ETV Bharat / state

ಅಪ್ಪು ಪುಣ್ಯಸ್ಮರಣೆ: ಮುಡಿಕೊಟ್ಟು, ಅನ್ನಸಂತರ್ಪಣೆ ಮಾಡಿದ ಅಭಿಮಾನಿಗಳು - ಹಳ್ಳಿದಿಡ್ಡಿ ಗ್ರಾಮದಲ್ಲಿ ಅಪ್ಪು ಪುಣ್ಯಸ್ಮರಣೆ

ಹಳ್ಳಿದಿಡ್ಡಿ ಗ್ರಾಮದಲ್ಲಿ ಅನ್ನ ಸಂತರ್ಪಣೆ ಮಾಡಿದ ಅಭಿಮಾನಿಗಳು ನೆಚ್ಚಿನ ನಟ ಪುನೀತ್ ರಾಜ್​ಕುಮಾರ್ ಅವರನ್ನು ನೆನೆದು ಭಾವುಕರಾದರು.

fans-tribute-to-puneeth-rajkumar-in-mysore
ಮುಡಿಕೊಟ್ಟು ಅಭಿಮಾನ ಮೆರೆದ ಅಭಿಮಾನಿ
author img

By

Published : Nov 16, 2021, 10:59 PM IST

ಮೈಸೂರು: ನಟ ಪುನೀತ್ ರಾಜ್‌ಕುಮಾರ್ ಅವರ ಅಗಲಿಕೆ ನೋವು ಅಭಿಮಾನಿಗಳಿಗೆ ಇಂದಿಗೂ ಅರಗಿಸಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ, ಇಂದಿಗೂ ತಮ್ಮ ನೆಚ್ಚಿನ ನಟನ ಪುಣ್ಯ ಸ್ಮರಣೆ ಮಾಡುತ್ತಲೇ ಇದ್ದಾರೆ. ಅದೇ ರೀತಿ ಜಿಲ್ಲೆಯಲ್ಲಿ ಅಭಿಮಾನಿಯೊಬ್ಬರು ಮುಡಿ ಕೊಟ್ಟು ಅಭಿಮಾನ ಮೆರೆದಿದ್ದಾರೆ.

ನಂಜನಗೂಡು ತಾಲೂಕಿನ ಹಳ್ಳಿದಿಡ್ಡಿ ಗ್ರಾಮದಲ್ಲಿ ನಟ ಪುನೀತ್ ಅವರ ಭಾವಚಿತ್ರದ ಮುಂದೆ ಅಭಿಮಾನಿಗಳು ಬಿರಿಯಾನಿ, ಹಣ್ಣು- ಹಂಪಲು, ತಿಂಡಿ ತಿನಿಸುಗಳನ್ನಿಟ್ಟು ಪೂಜೆ ಮಾಡಿ ಮೆರವಣಿಗೆ ಮಾಡಿದರು. ಅನಂತರ ಗ್ರಾಮದಲ್ಲಿ ಅನ್ನ ಸಂತರ್ಪಣೆ ಮಾಡಿದ ಅಭಿಮಾನಿಗಳು ನೆಚ್ಚಿನ ನಟ ಪುನೀತ್ ರಾಜ್​ಕುಮಾರ್ ನೆನೆದು ಭಾವುಕರಾದರು.

ಪುನೀತ್ ರಾಜ್​ಕುಮಾರ್ ನೇತ್ರದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಈ ಆದರ್ಶವನ್ನು ಪರಿಪಾಲಿಸಿರುವ ಅದೇಷ್ಟೋ ಅಭಿಮಾನಿಗಳು ತಮ್ಮ ಕಣ್ಣುಗಳ ದಾನಕ್ಕೆ ಮುಂದೆ ಬಂದಿದ್ದಾರೆ. ಇನ್ನು ಕೆಲವು ಅಭಿಮಾನಿಗಳು ಅನ್ನಸಂತರ್ಪಣೆ ಮಾಡಿ ಅಭಿಮಾನ ಮೆರೆದಿದ್ದಾರೆ.

ಇದನ್ನೂ ಓದಿ: ಪುನೀತ್ ರಾಜಕುಮಾರ್​​ಗೆ 'ಕರ್ನಾಟಕ ರತ್ನ': ಕನ್ನಡ ಇರುವಷ್ಟು ದಿನ ಅಪ್ಪು ಇರುತ್ತಾರೆ.. ಹೆಚ್​ಡಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.