ETV Bharat / state

ರಾಯಲ್ ಎನ್​ಫೀಲ್ಡ್‌ ಬೈಕ್‌ ಖರೀದಿಗೆ ಪೋಷಕರ‌ ನಕಾರ: ಮೈಸೂರಿನಲ್ಲಿ ಎಂಜಿನಿಯರ್ ಆತ್ಮಹತ್ಯೆ - Engineer suicide in Mysore latest news

ರಾಯಲ್ ಎನ್​ಫೀಲ್ಡ್ ಬೈಕ್ ಖರೀದಿಗೆ ಪೋಷಕರು ನಿರಾಕರಿಸಿದ್ದರಿಂದ ಮನನೊಂದು ಸಾಫ್ಟ್​ವೇರ್ ಎಂಜಿನಿಯರ್ ಒಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.

Engineer suicide in Mysore
ಮೈಸೂರಿನಲ್ಲಿ ಎಂಜಿನಿಯರ್ ಆತ್ಮಹತ್ಯೆ
author img

By

Published : Jun 22, 2021, 9:50 AM IST

ಮೈಸೂರು: ರಾಯಲ್ ಎನ್​ಫೀಲ್ಡ್(RE) ಬೈಕ್ ಖರೀದಿಗೆ ಪೋಷಕರು ನಿರಾಕರಣೆ ಮಾಡಿದ ಹಿನ್ನೆಲೆಯಲ್ಲಿ ಬೇಸರಗೊಂಡ ಎಂಜಿನಿಯರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಕುವೆಂಪು ನಗರದ ನಿವಾಸಿ ಸಾಫ್ಟ್​ವೇರ್ ಎಂಜಿನಿಯರ್ ಅಜಯ್ (25) ಆತ್ಮಹತ್ಯೆ ಮಾಡಿಕೊಂಡವರು. ಬೆಂಗಳೂರಿನ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ಇವರು, ಲಾಕ್‌ಡೌನ್‌ ಹಿನ್ನೆಲೆಯಲ್ಲಿ ವರ್ಕ್‌ ಫ್ರಂ ಹೋಂ ಮಾಡುತ್ತಿದ್ದರು.

RE ಬೈಕ್‌ ಖರೀದಿ ಬಗ್ಗೆ ಪೋಷಕರ ಬಳಿ ಪ್ರಸ್ತಾಪ ಮಾಡಿದ್ದಾಗ, ಸದ್ಯಕ್ಕೆ ಬೇಡ, ಸ್ವಲ್ಪ ದಿನ ಕಾಯಲು ಹೇಳಿದ್ದಾರೆ. ಇದಕ್ಕೆ ನೊಂದುಕೊಂಡ ಅಜಯ್ ತನ್ನ ರೂಂನಲ್ಲಿ ನೇಣು ಬಿಗಿದುಕೊಂಡು ಸಾವಿನ ಮನೆ ಸೇರಿದ್ದಾರೆ.

ಈ ಸಂಬಂಧ ಕುವೆಂಪು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.