ಮೈಸೂರು : ಮಾಜಿ ಮುಖ್ಯಮಂತ್ರಿ ದಿವಂಗತ ಧರಂಸಿಂಗ್ ಅವರ ಮೊಮ್ಮಗಳು ಆಮ್ ಆದ್ಮಿ ಪಾರ್ಟಿ(ಎಪಿಪಿ) ಸೇರ್ಪಡೆಗೊಂಡಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಭವನದಲ್ಲಿ ಅವರು ಇಂದು ಆಪ್ ಸೇರ್ಪಡೆಯಾಗಿದ್ದಾರೆ.
ಕಾನೂನು ಪದವೀಧರೆಯಾಗಿರುವ ಧರ್ಮಶ್ರೀ ಅವರು, ಆಮ್ ಆದ್ಮಿ ಪಾರ್ಟಿಯ ಪಾರದರ್ಶಕ ಆಡಳಿತ, ಜನಪರ ಯೋಜನೆಗೆ ಮೆಚ್ಚುಗೆ ವ್ಯಕ್ತಪಡಿಸಿ ಪಕ್ಷ ಸೇರ್ಪಡೆಗೊಂಡಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ನೇತೃತ್ವದಲ್ಲಿ ಪಕ್ಷ ಸೇರ್ಪಡೆಯಾಗಿದ್ದು, ಈ ವೇಳೆ ಅವರಿಗೆ ಟೋಪಿ ಹಾಗೂ ಶಾಲು ಹಾಕಿ ಪಕ್ಷಕ್ಕೆ ಸ್ವಾಗತ ಕೋರಲಾಯಿತು.
ಓದಿ: ಸೋಲಾರ್ ಪವರ್ ಪ್ರಾಜೆಕ್ಟ್ನಲ್ಲಿ ಆಕಸ್ಮಿಕ ಬೆಂಕಿ : ಲಕ್ಷಾಂತರ ರೂ. ಮೌಲ್ಯದ ಪರಿಕರಗಳು ಭಸ್ಮ