ಮೈಸೂರು : ಹೋಂ ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಓಡಾಡುತ್ತಿದ್ದ ಜುಬಿಲಂಟ್ ಕಾರ್ಖಾನೆಯ ನೌಕರನ ವಿರುದ್ಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನಂಜನಗೂಡು ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿರುವ ಜುಬಿಲಂಟ್ ಕಾರ್ಖಾನೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಆದ್ದರಿಂದ ಕಾರ್ಖಾನೆಯ ಸುಮಾರು 1500ಕ್ಕೂ ಹೆಚ್ಚು ಮಂದಿಯನ್ನು ಹೋಂ ಕ್ವಾರಂಟೈನ್‌ನಲ್ಲಿರಿಸಲಾಗಿದೆ. ಇದರಲ್ಲಿ ನಂಜನಗೂಡಿನಲ್ಲಿ 900ಕ್ಕೂ ಹೆಚ್ಚು ಮಂದಿ ತಾಲೂಕು ಆಡಳಿತದ ನಿಗಾದಲ್ಲಿದ್ದಾರೆ. ಆದರೆ, ಕೆಲ ನೌಕರರು ಕೈಗೆ ಸೀಲ್ ಹಾಕಿಸಿಕೊಂಡಿದ್ದರೂ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುತ್ತಿದ್ದಾರೆ ಎಂಬ ದೂರಿನ ಮೇರೆಗೆ, ಜಿಲ್ಲಾಡಳಿತವು ಹೊರಗೆ ಬಂದರೆ ಕೇಸ್ ಹಾಕಲಾಗುವುದು ಎಂದು ಎಚ್ಚರಿಸಿತ್ತು.
ಆದರೆ, ವಿ ಎ ಬಡಾವಣೆ ನಿವಾಸಿಯೊಬ್ಬ ಹೋಂ ಕ್ವಾರಂಟೈನ್‌ನಲ್ಲಿರದೆ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುತ್ತಿರುವುದನ್ನು ಗಮನಿಸಿದ ಪೊಲೀಸರು, ಈತನ ವಿರುದ್ಧ ದೂರು ದಾಖಲಿಸಿ ಐಪಿಸಿ ಸೆಕ್ಷನ್ 188, 269 ಹಾಗೂ 271ರ ಅಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.