತೋಟಗಾರಿಕೆ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಮಾವು ಹಾಗೂ ಹಲಸು ಹಣ್ಣಿನ ಮೇಳವನ್ನು ಏರ್ಪಡಿಸಲಾಗಿತ್ತು.

ನಗರದ ಕರ್ಜನ್ ಪಾರ್ಕ್​ನಲ್ಲಿ ಮಾವು ಹಾಗೂ ಹಲಸು ಮೇಳ

ನಗರದ ಕರ್ಜನ್ ಪಾರ್ಕ್​ನಲ್ಲಿ ತೋಟಗಾರಿಕೆ ಇಲಾಖೆ ಏರ್ಪಡಿಸಿದ್ದ ಮೇಳಕ್ಕೆ ಜಿಪಂ ಸಿಇಒ ಜ್ಯೋತಿ ಚಾಲನೆ ನೀಡಿದರು‌. ಮೇಳದಲ್ಲಿ ಬಾದಾಮಿ, ಬಂಗನಪಲ್ಲಿ, ರಸಪೂರಿ, ಮಲ್ಲಿಕಾ, ಸೆಂಧೂರ, ಮಲಗೋವಾ, ತೋತಾಪುರಿ, ನೀಲಂ, ಆಮ್ರಪಾಲಿ, ಕೇಸರ್, ದಶೇರಿ ಇತ್ಯಾದಿ ಮಾವಿನ ತಳಿಗಳನ್ನು ಇಡಲಾಗಿತ್ತು. ಸುಮಾರರು 40 ಮಾವಿನ ಹಣ್ಣಿನ ಮಳಿಗೆಗಳು, ಎರಡು ಹಲಸಿನ ಮಳಿಗೆಗಳು ಮೇಳದಲ್ಲಿದ್ದವು. ಈ ಮೇಳದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಹಲವು ವ್ಯಾಪರಿಗಳು ಭಾಗವಹಿಸಿದ್ದರು.

ರೈತರಿಂದ ನೈಸರ್ಗಿಕ ಮಾವುಗಳನ್ನು ಮಾರಾಟ ಮಾಡುವುದರಿಂದ ಗ್ರಾಹಕರಿಗೂ ಹಾಗೂ ರೈತರಿಗೆ ಅನುಕೂಲವಾಗಲಿದೆ. ಇಲ್ಲಿ ನೇರವಾಗಿ ಮಾರಾಟ ಆಗುವುದರಿಂದ ಯಾವುದೇ ಮಧ್ಯವರ್ತಿಗಳ ಕಾಟ ಇರುವುದಿಲ್ಲ. ಇದು ವರ್ಷಕ್ಕೆ ಒಮ್ಮೆ ಬೆಳೆಯುವ ಬೆಳೆಯಾಗಿದ್ದು, ಕೆಲವೊಂದು ಮಾವಿನ ತಳಿಗೆ ಒಂದೆರಡು ರೂಪಾಯಿ ಹೆಚ್ಚಿರುತ್ತದೆ ಅಷ್ಟೇ. ಈ ಮೇಳದಲ್ಲಿ ಭಾಗವಹಿಸಿ ಸಂತೋಷವಾಯಿತು ಎಂದು 'ಈಟಿವಿ ಭಾರತ್​'ನೊಂದಿಗೆ ತಮ್ಮ ಅಭಿಪ್ರಾಯವನ್ನು ವ್ಯಾಪಾರಿ ಲೋಕೇಶ್​ ಹಂಚಿಕೊಂಡರು.

Intro:ಮಾವು ಹಾಗೂ ಹಲಸು ಮೇಳ

Body:ಮಾವು ಹಾಗೂ ಹಲಸು ಮೇಳ

Conclusion:ಹಣ್ಣು ಪ್ರೀಯರಿಗೆ ಬಾಯಿ‌ ಚಪ್ಪರಿಸುವ ಸುವಾಸನೆ ಬೀರುತ್ತಿದೆ ಮಾವು ಹಲಸು
ಮೈಸೂರು: ಎಲ್ಲಿ ನೋಡಿದರು ತಾಜಾ ಹಣ್ಣು , ರಸಪುರಿ, ತೋತಪುರಿ, ಬಾದಾಮಿ, ಹೀಗೆ ಹಲವಾರು ವಿವಿಧ ಮಾವಿನ ಹಣ್ಣುಗಳು ಹಾಗೂ ಹಲಸಿನ ಹಣ್ಣುಗಳು ಸಾರ್ವಜನಿಕರ ಮೂಗಿನ ಸುವಾಸನೆ ಬೀರುತ್ತ ತನ್ನತ್ತ ಸೆಳೆಯುತ್ತಿದೆ.
ಹೌದು, ನಗರದ ಕರ್ಜನ್ ಪಾಕ್೯ನಲ್ಲಿ ತೋಟಗಾರಿಕೆ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಿಂದ ಏರ್ಪಡಿಸಿರುವ ಮಾವು ಹಾಗೂ ಹಲಸು ಮೇಳಕ್ಕೆ ಜಿ.ಪಂ.ಸಿಇಒ ಜ್ಯೋತಿ ಅವರು ಚಾಲನೆ ನೀಡಿದರು‌.
ಮೇಳದಲ್ಲಿ ಬಾದಾಮಿ, ಬಂಗನಪಲ್ಲಿ, ರಸಪುರಿ,ಮಲ್ಲಿಕಾ, ಸೆಂಧೂರ,ಮಲಗೋವಾ, ತೋತಾಪುರಿ, ನೀಲಂ, ಆಮ್ರಪಾಲಿ, ಕೇಸರ್, ದಶೇರಿ ಇತ್ಯಾದಿ ಮಾವು ತಳಿಗಳು ಸುವಾಸನೆ ರುಚಿಯಿಂದ ಗ್ರಾಹಕರನ್ನು ತನ್ನತ ಸೆಳೆಯುತ್ತದೆ.
40 ಮಾವಿನ ಹಣ್ಣು ಮಳಿಗೆ, ಎರಡು ಹಲಸು ಮಳಿಗೆಗಳಿವೆ.ರಾಜ್ಯದ ವಿವಿಧ ಜಿಲ್ಲೆಗಳಿಂದ ಮಾವು ವ್ಯಾಪರಿಗಳು ಆಗಮಿಸಿದ್ದಾರೆ.
ಮಾವು ಹಣ್ಣು ವ್ಯಾಪಾರಿ ಕೃಷ್ಣ 'ಈ ಟಿವಿ ಭಾರತ್' ನೊಂದಿಗೆ ಮಾತನಾಡಿ, ರೈತರಿಂದ ನೈಸರ್ಗಿಕ ಮಾವುಗಳನ್ನು ಮಾರಾಟ ಮಾಡುವುದರಿಂದ ಗ್ರಾಹಕರಿಗೂ ಹಾಗೂ ರೈತರಿಗೆ ಅನುಕೂಲವಾಗಲಿದೆ ಎಂದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.