ಮೈಸೂರು: ದೀಪಾವಳಿ ಹಬ್ಬದ ಹಿನ್ನೆಲೆ ಜಿಲ್ಲೆಯಲ್ಲಿ ಗೋಮೂತ್ರ ಹಾಗೂ ಸಗಣಿಯಿಂದ ಹಣತೆ ತಯಾರಿಸುವ ಮೂಲಕ ಸ್ವದೇಶಿ ಉದ್ಯೋಗಕ್ಕೆ ಒತ್ತು ನೀಡಲಾಗಿದೆ.
ಪ್ರಗತಿ ಪ್ರತಿಷ್ಠಾನ ಎನ್.ಜಿ.ಓ ಸಂಸ್ಥೆಯಿಂದ ಗೋವಿನ ಸಗಣಿ ಮತ್ತು ಗೋಮೂತ್ರದಿಂದ ವಿಶಿಷ್ಟ ಹಣತೆಗಳನ್ನು ತಯಾರಿಸಲಾಗಿದ್ದು, ವಿವಿಧ ಬಣ್ಣ ಹಾಗೂ ವಿನ್ಯಾಸದಲ್ಲಿ ದೀಪಗಳು ಆಕರ್ಷಿಸುತ್ತಿವೆ.
ಪಟಾಕಿ ತ್ಯಜಿಸಿ ಪರಿಸರ ಸಂರಕ್ಷಿಸುವ ಉದ್ದೇಶದಿಂದ ಹಾಗೂ ಆತ್ಮನಿರ್ಭರ ಭಾರತ್ ಅಡಿಯಲ್ಲಿ ಸಾವಿರಾರು ಸ್ವದೇಶಿ ಹಣತೆಗಳನ್ನು ತಯಾರಿಸಲಾಗಿದೆ. ಇದೀಗ ದೀಪಾವಳಿ ಹಬ್ಬದ ಪ್ರಯುಕ್ತ ದೀಪಕ್ಕೆ ಹೆಚ್ಚಿನ ಬೇಡಿಕೆ ಕೇಳಿಬರುತ್ತಿದೆ. ಸ್ಥಳೀಯ ಮಹಿಳೆಯರಿಗೆ ಉದ್ಯೋಗ ನೀಡಿ ಸ್ವದೇಶಿ ಹಾಗೂ ಪರಿಸರ ಸ್ನೇಹಿ ವಸ್ತುಗಳ ತಯಾರಿಕೆಗೆ ಪ್ರಗತಿ ಪ್ರತಿಷ್ಠಾನ ಮುಂದಾಗಿದೆ.