ETV Bharat / state

ಜೆಡಿಎಸ್‌ ರಾಜಕೀಯ ಪಕ್ಷವೇ ಅಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆ ಸಮರ್ಥಿಸಿದ ಜಿ ಟಿ ದೇವೇಗೌಡ..

author img

By

Published : Feb 2, 2021, 5:59 PM IST

Updated : Feb 2, 2021, 6:58 PM IST

ಜೆಡಿಎಸ್ ಸಿದ್ದಾಂತ ಹೊಂದಿದ್ದ ಪಕ್ಷ. ಜಯಪ್ರಕಾಶ್ ನಾರಾಯಣ್, ರಾಜಶೇಖರ ಮೂರ್ತಿ ಅಂತವರನ್ನ‌ ಕಂಡ ಪಕ್ಷ. ಆದರೆ, ಇತ್ತೀಚೆಗೆ ಪಕ್ಷವನ್ನ ಮುನ್ನಡೆಸುವವರ ಯಡವಟ್ಟಿನಿಂದ ಆ ರೀತಿ ಭಾವನೆ ಜನರಲ್ಲಿ ಬರುತ್ತದೆ..

GT Devegowda
ಜೆಡಿಎಸ್ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ಸಮರ್ಥಿಸಿಕೊಂಡ ಜಿ.ಟಿ.ದೇವೇಗೌಡ

ಮೈಸೂರು : ಜೆಡಿಎಸ್‌ ರಾಜಕೀಯ ಪಕ್ಷವೇ ಅಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆ‌ ಮಾಧ್ಯಮಗಳಿಗೆ ಪ್ರತಿಕ್ರಿಯೆ ಶಾಸಕ ಜಿ.ಟಿ.ದೇವೇಗೌಡ,'ಪಕ್ಷವನ್ನ ಮುನ್ನಡೆಸುವವರು ಯಡವಟ್ಟು ಮಾಡಿಕೊಂಡಾಗ ಆ ರೀತಿ ಭಾವನೆ ಬರುವುದು ಸಹಜ' ಎಂದು ಸಿದ್ದರಾಮಯ್ಯ ಹೇಳಿಕೆ ಸಮರ್ಥಿಸಿದರು.

ಜೆಡಿಎಸ್‌ ರಾಜಕೀಯ ಪಕ್ಷವೇ ಅಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆ ಸಮರ್ಥಿಸಿದ ಜಿ ಟಿ ದೇವೇಗೌಡ..

ಜೆಡಿಎಸ್ ಸಿದ್ದಾಂತ ಹೊಂದಿದ್ದ ಪಕ್ಷ. ಜಯಪ್ರಕಾಶ್ ನಾರಾಯಣ್, ರಾಜಶೇಖರ ಮೂರ್ತಿ ಅಂತವರನ್ನ‌ ಕಂಡ ಪಕ್ಷ. ಆದರೆ, ಇತ್ತೀಚೆಗೆ ಪಕ್ಷವನ್ನ ಮುನ್ನಡೆಸುವವರ ಯಡವಟ್ಟಿನಿಂದ ಆ ರೀತಿ ಭಾವನೆ ಜನರಲ್ಲಿ ಬರುತ್ತದೆ ಎಂದು ಕುಮಾರಸ್ವಾಮಿ ಅವರಿಗೆ ಟಾಂಗ್ ನೀಡಿದರು.

ಕೆ.ಆರ್.ನಗರದಲ್ಲಿ ಇಂದು ತಮ್ಮ ಪುತ್ರ ಜಿ.ಡಿ.ಹರೀಶ್ ಗೌಡ ಬಲ ಪ್ರದರ್ಶನ ವಿಚಾರ ಮಾತನಾಡಿ, ಹರೀಶ್ ‌ಗೌಡನ ತಾಯಿ ಊರು‌ ಕೆ.ಆರ್.ನಗರ, ಅವನು ಅಲ್ಲೇ ಹುಟ್ಟಿ ಬೆಳೆದದ್ದು. ಹೀಗಾಗಿ, ಅವನಿಗೆ ಕೆ.ಆರ್.ನಗರ ನಿಜವಾಗಿಯೂ ತವರೂರು.

ನಾನು‌ ಜಿಲ್ಲಾಧ್ಯಕ್ಷನಾಗಿದ್ದಾಗ, ಉಸ್ತುವಾರಿ ಸಚಿವನಾಗಿದ್ದಾಗ ಕೆ.ಆರ್.ನಗರ ಕ್ಷೇತ್ರದಲ್ಲಿ ಓಡಾಡಿದ್ದೇನೆ. ನನ್ನ ಮಗನನ್ನ ಅಪೆಕ್ಸ್ ಉಪಾಧ್ಯಕ್ಷರನ್ನಾಗಿ ಮಾಡಿ ಅಂತಾ ಯಾರನ್ನೂ‌ ಕೇಳಲಿಲ್ಲ. ಡಿಸಿಸಿ ಬ್ಯಾಂಕ್ ಅಧ್ಯಕ್ಷರನ್ನಾಗಿ ಮಾಡಿ‌ ಅಂತಲೂ ಕೇಳಿರಲಿಲ್ಲ. ಅವನ ಸೇವೆ ಮನೋಭಾವನೆ‌ ನೋಡಿ ಹಿರಿಯ ಸಹಕಾರಿಗಳೆಲ್ಲ ‌ಆಶೀರ್ವಾದ‌ ಮಾಡಿದ್ದಾರೆ ಎಂದರು.

ಓದಿ: ಜೆಡಿಎಸ್‌ ಪಕ್ಷ ದೇವೇಗೌಡ್ರ ಹಿಡಿತದಲ್ಲಿ ಇಲ್ಲ : ಹೆಚ್​ಡಿಕೆ ವಿರುದ್ಧ ಮುಂದುವರಿದ ಜಿ.ಟಿ.ಡಿ ಮುನಿಸು

ಅವನಿಗೆ ಇಂದು ಅಭಿನಂದನಾ ಕಾರ್ಯಕ್ರಮ ಇಟ್ಕೊಂಡಿದ್ದಾರೆ. ನನಗೆ ಯಾವುದೇ ಹಣ, ಅಧಿಕಾರದ ಮದ ಇಲ್ಲ. ಹಣದ ಅಧಿಕಾರದ‌‌ ಮದ ಇದ್ದವರಿಗೆ ತಲೆ ತಿರುಗುತ್ತೆ. ನಮಗೆ ಅವೆರಡೂ ಇಲ್ಲ. ಜನ ಸೇವೆಯೇ ನಮಗೆ ಮುಖ್ಯ ಎಂದು ಜಿ ಟಿ ದೇವೇಗೌಡ ಹೇಳಿದರು.

Last Updated : Feb 2, 2021, 6:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.