ಮೈಸೂರು: ನಗರದಲ್ಲಿ ಇಂದಿನಿಂದ ನೈಟ್ ಕರ್ಫ್ಯೂ ಜಾರಿಯಲ್ಲಿರುತ್ತದೆ. ಅನವಶ್ಯಕವಾಗಿ ಓಡಾಡಿದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ನಗರ ಕಾನೂನು ಸುವ್ಯವಸ್ಥೆ ಡಿಸಿಪಿ ಪ್ರಕಾಶ್ ಗೌಡ ತಿಳಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ನಗರ ಕಾನೂನು ಸುವ್ಯವಸ್ಥೆ ಡಿಸಿಪಿ ಡಾ. ಪ್ರಕಾಶ್‌ಗೌಡ, ಇಂದು ರಾತ್ರಿ 10 ಗಂಟೆಯಿಂದ ಮೈಸೂರು ನಗರದಲ್ಲಿ ನೈಟ್ ಕರ್ಫ್ಯೂ ಜಾರಿಯಲ್ಲಿರುತ್ತದೆ. ಅನವಶ್ಯಕವಾಗಿ ಓಡಾಡಿದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಪೊಲೀಸರು ರಾತ್ರಿ ವೇಳೆ ನಗರದಲ್ಲಿ ಗಸ್ತಿನಲ್ಲಿರುತ್ತಾರೆ ಎಂದರು.
ಪ್ರಮುಖ ರಸ್ತೆಗಳನ್ನು ಬ್ಯಾರಿಕೇಡ್ ಹಾಕಲಾಗುತ್ತದೆ. ಪೊಲೀಸರ ತಪಾಸಣೆ ಇರುತ್ತದೆ. ತುರ್ತು ಸೇವೆಗಳಿಗೆ ಮಾತ್ರ ಅವಕಾಶವಿರುತ್ತದೆ. 100 ಜನ ಹೋಂ ಗಾರ್ಡ್ಗಳನ್ನು ಬಳಸಿಕೊಳ್ಳುತ್ತೇವೆ. ಮಾಸ್ಕ್ ತಪಾಸಣೆ ನಡೆಸಲಾಗುವುದು. ಸಾಧ್ಯವಾದಷ್ಟು ಅನವಶ್ಯಕ ಓಡಾಟಗಳನ್ನು ಕಡಿಮೆ ಮಾಡಬೇಕು ಎಂದು ಪ್ರಕಾಶ್ ಗೌಡ ತಿಳಿಸಿದರು.