ETV Bharat / state

ಮೈಸೂರು: ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ - ರೈತ ಆತ್ಮಹತ್ಯೆ

ಸಾಲಬಾಧೆ ತಾಳಲಾರದೆ ರೈತನೊಬ್ಬ ನೇಣು ಬಿಗಿದಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

sas
ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ
author img

By

Published : Sep 24, 2020, 1:51 PM IST

ಮೈಸೂರು: ರೈತನೊಬ್ಬ ಸಾಲಬಾಧೆ ತಾಳಲಾರದೆ ನೇಣಿಗೆ ಶರಣಾಗಿರುವ ಘಟನೆ ನಂಜನಗೂಡು ತಾಲೂಕಿನ ಮರಳೂರು ಗ್ರಾಮದಲ್ಲಿ ನಡೆದಿದೆ.

ನಿಂಗರಾಜು (60) ಮೃತ ರೈತ. ಈತ ತನ್ನ 3 ಎಕರೆ ಜಮೀನಿನಲ್ಲಿ ಹತ್ತಿ, ಜೋಳ ಹಾಗೂ ರಾಗಿ ಬೆಳೆಯುವುದಕ್ಕೆ ಸ್ವ ಸಹಾಯ ಸಂಘದಲ್ಲಿ 1 ಲಕ್ಷ ಸಾಲ ಹಾಗೂ 1.50 ಲಕ್ಷ ಕೈ ಸಾಲ ಮಾಡಿಕೊಂಡಿದ್ದ.

ಆದರೆ ಬೆಳೆ ಕೈ ಸೇರದೆ ಮಾಡಿದ ಸಾಲ ತೀರಿಸಲು ಆಗದೆ ತನ್ನ ಜಮೀನಿನಲ್ಲೇ ಮರವೊಂದಕ್ಕೆ ನೇಣಿಗೆ ಶರಣಾರಾಗಿದ್ದಾನೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ನಂಜನಗೂಡು ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.