ಮೈಸೂರು : ನನ್ನ ಪಠ್ಯವನ್ನ ಪಠ್ಯ ಪುಸ್ತಕದಲ್ಲಿ ಈಗಾಗಲೇ ಸೇರಿಸಿದ್ದರೆ ನಾನೇನು ಮಾಡಲಾಗುವುದಿಲ್ಲ. ಆದರೆ, ಪಠ್ಯದಲ್ಲಿರುವ ನನ್ನ ಪಾಠವನ್ನು ಬೋಧಿಸಬೇಡಿ ಎಂದು ಹಿರಿಯ ಸಾಹಿತಿ ದೇವನೂರು ಮಹಾದೇವ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪಠ್ಯಪುಸ್ತಕದಿಂದ ನನ್ನ ಪಾಠವನ್ನು ಕೈಬಿಡಬೇಕು. ನನ್ನ ಪಠ್ಯವನ್ನು ಪುಸ್ತಕದಲ್ಲಿ ಸೇರಿಸಲು ಯಾವುದೇ ಕಾರಣಕ್ಕೂ ನಾನು ಅನುಮತಿ ನೀಡುವುದಿಲ್ಲ. ಈ ಹಿಂದೆ ಸೇರಿಸಿದ ಪಠ್ಯಕ್ಕೂ ಕೂಡ ನನ್ನ ಅನುಮತಿಯನ್ನು ವಾಪಸ್ ಪಡೆದಿದ್ದೇನೆ ಎಂದಿದ್ದಾರೆ.
ಸರ್ಕಾರ ಈಗಾಗಲೇ ಪುಸ್ತಕವನ್ನು ಮುದ್ರಣ ಮಾಡಿಸಿದ್ರೆ ಅದು ಸರ್ಕಾರದ ತಪ್ಪು. ಅದಕ್ಕೆ ನಾನು ಏನೂ ಮಾಡಲು ಸಾಧ್ಯವಿಲ್ಲ. ಅದರಲ್ಲಿರುವ ನನ್ನ ಪಠ್ಯವನ್ನು ಬೋಧಿಸಬೇಡಿ ಎಂದು ಉಲ್ಲೇಖಿಸಲಿ ಎಂದು ಹೇಳಿದ್ದಾರೆ.
ಓದಿ: ಬಸ್ ನಿಲ್ದಾಣಗಳಲ್ಲಿ ಕನ್ನಡದ ಕವಿ-ಕಾವ್ಯಗಳನ್ನು ಪರಿಚಯಿಸಿ ; ಬಿಎಂಟಿಸಿಗೆ 'ಕಅಪ್ರಾ' ಸಲಹೆ..