ETV Bharat / state

ಜಾನುವಾರುಗಳಿಗೂ ಬಂದಿದೆ ಉಚಿತ ಆ್ಯಂಬುಲೆನ್ಸ್ ವ್ಯವಸ್ಥೆ... ಹೇಗಿರಲಿದೆ ಗೊತ್ತಾ? - free ambulance system for Livestock

ಜಾನುವಾರುಗಳು ಆರೋಗ್ಯ ಸಮಸ್ಯೆಯಿಂದ ನರಳಿ-ನರಳಿ ಸಾವನ್ನಪ್ಪುತ್ತಿರುವ ಘಟನೆಗಳು ಹೆಚ್ಚಾದ ಹಿನ್ನೆಲೆಯಲ್ಲಿ, ಸರ್ಕಾರ ಜಾನುವಾರುಗಳಿಗಾಗಿ ಉಚಿತ ಆ್ಯಂಬುಲೆನ್ಸ್​ ವ್ಯವಸ್ಥೆ ಮಾಡಿದೆ.

free ambulance system  for  Livestock
ಜಾನುವಾರುಗಳಿಗೂ ಬಂದಿದೆ ಉಚಿತ ಆ್ಯಂಬುಲೆನ್ಸ್ ವ್ಯವಸ್ಥೆ
author img

By

Published : Sep 5, 2020, 9:46 PM IST

ಮೈಸೂರು: ಇನ್ಮುಂದೆ ಮೂಕ ಪ್ರಾಣಿಗಳು ಅನಾರೋಗ್ಯಕ್ಕೀಡಾದರೆ ಕೂಡಲೇ ಸ್ಥಳಕ್ಕೆ ಹೋಗಿ ಚಿಕಿತ್ಸೆ ನೀಡುವ ಜಾನುವಾರು ಆ್ಯಂಬುಲೆನ್ಸ್​ ಸೇವೆ ಆರಂಭವಾಗಿದ್ದು, ಸಚಿವ ಎಸ್.ಟಿ.ಸೋಮಶೇಖರ್ ಇದನ್ನು ಉದ್ಘಾಟಿಸಿದರು.

ಜಾನುವಾರುಗಳಿಗೂ ಬಂದಿದೆ ಉಚಿತ ಆ್ಯಂಬುಲೆನ್ಸ್ ವ್ಯವಸ್ಥೆ

ಮನುಷ್ಯನ ಆರೋಗ್ಯ ಕೆಟ್ಟರೆ ತಕ್ಷಣ ಆ್ಯಂಬುಲೆನ್ಸ್​ಗೆ ಕರೆ ಮಾಡಿದರೆ ಮನೆಯ ಹತ್ತಿರ ಬಂದು ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ. ಆದರೆ, ಜಾನುವಾರುಗಳು ಆರೋಗ್ಯ ಸಮಸ್ಯೆಯಿಂದ ನರಳಿ-ನರಳಿ ಸಾವನ್ನಪ್ಪುತ್ತಿರುವ ಘಟನೆಗಳು ಹೆಚ್ಚಾದ ಹಿನ್ನೆಲೆಯಲ್ಲಿ, ಸರ್ಕಾರ ಜಾನುವಾರುಗಳಿಗಾಗಿ ಉಚಿತ ಆ್ಯಂಬುಲೆನ್ಸ್​ ವ್ಯವಸ್ಥೆ ಮಾಡಿದೆ.

ಆ್ಯಂಬುಲೆನ್ಸ್​ನಲ್ಲಿ ಏನಿರುತ್ತದೆ : ಈ ಆ್ಯಂಬುಲೆನ್ಸ್​ನಲ್ಲಿ ಸ್ಯ್ಕಾನಿಂಗ್ ಮಷಿನ್​, ಲ್ಯಾಬರೇಟರಿ ಹಾಗೂ ಸ್ಥಳದಲ್ಲೇ ರಕ್ತ ಪರೀಕ್ಷೆ ಮಾಡಿ ಚಿಕಿತ್ಸೆ ಕೊಡುವ ವ್ಯವಸ್ಥೆ ಇದೆ. ಗರ್ಭಿಣಿ ಹಸುಗಳು ಕರು ಹಾಕಲು ತೊಂದರೆಯಾದರೆ, ಅಲ್ಲಿಗೆ ಹೋಗಿ ಚಿಕಿತ್ಸೆ ನೀಡುವ ವ್ಯವಸ್ಥೆ ಕೂಡ ಇದೆ. ಪ್ರಾಯೋಗಿಕವಾಗಿ 15 ಜಿಲ್ಲೆಗಳಲ್ಲಿ ಇದನ್ನು ಜಾರಿ ಮಾಡಲಾಗುತ್ತಿದ್ದು, ಈ ಆ್ಯಂಬುಲೆನ್ಸ್​ಗೆ 12 ಲಕ್ಷ ವೆಚ್ಚವಾಗುತ್ತಿದೆ ಎಂದು ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ. ರವಿಕುಮಾರ್ ಹೇಳಿದ್ದಾರೆ.

ಎಲ್ಲ ರೀತಿಯ ಸುಸಜ್ಜಿತ ಚಿಕಿತ್ಸಾ ವ್ಯವಸ್ಥೆಗಳನ್ನೊಳಗೊಂಡ ಆ್ಯಂಬುಲೆನ್ಸ್​ ಇದಾಗಿದ್ದು, 1962 ಸಂಖ್ಯೆಗೆ ಕರೆ ಮಾಡಿದರೆ ತಕ್ಷಣ ಮನೆ ಬಾಗಿಲಿಗೆ ಜಾನುವಾರು ಆ್ಯಂಬುಲೆನ್ಸ್ ಬರಲಿದೆ ಎಂದು ಪಶುಸಂಗೋಪನಾ ಇಲಾಖೆ ವೈದ್ಯ ಸುರೇಶ್ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.