ಮೈಸೂರು: ಮದುವೆಯ ಹಿಂದಿನ ದಿನವೇ ವರನೊಬ್ಬ ತನ್ನ ಪ್ರೇಯಸಿಯ ಜತೆ ಪರಾರಿಯಾದ ಘಟನೆ ನಗರದಲ್ಲಿ ನಡೆದಿದೆ.
ಸುಣ್ಣದಕೇರಿ ನಿವಾಸಿ ಪುತ್ರಿಯಾದ ಮಧುವಿನ ವಿವಾಹವು ಇದೇ ಸುಣ್ಣದಕೇರಿಯ ತಾಂಡೇಶ್ ಮತ್ತು ಮೀನಾ ದಂಪತಿಯ ಪುತ್ರ ಉಮೇಶ್ ಎಂಬಾತನೊಂದಿಗೆ ನಿಶ್ಚಯವಾಗಿತ್ತು. ಎಲ್ಲಾ ಅಂದುಕೊಂಡ ಹಾಗೆ ನಡೆದಿದ್ದರೆ ಬುಧವಾರ ಮಧ್ಯಾಹ್ನ ಇವರಿಬ್ಬರ ವಿವಾಹ ಅದ್ಧೂರಿಯಾಗಿ ನಡೆಯಬೇಕಿತ್ತು. ಆದರೆ, ವರ ಮಂಗಳವಾರ ಬೆಳಗ್ಗೆಯೇ ತನ್ನ ಪ್ರೇಯಸಿಯೊಂದಿಗೆ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ನಿಗದಿಯಂತೆ ಡಿಸೆಂಬರ್ 8 ಮತ್ತು 9ರಂದು ಉಮೇಶ್ ಮದುವೆ ನಿಶ್ಚಯವಾಗಿತ್ತು. ಆದರೆ, ನಾಲ್ಕು ದಿನಗಳ ಹಿಂದೆ ವಧುವಿನ ಮನೆಯಲ್ಲಿ ಚಪ್ಪರ ಹಾಕುವಾಗ ಕುಟುಂಬಸ್ಥರಿಗೆ ಉಮೇಶ್ನ ಪ್ರೀತಿಯ ವಿಚಾರ ತಿಳಿಯಿತು. ವರ ಉಮೇಶ್, ತನ್ನ ಪ್ರೇಯಸಿಯ ಬಗ್ಗೆ ಬೇರೆಯದೇ ಕಥೆಕಟ್ಟಿ ವಧುವಿನ ಪೋಷಕರ ಮನವೋಲಿಸಿ ಮದುವೆಗೆ ಸಿದ್ಧತೆ ಮಾಡಿಕೊಳ್ಳುವಂತೆ ಹೇಳಿದ್ದ. ಈಗ ಅವನೇ ಪರಾರಿ ಆಗಿದ್ದಾನೆ.
ಲಾಕ್‌ಡೌನ್ ವೇಳೆ ವಿವಾಹ ನಿಶ್ಚಯವಾಗಿ ಮದುವೆ ಮಾತುಕತೆ ನಡೆದಿತ್ತು. ಜೂನ್14ರಂದು ಹೂ ಮುಡಿಸುವ ಶಾಸ್ತ್ರಕ್ಕೆ ಎಂದು ಮನೆಗೆ ಬಂದಿದ್ದ ಉಮೇಶ್ ಅವರ ಕುಟುಂಬಸ್ಥರು ಅಂದೇ ನಿಶ್ಚಿತಾರ್ಥ ಮಾಡಿದರು. ದೂರದ ಸಂಬಂಧಿ ಆಗಿದ್ದರಿಂದ ಆತನ ಬಗ್ಗೆ ಹೆಚ್ಚಾಗಿ ವಿಚಾರಿಸಲಿಲ್ಲ. ಮದುವೆಗೆ ನಾಲ್ಕು ದಿನ ಇರುವಾಗ ನನ್ನ ಮೊಬೈಲ್‌ಗೆ ಉಮೇಶ್ ಪ್ರೇಯಸಿ ಸಂದೇಶ ಕಳುಹಿಸಿ, ಫೋಟೋ ಹಂಚಿಕೊಂಡ ಬಳಿಕ ಅವರಿಬ್ಬರ ಪ್ರೀತಿ ವಿಚಾರ ಬೆಳಕಿಗೆ ಬಂತು ಎಂದು ವಧು ತಿಳಿಸಿದ್ದಾರೆ.
ಅಸ್ಸೋಂ ರೈಫಲ್ಸ್ ಭರ್ಜರಿ ಕಾರ್ಯಾಚರಣೆ: 167 ಕೋಟಿ ರೂ.ಗೂ ಅಧಿಕ ಮೌಲ್ಯದ ಡ್ರಗ್ಸ್ ವಶಕ್ಕೆ
ಉಮೇಶ್ ಜೊತೆಗೆ ತೆಗೆಸಿಕೊಂಡಿದ್ದ ಫೋಟೋಗಳನ್ನು ಕಳುಹಿಸಿದ ಲವರ್, 'ಈ ಮದುವೆ ನಡೆಯುವುದಿಲ್ಲ. ನೀವು ಈಗಲ್ಲೇ ಬಗ್ಗೆ ತೀರ್ಮಾನ ಮಾಡಿ ಎಂದಿದ್ದಾಳೆ'. ಈ ಬಳಿಕ ಉಮೇಶ್‌ನನ್ನು ಕರೆಸಿ ವಿಚಾರಿಸಿದಾಗ, ಆಕೆಯ ಬಗ್ಗೆಯೇ ಅವಹೇಳನಕಾರಿಯಾಗಿ ಮಾತನಾಡಿದ್ದ ಎಂದು ವಧು ಹೇಳಿದ್ದಾಳೆ.
'ಆಕೆ ಇದೇ ರೀತಿ ಐದಾರು ಜನರ ಜೊತೆ ಓಡಾಡಿದ್ದಾಳೆ. ಇದೊಂದು ಬೆದರಿಸುವ ತಂತ್ರವಾಗಿ 10 ಲಕ್ಷ ರೂ. ಕೇಳುತ್ತಿದ್ದಾಳೆ. ನೀವು ಇದರ ಬಗ್ಗೆ ತಲೆಕೆಡಿಸಿಕೊಳ್ಳದೆ ಮದುವೆಗೆ ಸಿದ್ಧತೆ ಮಾಡಿಕೊಳ್ಳಿ' ಅಂಥ ಉಮೇಶ್ ಹೇಳಿದೆ. ಅವನ ಮಾತು ಕೇಳಿ ನಾವೂ ಮದುವೆ ತಯಾರಿ ಮುಂದುವರೆಸಿದ್ದೆವು. ಮದುವೆ ಚಪ್ಪರದ ದಿನ ಉಮೇಶ್ ಆತನ ಪ್ರೇಯಸಿ ಜೊತೆ ಮದುವೆ ಆಗಿರುವುದು ತಿಳಿಯಿತು ಎಂದು ವಧುವಿನ ತಾಯಿ ಹೇಳಿದ್ದಾರೆ.
ಇದೀಗ ವಧುವಿನ ಪೋಷಕರು ಕಂಗಾಲಾಗಿದ್ದು, ವರ ಉಮೇಶ್ ವಿರುದ್ಧ ಕೆ.ಆರ್.ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.