ETV Bharat / state

ಮೈಸೂರು: ಬಸ್ ಇಳಿಯುವಾಗ ಆಯತಪ್ಪಿ ಬಿದ್ದು ದಿವ್ಯಾಂಗ ಯುವತಿ ಸಾವು - handicapped girl falling from bus in mysore

ನಂಜನಗೂಡು ತಾಲೂಕಿನ ಹುಸ್ಕೂರು ಗ್ರಾಮದ ದಿವ್ಯಾಂಗ ಯುವತಿ ಬಸ್​ ಇಳಿಯುವಾಗ ಆಯತಪ್ಪಿ ಬಿದ್ದು ಸಾವನ್ನಪ್ಪಿದ್ದಾರೆ.

handicapped young girl died  after fall from bus
ಬಸ್​ ಇಳಿಯುವಾಗ ಬಿದ್ದು ಯುವತಿ ಸಾವು
author img

By

Published : Nov 23, 2021, 8:51 PM IST

ಮೈಸೂರು: ಕೆಎಸ್​ಆರ್​ಟಿಸಿ ಬಸ್​​ನಿಂದ ಬಿದ್ದು ದಿವ್ಯಾಂಗ ಯುವತಿ ಸಾವನ್ನಪ್ಪಿರುವ ಘಟನೆ ನಂಜನಗೂಡು ತಾಲೂಕಿನ ಹುಸ್ಕೂರು ಗ್ರಾಮದ ಬಸ್ ನಿಲ್ದಾಣದಲ್ಲಿ ನಡೆದಿದೆ.

ಹುಸ್ಕೂರು ಗ್ರಾಮದ ಮಹೇಶ ಎಂಬುವರ ಪುತ್ರಿ ಚಂದನ (17) ಮೃತಪಟ್ಟವರು. ನಂಜನಗೂಡು ತಾಲೂಕಿನ ವಳಗೆರೆ ಗ್ರಾಮದಿಂದ ಸ್ವಗ್ರಾಮ ಹುಸ್ಕೂರಿಗೆ ಕೆಎಸ್​ಆರ್​​ಟಿಸಿ ಬಸ್‌ನಲ್ಲಿ ತೆರಳುತ್ತಿದ್ದ ಯುವತಿ, ಹುಸ್ಕೂರು ಗ್ರಾಮದ ಬಸ್ ನಿಲ್ದಾಣದಲ್ಲಿ ಇಳಿಯುವ ಸಂದರ್ಭದಲ್ಲಿ ಬಸ್ ಮುಂದಕ್ಕೆ ಚಲಿಸಿದೆ. ಈ ವೇಳೆ, ಆಯತಪ್ಪಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

handicapped young girl died  after fall from bus
ಬಸ್​ ಇಳಿಯುವಾಗ ಬಿದ್ದು ಯುವತಿ ಸಾವು

ಇನ್ನು ಬಸ್ ಇಳಿಯುತ್ತಿರುವ ಸಂದರ್ಭದಲ್ಲಿ ಕೆಳಗೆ ಬಿದ್ದು ಸಾವನ್ನಪ್ಪಿದ್ದರೂ ಬಸ್ ನಿಲ್ಲಿಸದೆ ಸ್ಥಳದಿಂದ ಚಾಲಕ ಮತ್ತು ನಿರ್ವಾಹಕ ಹೊರಟಾಗ ಗ್ರಾಮಸ್ಥರು ಎಚ್ಚೆತ್ತಿದ್ದಾರೆ. ತಕ್ಷಣವೇ ಸಮೀಪದ ಹಲ್ಲರೆ ಗ್ರಾಮಸ್ಥರಿಗೆ ದೂರವಾಣಿ ಕರೆ ಮಾಡಿ ಬಸ್ ತಡೆದಿದ್ದಾರೆ. ಬಸ್ ಚಾಲಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹುಸ್ಕೂರು ಗ್ರಾಮಸ್ಥರು ಮತ್ತು ನೊಂದ ಕುಟುಂಬಸ್ಥರು ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.