ಮೈಸೂರು: ಫ್ರೀ ಕಾಶ್ಮೀರ್ ಪೋಸ್ಟರ್ ಪ್ರದರ್ಶಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನಿನ ತೀರ್ಪನ್ನು ಮೈಸೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಾಯ್ದಿರಿಸಿದೆ.
ಮೈಸೂರಲ್ಲಿ 'ಫ್ರೀ ಕಾಶ್ಮೀರ' ಫಲಕ ಪ್ರದರ್ಶಿಸಿದ್ದ ಯುವತಿ: ಪೊಲೀಸರಿಗೆ ಸಿಕ್ಕಿತು ಸುಳಿವು
ದೆಹಲಿಯ ಜೆಎನ್ಯು ವಿದ್ಯಾರ್ಥಿಗಳ ಮೇಲಿನ ಹಲ್ಲೆ ಖಂಡಿಸಿ ಜನವರಿ 8ರಂದು ಸಂಜೆ ಮಾನಸಗಂಗೋತ್ರಿ ಆವರಣದಲ್ಲಿ ವಿವಿಧ ಸಂಘಟನೆಗಳ ಸದಸ್ಯರು ನಡೆಸಿದ್ದ ಪ್ರತಿಭಟನೆ ವೇಳೆ, ಫ್ರೀ ಕಾಶ್ಮೀರ್ ಪೋಸ್ಟರ್ ಪ್ರದರ್ಶಿಸಿದ್ದ ಯುವತಿ ನಳಿನಿ ಪರ ವಕಾಲತ್ತು ವಹಿಸಲು ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ವಕೀಲ ಸಿ.ಎಸ್. ದ್ವಾರಕನಾಥ್ ತಂಡದ ಸದಸ್ಯರು ಮೈಸೂರಿನಲ್ಲಿ ನಳಿನಿ ಪರವಾಗಿ ವಾದ ಮಂಡಿಸಲು ಆಗಮಿಸಿದ್ದರು. ನಳಿನಿ ಪ್ರಕರಣದ ವಾದ-ಪ್ರತಿವಾದ ಮುಕ್ತಾಯವಾಗಿದ್ದು, ಜ.27ವರೆಗೆ ಜಾಮೀನು ಅರ್ಜಿ ತೀರ್ಪನ್ನು ನ್ಯಾಯಾಲಯ ಕಾಯ್ದಿರಿಸಿದೆ.
'ಫ್ರೀ ಕಾಶ್ಮೀರ್' ಪೋಸ್ಟರ್ ಪ್ರದರ್ಶಿಸಿದ ಪ್ರಕರಣ: ವಿಚಾರಣೆಗೆ ಹಾಜರಾಗಿ ಪ್ರಶ್ನೆಗಳಿಗೆ ಉತ್ತರಿಸಿದ ವಿದ್ಯಾರ್ಥಿನಿ
ಇಂದು ಮಧ್ಯಾಹ್ನ 3ಗಂಟೆಗೆ ಆರಂಭವಾದ ಅರ್ಜಿ ವಿಚಾರಣೆ ಸತತ ಎರಡು ಗಂಟೆಗಳ ಕಾಲ ವಾದ- ಪ್ರತಿವಾದವನ್ನು ವಕೀಲರು ಮಂಡಿಸಿದರು.