ETV Bharat / state

ದೇಶದಲ್ಲೇ ಮೊದಲ ಬಾರಿಗೆ ಮೈಸೂರಿನಲ್ಲಿ ತೃತೀಯ ಲಿಂಗಿಗಳಿಗೆ ಇ -ಶ್ರಮ್ ಕಾರ್ಡ್ ವಿತರಣೆ - ದೇಶದಲ್ಲೇ ಮೊದಲ ಬಾರಿಗೆ ಮೈಸೂರಿನಲ್ಲಿ ತೃತೀಯ ಲಿಂಗಿಗಳಿಗೆ ಇ-ಶ್ರಮ್ ಕಾರ್ಡ್ ವಿತರಣೆ

ಮೈಸೂರು ನಗರದ ಸರಸ್ವತಿಪುರಂನ ತೃತೀಯ ಲಿಂಗಿಗಳ ಕಚೇರಿಯಲ್ಲಿ ದೇಶದಲ್ಲೇ ಮೊದಲ ಬಾರಿಗೆ ತೃತೀಯ ಲಿಂಗಿಗಳಿಗೆ ಇ-ಶ್ರಮ್ ಕಾರ್ಡ್ ವಿತರಣೆ ಮಾಡಲಾಗುತ್ತಿದೆ.

ಮೈಸೂರಿನಲ್ಲಿ ತೃತೀಯ ಲಿಂಗಿಗಳಿಗೆ ಇ-ಶ್ರಮ್ ಕಾರ್ಡ್ ವಿತರಣೆ

author img

By

Published : Dec 24, 2021, 4:29 PM IST

Updated : Dec 24, 2021, 4:43 PM IST

ಮೈಸೂರು: ದೇಶದಲ್ಲೇ ಮೊದಲ ಬಾರಿಗೆ ಮೈಸೂರಿನಲ್ಲಿ ಕೇಂದ್ರ ಸರ್ಕಾರದ ಯೋಜನೆಗಳಲ್ಲಿ ಒಂದಾದ ಇ-ಶ್ರಮ್ ಕಾರ್ಡ್ ನ್ನು ತೃತೀಯ ಲಿಂಗಿಗಳಿಗೆ ವಿತರಣೆ ಮಾಡಲಾಗುತ್ತಿದೆ.

ಕೇಂದ್ರ ಮತ್ತು ಜಿಲ್ಲಾ ಕಾರ್ಮಿಕ ಇಲಾಖೆ ಹಾಗೂ ಟ್ವಿನ್ಸ್ ಸಿಎಸ್‌ಸಿ ಡಿಜಿಟಲ್ ಸೇವಾ ಕೇಂದ್ರದಿಂದ ತೃತೀಯ ಲಿಂಗಿಗಳಿಗೆ ಇ-ಶ್ರಮ್ ಕಾರ್ಡ್​ನ್ನು, ನಗರದ ಸರಸ್ವತಿಪುರ‌ಂನ ತೃತೀಯ ಲಿಂಗಿಗಳ ಕಚೇರಿಯಲ್ಲೆ ವಿತರಿಸಲಾಯಿತು.

ಮೈಸೂರಿನಲ್ಲಿ ತೃತೀಯ ಲಿಂಗಿಗಳಿಗೆ ಇ-ಶ್ರಮ್ ಕಾರ್ಡ್ ವಿತರಣೆ

ಈ ಕಾರ್ಡ್ ನಿಂದ ಕೇಂದ್ರ ಸರ್ಕಾರದ ಯೋಜನೆಗಳಾದ ಸಾಮಾಜಿಕ ಭದ್ರತೆ ಹಾಗೂ ಕಲ್ಯಾಣ ಯೋಜನೆಗಳನ್ನ ಹಾಗೂ ಪ್ರಧಾನ ಮಂತ್ರಿಗಳ ಶ್ರಮಯೋಗಿ ಮಾನ್ ಧನ್ ಯೋಜನೆ, ಸ್ವಯಂ ಉದ್ಯೋಗಿಗಳಿಗೆ ರಾಷ್ಟ್ರೀಯ ಪಿಂಚಣಿ ಯೋಜನೆ, ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಯೋಜನೆ ಸೇರಿದಂತೆ ಹಲವಾರು ಯೋಜನೆಗಳನ್ನ ಇ-ಶ್ರಮ್ ಕಾರ್ಡ್ ಮೂಲಕ ಪಡೆಯ ಬಹುದಾಗಿದೆ‌ ಎಂದು ಟ್ವಿನ್ಸ್ ಸಿಎಸ್‌ಸಿ ಡಿಜಿಟಲ್ ಸೇವಾ ಕೇಂದ್ರದ ಮುಖ್ಯಸ್ಥೆ ಯಶೋಧ ವಿವರಿಸಿದ್ದಾರೆ.

ಈ ಕಾರ್ಡ್ ವ್ಯಾಪ್ತಿಯಲ್ಲಿ ಕಟ್ಟಡ ಮತ್ತು ಇತರ ನಿರ್ಮಾಣ, ಕೃಷಿ, ಮೀನುಗಾರಿಕೆ, ಅಸಂಘಟಿತ ಕಾರ್ಮಿಕರು, ಮನೆ ಕೆಲಸದವರು, ಚಾಲಕರು, ಬೀದಿ ಬದಿ ವ್ಯಾಪರಿಗಳು ಸೇರಿದಂತೆ 156 ಅಸಂಘಟಿತ ವರ್ಗದ ಕಾರ್ಮಿಕರು ಇ-ಶ್ರಮ್ ಕಾರ್ಡ್ ನಲ್ಲಿ ನೋಂದಣಿ ಮಾಡಿಸಿಕೊಳ್ಳಬಹುದಾಗಿದ್ದು, ಇ-ಶ್ರಮ್ ಕಾರ್ಡ್ ನೋಂದಣಿ ಮಾಡಿಸಿಕೊಳ್ಳಲು ಫೋನ್ ನಂಬರ್, ಆಧಾರ್ ನಂಬರ್, ಬ್ಯಾಂಕ್ ಅಕೌಂಟ್ ನಂಬರ್ ಇದ್ದರೆ, ಸ್ಥಳದಲ್ಲಿ ಇ-ಶ್ರಮ್ ಕಾರ್ಡ್ ಸೀಗಲಿದೆ.

ದೇಶದಲ್ಲೇ ಮೊದಲ ಬಾರಿಗೆ ಮೈಸೂರಿನಲ್ಲಿ ತೃತೀಯ ಲಿಂಗಿಗಳಿಗೆ ಇ-ಶ್ರಮ್ ಕಾರ್ಡ್ ಅನ್ನು ಮಾಡಿಕೊಡುವ ಮೂಲಕ ತೃತೀಯ ಲಿಂಗಿಗಳಿಗೆ ಕೇಂದ್ರ ಸರ್ಕಾರದ ಹಲವಾರು ಯೋಜನೆಗಳ ಪ್ರಯೋಜನ ಸಿಗುವಂತೆ ಮಾಡಿದ್ದು ತುಂಬಾ ಒಳ್ಳೆಯದು ಎಂದು ಇ-ಶ್ರಮ್ ಕಾರ್ಡ್ ಪಡೆದ ತೃತೀಯ ಲಿಂಗಿ ಮಧು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.

Last Updated : Dec 24, 2021, 4:43 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.