ಮೈಸೂರು : ಕೆ.ಆರ್ ನಗರ ತಾಲೂಕಿನ ಸಾಲಿಗ್ರಾಮ ಹೋಬಳಿಯ ಸುತ್ತಮುತ್ತಲಿ ಗ್ರಾಮಗಳಲ್ಲಿ 2.3 ಸೆಕೆಂಡ್ ಭೂಮಿ ಕಂಪಿಸಿದ ಅನುಭವ ಆಗದ್ದು, ಜನ ಭಯಭೀತರಾಗಿ ಮನೆಯಿಂದ ಹೊರ ಬಂದಿದ್ದಾರೆ.
ಜಿಲ್ಲೆಯ ಕೆ.ಆರ್ ನಗರ ತಾಲೂಕಿನ ಸಾಲಿಗ್ರಾಮ ಭೇರ್ಯ ಹಾಗೂ ಚುಂಚನಕಟ್ಟೆಯ ಹಲವು ಗ್ರಾಮಗಳಲ್ಲಿ 2.3 ಸೆಕೆಂಡ್ ಭೂಮಿ ಕಂಪಿಸಿದ ಘಟನೆ ಸಂಜೆ 5.20 ರ ಸಮಯದಲ್ಲಿ ನಡೆದಿದೆ.
ಈ ಸಮಯದಲ್ಲಿ ಭಾರೀ ಶಬ್ದ ಕೇಳಿಸಿದ್ದು, ಇದರಿಂದ ಹೆದರಿದ ಗ್ರಾಮಸ್ಥರು ಮನೆಯಿಂದ ಗಾಬರಿಗೊಂಡು ಹೊರ ಬಂದು ಬೀದಿಯಲ್ಲಿ ನಿಂತುಕೊಂಡಿದ್ದು, ಈ ಬಗ್ಗೆ ತಜ್ಞರು ಪರಿಶೀಲನೆ ನಡೆಸಿದ್ದಾರೆ.