ಮೈಸೂರು : ಪಕ್ಕದ ಕೇರಳದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಹೆಚ್ಡಿಕೋಟೆ ತಾಲೂಕಿನ ಬಾವುಲಿ ಚೆಕ್ಪೋಸ್ಟ್ ಮೂಲಕ ರಾಜ್ಯಕ್ಕೆ ಬರುವವರಿಗೆ ರಾಜ್ಯ ಸರ್ಕಾರ ಹೋಮ್ ಕ್ವಾರಂಟೈನ್ ಕಡ್ಡಾಯಗೊಳಿಸಿದೆ.
ಈ ಕುರಿತಂತೆ ಮಾಧ್ಯಗಳೊಂದಿಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕೆ ಹೆಚ್ ಪ್ರಸಾದ್ ಮಾತನಾಡಿ, ಕೇರಳದಿಂದ ರಾಜ್ಯಕ್ಕೆ ಬರುವ ವಿದ್ಯಾರ್ಥಿಗಳಿಗೆ ರಾಜ್ಯದ ಕಾಲೇಜು ಆಡಳಿತ ಮಂಡಳಿಯವರೆ ಕ್ವಾರಂಟೈನ್ ಮಾಡಬೇಕಿದೆ.
ಕಂಪನಿಗಳ ಕಾರ್ಯ ನಿಮಿತ್ತ ಆಗಮಿಸುವವರಿಗೆ ಆಯಾ ಕಂಪನಿಗಳೇ ಹೋಮ್ ಕ್ವಾರಂಟೈನ್ ಮಾಡಬೇಕಿದೆ. ಕೇರಳದಿಂದ ತುರ್ತಾಗಿ ರಾಜ್ಯಕ್ಕೆ ಆಗಮಿಸುವರು ಕಡ್ಡಾಯವಾಗಿ 72 ಗಂಟೆಗಳ ಆರ್ಟಿ-ಪಿಸಿಆರ್ ವರದಿ ಸಲ್ಲಿಸದರೆ ಮಾತ್ರ ಪ್ರವೇಶ ನೀಡಲಾಗುವುದು ಎಂದರು.
ಬಳಿಕ ಹೆಚ್ ಡಿ ಕೋಟೆ ತಾಲೂಕು ವೈದ್ಯಾಧಿಕಾರಿ ಡಾ.ರವಿಕುಮಾರ್ ಮಾತನಾಡಿ, ಕೇರಳದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಸಂಬಂಧ ಸರ್ಕಾರದ ಆದೇಶದಂತೆ ರಾಜ್ಯ ಪ್ರವೇಶಿಸುವವರಿಗೆ ವಿಭಾಗಗಳಾಗಿ ವಿಂಗಡಿಸಲಾಗಿದೆ.
ವಿದ್ಯಾರ್ಥಿಗಳು, ಕಂಪನಿಗಳಲ್ಲಿ ಕೆಲಸ ಮಾಡಲು ಬರುವವರಿಗೆ ಹಾಗೂ ಇತರೆ ಕೆಲಸಗಳಿಗೆ ಕೇರಳದಿಂದ ಆಗಮಿಸುವವರಿಗೆ ಆಯಾ ಕಾಲೇಜು ಸೇರಿದಂತೆ ಕಂಪನಿಯೇ ಕ್ವಾರಂಟೈನ್ ವ್ಯವಸ್ಥೆ ಮಾಡಬೇಕು. ಅಲ್ಲಿಂದ ಬರುವ ಪ್ರತಿಯೊಬ್ಬರ ವಿಳಾಸ, ಮೊಬೈಲ್ ನಂಬರ್ ಎಲ್ಲಾ ರೀತಿಯ ಮಾಹಿತಿಯನ್ನು ನೋಂದಣಿ ಮಾಡಿಕೊಳ್ಳಲಾಗುತ್ತದೆ ಎಂದರು.
ಓದಿ: ಆನ್ಲೈನ್ ಜೂಜು ನಿಷೇಧಿಸಲು ಕರ್ನಾಟಕ ಪೊಲೀಸ್ ಕಾಯ್ದೆಗೆ ತಿದ್ದುಪಡಿ ತರಲು ಸಂಪುಟ ಸಭೆ ತೀರ್ಮಾನ