ಮೈಸೂರು: ಹನಿಟ್ರ್ಯಾಪ್ ಮೂಲಕ ವೈದ್ಯನೊಬ್ಬ 31 ಲಕ್ಷಕ್ಕೂ ಹೆಚ್ಚು ಹಣ ಕಳೆದುಕೊಂಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಡಾ.ಪ್ರಕಾಶ್ ಬಾಬು ಹನಿಟ್ರ್ಯಾಪ್ ಮೂಲಕ 31.30 ಲಕ್ಷ ರೂ.ಕಳೆದುಕೊಂಡಡವರು. ವೈದ್ಯ ಪ್ರಕಾಶ್ಗೆ ಅನಿತಾ ಎಂಬಾಕೆಯ ಪರಿಚಯವಾಗಿತ್ತು. ಬಳಿಕ ಇವರಿಬ್ಬರು ಏಕಾಂತವಾಗಿ ಸಮಯ ಕಳೆದಿದ್ದಾರೆ. ಇವರ ಏಕಾಂತದ ಕ್ಷಣಗಳನ್ನು ಮೊದಲೇ ಪ್ಲಾನ್ ಮಾಡಿದಂತೆ ಪಿರಿಯಾಪಟ್ಟಣ ತಾಲೂಕು ನಿವಾಸಿಗಳಾದ ನವೀನ್, ಶಿವರಾಜು, ಹರೀಶ್, ವಿಜಿ ವಿಡಿಯೋದಲ್ಲಿ ಸೆರೆ ಹಿಡಿದಿದ್ದಾರೆ. ನಂತರ ವೈದ್ಯನಿಗೆ ಕೋಟಿ ರೂ. ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು. ಇಲ್ಲವಾದಲ್ಲಿ ವಿಡಿಯೋವನ್ನ ಸಾಮಾಜಿಕ ಜಾಲತಾಣಕ್ಕೆ ಹಂಚುವ ಬೆದರಿಕೆ ಹಾಕಿದ್ದರು ಎನ್ನಲಾಗ್ತಿದೆ.
2019 ಡಿಸೆಂಬರ್‌ನಿಂದ 2020 ಅಕ್ಟೋಬರ್ ತಿಂಗಳವರೆಗೂ ಆರೋಪಿಗಳು ವೈದ್ಯ ಪ್ರಕಾಶ್ ಬಳಿಯಿಂದ 31 ಲಕ್ಷದ 30 ಸಾವಿರ ರೂಪಾಯಿ ಹಣ ವಸೂಲಿ ಮಾಡಿದ್ದಾರೆ. ಆದ್ರೂ ಸಹ ಆರೋಪಿಗಳ ವೈದ್ಯನಿಂದ ಹಣ ಕೀಳಲು ಬಿಟ್ಟಿರಲಿಲ್ಲ. ಪಿರಿಯಾಪಟ್ಟಣ ಬಿಟ್ಟು ಮೈಸೂರು ನಗರಕ್ಕೆ ಬಂದ ಡಾ. ಪ್ರಕಾಶ್ ಬಾಬು ಕುವೆಂಪುನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣವನ್ನು ಸೈಲೆಂಟ್ ಆಗಿ ಬೆನ್ನತ್ತಿದ್ದ ಪೊಲೀಸರು ಮೊದಲು ಹುಣಸೂರಿನ ಅನಿತಾಳನ್ನು ಬಲೆಗೆ ಕೆಡವಿದರು. ಅದಾದ ಬಳಿಕ ನವೀನ್, ಶಿವರಾಜು, ಹರೀಶ್, ವಿಜಿಯನ್ನು ಪತ್ತೆ ಹಚ್ಚಿ ಪೊಲೀಸರು ಬಂಧಿಸಿ ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ.