ಮೈಸೂರು: ಸರಳ ದಸರಾ - 2020ರ ಜಂಬೂ ಸವಾರಿ ಮೆರವಣಿಗೆಯಲ್ಲಿ ಈ ಬಾರಿ ಕೇವಲ 300 ಮಂದಿಗೆ ಅವಕಾಶ ಕಲ್ಪಿಸಲಾಗಿದ್ದು, ಅರಮನೆ ಒಳಗೆ ಕೇವಲ 500 ಮೀಟರ್ ಮೆರವಣಿಗೆಗೆ ಕಲಾ ತಂಡಗಳು ಮತ್ತು ಸ್ತಬ್ಧಚಿತ್ರಗಳ ಭಾಗವಹಿಸುವ ವಿವರ ಇಲ್ಲಿದೆ.
ಮೆರವಣಿಗೆಯಲ್ಲಿ ಈ ಬಾರಿ ಕೃಷ್ಣಮೂರ್ತಿಯ ತಂಡ ಹಾಗೂ ಪುಟ್ಟಸ್ವಾಮಿಯ ತಂಡ ನಾದಸ್ವರ. ಚಂಡೆ ಮೇಳ ಶ್ರೀನಿವಾಸ್ ರಾವ್ರ ತಂಡ. ಮರದ ಕಾಲುವೇಷ ಸಿದ್ದರಾಜು ಮತ್ತು ತಂಡ. ವೀರಗಾಸೆ ರಾಜಪ್ಪರ ತಂಡ. ಚಿಲಿಪಿಲಿ ಗೊಂಬೆ ಟಿ.ಕೆ.ರಾಜಶೇಖರ ತಂಡ ನಡೆಸಲಿದೆ.
ಆರೋಗ್ಯ ಇಲಾಖೆ ಸ್ತಬ್ಧಚಿತ್ರ, ಆನೆ ಬಂಡಿಯಲ್ಲಿ ಕರ್ನಾಟಕ ಪೋಲಿಸ್ ಬ್ಯಾಂಡ್, ಪೊಲೀಸ್ ಅಶ್ವದಳ ಪ್ರಧಾನ ದಳಪತಿ, ಕೆ.ಎ.ಆರ್.ಪಿ. ಮೌಂಟೇನ್ ಕಂಪನಿ ಮೈಸೂರು, ಪಟ್ಟದ ನಾದಸ್ವರ ಪೋಲಿಸ್ ಅಶ್ವದಳ - ಕೆ.ಎ.ಆರ್.ಪಿ. ಮೌಟೆಂನ್ ಕಂಪನಿ ಮೈಸೂರು, ಫಿರಂಗಿ ಗಾಡಿ ಅರಣ್ಯ ಇಲಾಖೆಯ ವೈದ್ಯರ ತಂಡ, ಅಗ್ನಿಶಾಮಕ ತಂಡ ತುರ್ತು ಚಿಕಿತ್ಸಾ ವಾಹನ. ಇದರ ಜೊತೆಗೆ ಗಜಪಡೆಯಲ್ಲಿ ಅಭಿಮನ್ಯು ಆನೆಯ ಮೇಲೆ ಚಿನ್ನದ ಅಂಬಾರಿಯಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಯ ಮೂರ್ತಿಗೆ ಗಣ್ಯರಿಂದ ಪುಷ್ಪಾರ್ಚನೆ ನಡೆಯಲಿದೆ.
ಇದಿಷ್ಟು ಸರಳ ಮತ್ತು ಸಾಂಪ್ರದಾಯಿಕ ದಸರಾದ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಕಲಾತಂಡಗಳು ಮತ್ತು ಸ್ತಬ್ಧಚಿತ್ರಗಳ ವಿವರಣೆಯಾಗಿದೆ.