ETV Bharat / state

ದಿಶಾ ರವಿ ಬಂಧನ ಕಾನೂನು ಬಾಹಿರ : ದೆಹಲಿ ಪೊಲೀಸರ ನಡೆಗೆ ಬಡಗಲಪುರ ನಾಗೇಂದ್ರ ಕಿಡಿ - Badagalapura Nagendra reaction

ಇದು ಮಾನವ ಹಕ್ಕುಗಳು ದಮನವಾಗಿವೆ. ದೇಶದ ರೈತರು, ದಲಿತರು, ಕಾರ್ಮಿಕರು, ಯುವಕರಿಂದ ಸರ್ಕಾರಕ್ಕೆ ಛೀಮಾರಿ ಹಾಕಲಾಗುವುದು ಎಂದು ಬಡಗಲಪುರ ನಾಗೇಂದ್ರ ಗುಡುಗಿದರು..

Badagalapura Nagendra
ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ
author img

By

Published : Feb 17, 2021, 7:10 PM IST

ಮೈಸೂರು : ಪರಿಸರ ಹೋರಾಟಗಾರ್ತಿ ದಿಶಾ ರವಿ ಬಂಧನ ಕಾನೂನು ಬಾಹಿರ ಕ್ರಮ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರಾ ಆಕ್ರೋಶ ವ್ಯಕ್ತಪಡಿಸಿದರು.

ದಿಶಾ ರವಿ ಬಂಧನ ಖಂಡಿಸಿದ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ..

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸುಪ್ರೀಂಕೋರ್ಟ್ ಪೊಲೀಸ್ ಮ್ಯಾನ್ಯುಯಲ್ ಪ್ರಕಾರ ಕಾನೂನು ಬಾಹಿರವಾಗಿದೆ. 21 ವರ್ಷದ ಯುವತಿಯನ್ನು ರಾಷ್ಟ್ರದ್ರೋಹಿ ಎಂದು ಚಿತ್ರಿಸಿ ಬಂಧನ ಮಾಡಿರುವ ದೆಹಲಿ ಪೊಲೀಸರ ಕ್ರಮ ಖಂಡನೀಯ.

ಮುಂಬೈನಲ್ಲಿ ವಕೀಲರನ್ನು ಬಂಧಿಸಲಾಗುತ್ತಿದೆ. ಸರ್ಕಾರ ಏನು ಅಂತಾ ತಿಳಿದುಕೊಂಡಿದೆ. ಸರ್ವಾಧಿಕಾರಿ ಆಡಳಿತ ಸ್ಥಾಪಿಸಲು ಹೊರಟಿದೆಯಾ? ಎಂದು ಪ್ರಶ್ನಿಸಿದರು. ಕೇಂದ್ರ ಸರ್ಕಾರ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದೆ. ಸಂವಿಧಾನವನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ. ಪೊಲೀಸ್ ವ್ಯವಸ್ಥೆ ದುರ್ಬಳಕೆ ಮಾಡಿಕೊಳ್ಳುತ್ತಿದೆ.

ರಾಷ್ಟ್ರಪ್ರೇಮಿಗಳನ್ನು ರಾಷ್ಟ್ರದ್ರೋಹಿ ರೀತಿ ಚಿತ್ರಿಸಲಾಗುತ್ತಿದೆ. ಕಾನೂನು ಬಾಹಿರವಾಗಿ ಕರೆದುಕೊಂಡು ಹೋಗಲಾಗುತ್ತಿದೆ. ವಿಚಾರಣೆ ಇಲ್ಲದೆ ಕೈದಿಗಳನ್ನಾಗಿ ಮಾಡುತ್ತಿರುವುದು ಒಳ್ಳೆಯ ನಡೆ ಅಲ್ಲ.

ಭಾರತ ಬೇರೆ ದೇಶಗಳ ಮುಂದೆ ತಲೆ ತಗ್ಗಿಸುವಂತೆ ಮಾಡಿದೆ. ಈ ಕೂಡಲೇ ದಿಶಾ ರವಿ ಬಿಡುಗಡೆ ಮಾಡಬೇಕು. ಇಲ್ಲವಾದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು‌.

ಇದು ಮಾನವ ಹಕ್ಕುಗಳು ದಮನವಾಗಿವೆ. ದೇಶದ ರೈತರು, ದಲಿತರು, ಕಾರ್ಮಿಕರು, ಯುವಕರಿಂದ ಸರ್ಕಾರಕ್ಕೆ ಛೀಮಾರಿ ಹಾಕಲಾಗುವುದು ಎಂದು ಬಡಗಲಪುರ ನಾಗೇಂದ್ರ ಗುಡುಗಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.