ETV Bharat / state

ಕೊರೊನಾಗೆ ಹೆದರಿ ಶಿಕ್ಷಕ ಆತ್ಮಹತ್ಯೆ - ಕೊರೊನಾ ಸೋಂಕಿತ ಶಿಕ್ಷಕ ಆತ್ಮಹತ್ಯೆ

ಲೋಕೇಶ್ ಅವರ ಶವ ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಕೇರಳಾಪುರದ ಕಾವೇರಿ ನದಿಯಲ್ಲಿ ದೊರಕಿದೆ. ಕಳೆದ ಎರಡು ದಿನಗಳ ಹಿಂದೆ ತಲೆ ನೋವು ಕಾಣಿಸಿಕೊಂಡ ಕಾರಣ ಕೆ.ಆರ್. ನಗರ ಸರ್ಕಾರಿ ಆಸ್ಪತ್ರೆಯಲ್ಲಿ ಲೋಕೇಶ್ ಪರೀಕ್ಷೆ ಮಾಡಿಸಿದ್ದರು. ಪರೀಕ್ಷೆಯ ವರದಿಯಲ್ಲಿ ಕೋವಿಡ್ ಪಾಸಿಟಿವ್ ಬಂದಿತ್ತು. ಇದರಿಂದ ಮಾನಸಿಕವಾಗಿ ಕುಗ್ಗಿಹೋಗಿದ್ದರು.

fear-of-corona-teacher-committed-suicide
ಕೊರೊನಾಗೆ ಹೆದರಿ ಶಿಕ್ಷಕ ಆತ್ಮಹತ್ಯೆ
author img

By

Published : May 16, 2021, 8:54 PM IST

ಮೈಸೂರು: ಕೋವಿಡ್ ಪರೀಕ್ಷೆಯ ವರದಿ ಪಾಸಿಟಿವ್​​​ ಬಂದ ಕಾರಣ ಶಿಕ್ಷಕನೋರ್ವ ಹೆದರಿ ಮನೆ ಬಿಟ್ಟು ಹೋಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆ.ಆರ್.ನಗರ ತಾಲೂಕಿನ ಕೋಗಿಲೂರು ಗ್ರಾಮದಲ್ಲಿ ನಡೆದಿದೆ.

ತಾಲೂಕಿನ ಕೋಗಿಲೂರು ಗ್ರಾಮದ ಕೆ. ಎನ್. ಲೋಕೇಶ್ (30) ಮೃತ ಶಿಕ್ಷಕ. ಲೋಕೇಶ್ ಅವರ ಶವ ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಕೇರಳಾಪುರದ ಕಾವೇರಿ ನದಿಯಲ್ಲಿ ದೊರಕಿದೆ. ಕಳೆದ ಎರಡು ದಿನಗಳ ಹಿಂದೆ ತಲೆ ನೋವು ಕಾಣಿಸಿಕೊಂಡ ಕಾರಣ ಕೆ.ಆರ್. ನಗರ ಸರ್ಕಾರಿ ಆಸ್ಪತ್ರೆಯಲ್ಲಿ ಲೋಕೇಶ್ ಪರೀಕ್ಷೆ ಮಾಡಿಸಿದ್ದರು. ಪರೀಕ್ಷೆಯ ವರದಿಯಲ್ಲಿ ಕೋವಿಡ್ ಪಾಸಿಟಿವ್ ಬಂದಿತ್ತು. ಇದರಿಂದ ಮಾನಸಿಕವಾಗಿ ಕುಗ್ಗಿಹೋಗಿದ್ದರು.

ಬಳಿಕ ಕೋವಿಡ್ ಜಿಲ್ಲಾ ಆಸ್ಪತ್ರೆಯಿಂದ ಕರೆ ಮಾಡಿ ಔಷಧಿ ನೀಡಲಾಗುತ್ತದೆ ಹೆದರಬೇಡಿ, ಹೋಮ್​​ ಕ್ವಾರಂಟೈನ್ ಆಗಿ ಎಂದು ಮನವಿ ಮಾಡಲಾಗಿತ್ತು. ಆದರೂ ಸಮಧಾನಗೊಳ್ಳದ ಶಿಕ್ಷಕ ಅರಕಲಗೂಡು ತಾಲೂಕಿನ ಕೇರಳಾಪುರದ ಮಡದಿ ಮನೆಗೆ ತೆರಳಿ, ಮನೆ ಮುಂದೆ ಬೈಕ್ ನಿಲ್ಲಿಸಿ ಮೊಬೈಲ್ ಬಿಟ್ಟು ಕಣ್ಮರೆ ಆಗಿದ್ದರು. ಲೋಕೇಶ್ ಅವರನ್ನು ಎಲ್ಲಾ ಕಡೆ ಹುಡುಕಾಡಿದರು ಪತ್ತೆಯಾಗಿರಲಿಲ್ಲ. ಇಂದು ಕೇರಳಾಪುರ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಕಳೆದ ವರ್ಷವಷ್ಟೇ ಲೋಕೇಶ್​ಗೆ ವಿವಾಹವಾಗಿತ್ತು. ಸ್ಥಳಕ್ಕೆ ಕೊಣನೂರು ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.