ಮೈಸೂರು: ಪ್ರತಿಯೊಬ್ಬ ಹಿರಿಯ ನಾಯಕರು ತಮ್ಮ ರಾಜಕೀಯ ಜೀವನದ ಘಟನಾವಳಿಗಳನ್ನು ಪುಸ್ತಕ ರೂಪದಲ್ಲಿ ತರುವುದು ಒಳ್ಳೆಯದು, ಆ ಮೂಲಕ ಮುಂದಿನ ಜನಾಂಗಕ್ಕೆ ಮಾರ್ಗದರ್ಶನ ನೀಡಿದಂತಾಗುತ್ತದೆ ಎಂದು ಎಸ್.ಎಂ. ಕೃಷ್ಣ ಜೀವನಾಧರಿತ ಪುಸ್ತಕದ ಬಗ್ಗೆ ಅನರ್ಹ ಶಾಸಕ ಹೆಚ್.ವಿಶ್ವನಾಥ್ ಹೇಳಿದ್ದಾರೆ.
ಈ ರಾಷ್ಟ್ರ ಕಂಡ ಹಿರಿಯ ರಾಜಕಾರಣಿ ಎಸ್.ಎಂ.ಕೃಷ್ಣ ಅವರು ತಮ್ಮ ಜೀವನದ ರಾಜಕೀಯ ಘಟನಾವಳಿಗಳ ಬಗ್ಗೆ ಜನವರಿ 4ರಂದು ಹೊರ ತರುತ್ತಿರುವ "ಸ್ಮೃತಿ ವಾಹಿನಿ" ಪುಸ್ತಕ ಬಿಡುಗಡೆ ಆಗುತ್ತಿರುವುದು ಸಂತೋಷ. ಎಲ್ಲಾ ಹಿರಿಯ ರಾಜಕಾರಣಿಗಳು ತಮ್ಮ ರಾಜಕೀಯ ಜೀವನದ ಘಟನಾವಳಿಗಳ ಬಗ್ಗೆ ಪುಸ್ತಕ ರೂಪದಲ್ಲಿ ತಂದರೆ ಒಳ್ಳೆಯದು ಎಂದಿದ್ದಾರೆ.
ನಾನು ಪತ್ರಿಕೆಯಲ್ಲಿ ನೋಡಿದಂತೆ ಎಸ್ ಆರ್ ಬೊಮ್ಮಾಯಿ, ಹೆಚ್.ಡಿ.ದೇವೇಗೌಡರು ಕಾಂಗ್ರೆಸ್ ಸೇರಲು ಪ್ರಯತ್ನಿಸಿದರು ಎಂಬ ವಿಚಾರದ ಬಗ್ಗೆ ನೋಡಿದ್ದೇನೆ. ಆದರೆ ದೇವೇಗೌಡರು ಕಾಂಗ್ರೆಸ್ ನವರೇ, ಕಾಂಗ್ರೆಸ್ ನಲ್ಲಿ ಟಿಕೆಟ್ ಸಿಗದ ಕಾರಣ ಹೊರಗೆ ಹೋಗಿ ಬೇರೆ ಪಕ್ಷದಿಂದ ನಿಂತರು ಎಂದು ಹೇಳಿದ್ದಾರೆ.