ಮೈಸೂರು: ಹೈಕಮಾಂಡ್ ಸೂಚನೆಯಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಳೆ ಸಂಪುಟ ವಿಸ್ತರಣೆಗೆ ಸಮಯ ನಿಗದಿ ಮಾಡಿದ್ದಾರೆ. ಈ ನಡುವೆ ಸಚಿವಾಕಾಂಕ್ಷಿಗಳಲ್ಲಿ ನಿರೀಕ್ಷೆ ಹೆಚ್ಚಾಗಿದ್ದು, ಯಾರಿಗೆಲ್ಲ ಮಂತ್ರಿಪಟ್ಟ ಒಲಿಯಲಿದೆ ಎಂಬುದು ನಾಳೆ ಅಂತಿಮವಾಗಲಿದೆ.
ಈ ನಡುವೆ ಸಚಿವಾಕಾಂಕ್ಷಿ ಹೆಚ್.ವಿಶ್ವನಾಥ್ಗೆ ಸಚಿವ ಸ್ಥಾನ ನೀಡಲಿದ್ದಾರಾ ಎಂಬುದು ಇನ್ನೂ ಗೌಪ್ಯವಾಗಿದ್ದು, ಈ ಹಿನ್ನೆಲೆ ವಿಶ್ವನಾಥ್ ಚಿಂತೆಗೀಡಾಗಿದ್ದಾರೆ. ಮೈಸೂರಿನ ವಿಜಯನಗರದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಏರ್ಪಡಿಸಿದ್ದ 'ರಾಮಕೃಷ್ಣ ಹೆಗಡೆ ಒಂದು ನೆನಪು' ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅವರು ಗಾಢ ಚಿಂತನೆಯಲ್ಲಿ ತೊಡಗಿರುವುದು ಕಂಡುಬಂತು.
ಇದೆಲ್ಲದರ ನಡುವೆ ನಾಳೆಯೇ ನೂತನ ಸಚಿವರ ಹೆಸರು ಪ್ರಕಟಿಸುವುದಾಗಿ ಬಿಎಸ್ವೈ ಹೇಳಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಸಂಪುಟ ಸೇರಲಿರುವ ಸಂಭಾವ್ಯ ಸಚಿವರ ಪಟ್ಟಿ ಇಂತಿದೆ!