ಮೈಸೂರು : ಕುರುಬರಿಗೆ ಎಸ್‌ಟಿ ಮೀಸಲಾತಿ ಸಿಗುವುದು ಸಿದ್ದರಾಮಯ್ಯರಿಗೆ ಇಷ್ಟವಿಲ್ಲವೆಂದು ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ತಿರುಗೇಟು ನೀಡಿದರು.
ಮೈಸೂರಿನಲ್ಲಿ ಕುರುಬರ ಎಸ್‌ಟಿ ಮೀಸಲಾತಿ ಹೋರಾಟದ ಹಿಂದೆ ಆರ್‌ಎಸ್‌ಎಸ್ ಕೈವಾಡ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕುರುಬರಿಗೆ ಎಸ್‌ಟಿ ಮೀಸಲಾತಿ ಸಿಗೋದು ಸಿದ್ದುಗೆ ಇಷ್ಟ ಇಲ್ಲ. ಅವರಿಗೆ ಮತ್ತೊಬ್ಬ ಕುರುಬ ನಾಯಕ ಬೆಳೆಯಲು ಇಷ್ಟವಿಲ್ಲ.
ಎಸ್‌ಟಿ ಮೀಸಲಾತಿ ಹೋರಾಟದಿಂದ ಈಶ್ವರಪ್ಪ ಲೀಡರ್ ಆಗ್ತಾರೆ. ಇದೇ ಸರ್ಕಾರದಲ್ಲಿ ಮೀಸಲಾತಿ ಸಿಕ್ಕಿದ್ರೆ ನನಗೆ ಕ್ರೆಡಿಟ್ ಸಿಗಲ್ಲ ಅನ್ನೋ ಆತಂಕ ಸಿದ್ದರಾಮಯ್ಯಗೆ ಇದೆ ಎಂದು ಕುಟುಕಿದರು. ರಾಜ್ಯ ರಾಜಕರಾಣದಲ್ಲಿ ಕುರುಬರಲ್ಲಿ ನಾನೇ ಲೀಡರ್ ಆಗಿರಬೇಕು ಅಂತಾ ಸಿದ್ದರಾಮಯ್ಯಗೆ ಇದೆ.
ಒಕ್ಕಲಿಗರಲ್ಲಿ ಮತ್ತೊಬ್ಬ ಒಕ್ಕಲಿಗ ನಾಯಕ ಬೆಳೆಯಬಾರದೆಂದು ಕುಮಾರಸ್ವಾಮಿ. ಇನ್ನೊಬ್ಬರು ನಮ್ಮಲ್ಲಿ ಇನ್ನೊಬ್ಬ ನಾಯಕ ಬೆಳೆಯಬಾರದೆಂದು. ಪರೋಕ್ಷವಾಗಿ ಲಿಂಗಾಯತರಲ್ಲಿ ಮತ್ತೊಬ್ಬ ಲಿಂಗಾಯತ ಬೆಳೆಯಬಾರದೆಂಬುದು ಬಿಎಸ್‌ವೈಗೆ ಇದು ಎಂದರು.
ಮಂಜುನಾಥ್ಗೆ ಈಗ ಜ್ಞಾನ ಬಂತಾ : ಹುಣಸೂರು ತಾಲೂಕನ್ನು ಜಿಲ್ಲೆ ಮಾಡುವಂತೆ ನಾನು ವರ್ಷದ ಹಿಂದೆ ಹೇಳಿದ್ದೆ. ಆದರೆ, ಶಾಸಕ ಹೆಚ್ ಪಿ ಮಂಜುನಾಥ್ಗೆ ಈಗ ಜ್ಞಾನೋದನವಾಯಿತೆ? ಎಂದು ಕುಟುಕಿದರು.