ETV Bharat / state

Cauvery water issue: CWMA ಸಭೆ ನಿರ್ಧಾರದ ಬಗ್ಗೆ ಸಿಎಂ, ಕಾನೂನು ತಜ್ಞರ ಬಳಿ ಚರ್ಚೆ; ಡಿಸಿಎಂ ಡಿಕೆಶಿ

ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯದ ಹಿತಕ್ಕೆ ಧಕ್ಕೆ ಬಾರದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ ಎಂದು ಉಪಮುಖ್ಯ ಡಿ.ಕೆ ಶಿವಕುಮಾರ್​ ಹೇಳಿದರು.

ಉಪಮುಖ್ಯಮಂತ್ರಿ  ಡಿ.ಕೆ. ಶಿವಕುಮಾರ್
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
author img

By ETV Bharat Karnataka Team

Published : Aug 29, 2023, 11:00 PM IST

ಕಾವೇರಿ ನೀರಿನ ವಿಚಾರದ ಬಗ್ಗೆ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಮೈಸೂರು : 5 ಸಾವಿರ ಕ್ಯೂಸೆಕ್​ ನೀರು ಹರಿಯಬೇಕು ಎಂಬ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸಭೆಯ ನಿರ್ಧಾರದ ಬಗ್ಗೆ ಸಿಎಂ ಸಿದ್ದರಾಮಯ್ಯ ಮತ್ತು ಕಾನೂನು ತಜ್ಞರ ಬಳಿ ಚರ್ಚೆ ನಡೆಸುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಎಂ, ಬಿಳಿಗುಂಡ್ಲುವಿಗೆ 5 ಸಾವಿರ ಕ್ಯೂಸೆಕ್ಸ್ ನೀರು ಹರಿಯಬೇಕು ಎಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಈ ವಿಚಾರದಲ್ಲಿ ನಾವು ತೀವ್ರವಾಗಿ ಹೋರಾಟ ಮಾಡಿದ್ದೇವೆ. ನಮ್ಮ ತಾಂತ್ರಿಕ ಸಿಬ್ಬಂದಿ ಹಾಗೂ ಸಮಿತಿಯಲ್ಲಿ ಇರುವ ಅಧಿಕಾರಿಗಳು ಕಾವೇರಿ ನೀರಿನ ಪರಿಸ್ಥಿತಿಯನ್ನು ಮನವರಿಕೆ ಮಾಡಿದ್ದಾರೆ. ಈ ವಿಚಾರವಾಗಿ ಕೂಡಲೇ ನಾನು ಹಾಗೂ ಮುಖ್ಯಮಂತ್ರಿಗಳು ಕಾನೂನು ತಜ್ಞರ ಬಳಿ ಚರ್ಚೆ ನಡೆಸುತ್ತೇನೆ ಎಂದರು.

ಆ.31ರ ವರೆಗೆ ನಿತ್ಯ 10 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಹೇಳಿದ್ದಾರೆ. ಕೆಆರ್‌ಎಸ್ ಗರಿಷ್ಠ ಮಟ್ಟ 24 ಟಿಎಂಸಿ ಅದರಲ್ಲಿ 15 ಟಿಎಂಸಿ ಲಭ್ಯವಿದೆ. ಕಬಿನಿ ಗರಿಷ್ಠ ಮಟ್ಟ 13 ಟಿಎಂಸಿಯಲ್ಲಿ 3 ಟಿಎಂಸಿ ಇದೆ. ಹಾರಂಗಿಯಲ್ಲಿ 7.8 ಟಿಎಂಸಿಯಲ್ಲಿ 7 ಟಿಎಂಸಿ ಲಭ್ಯವಿದೆ ಮತ್ತು ಹೇಮಾವತಿಯ ಗರಿಷ್ಠ 25 ಟಿಎಂಸಿಯಲ್ಲಿ 21 ಟಿಎಂಸಿ ಲಭ್ಯವಿದೆ.

ತಮಿಳುನಾಡಿನವರು ಆಕ್ರಮಣಕಾರಿಯಾಗಿ ತಮ್ಮ ವಾದ ಮಂಡಿಸಿದ್ದಾರೆ. ನಮ್ಮ ಅಧಿಕಾರಿಗಳು ಸಹ ಅಷ್ಟೇ ಸಮರ್ಥವಾಗಿ ನಿಭಾಯಿಸಿದ್ದಾರೆ. ಏಕೆಂದರೆ ಅವರು ಕೇಳಿದ್ದು 24 ಸಾವಿರ ಕ್ಯೂಸೆಕ್​, ಆಗಸ್ಟ್ ತಿಂಗಳ 28ರ ತನಕ 10 ಸಾವಿರ ಕ್ಯೂಸೆಕ್​ ನೀರು ಬಿಡುಗಡೆ ಮಾಡಿದ್ದು, ನಮಗೆ ಮಳೆ ಬಂದಿಲ್ಲ ಎಂದು ಮನವರಿಕೆ ಮಾಡಿದ ಪರಿಣಾಮ ನೀರು ಹರಿಸುವ ಪ್ರಮಾಣ 5 ಸಾವಿರ ಕ್ಯೂಸೆಕ್​ಗೆ ಇಳಿದಿದೆ.

ಮುಂದಿನ ತಿಂಗಳು ಸೆ.1 ಶುಕ್ರವಾರದಂದು ಸುಪ್ರೀಂ ಕೋರ್ಟ್ ಕಾವೇರಿ ನೀರಿನ ವಿಚಾರವಾಗಿ ಮತ್ತೊಮ್ಮೆ ತೀರ್ಪು ನೀಡಲಿದೆ. ಅಧಿಕಾರಿಗಳು ಕರ್ನಾಟಕದ ಹಿತಕ್ಕೆ ಧಕ್ಕೆಯಾಗದಂತೆ ರಾಜ್ಯದ ಹಿತ ಕಾಪಾಡುತ್ತೇವೆ ಎಂದು ಮಾತು ಕೊಟ್ಟಿದ್ದಾರೆ. ನಾವು ಸಹ ಅಡ್ವೋಕೇಟ್ ಜನರಲ್ ಹಾಗೂ ಕಾನೂನು ತಜ್ಞರ ಬಳಿ ಮಾತನಾಡುತ್ತೇವೆ. ಯಾವುದೇ ಕಾರಣಕ್ಕೂ ರಾಜ್ಯದ ಹಿತಕ್ಕೆ ಧಕ್ಕೆ ಬಾರದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ ಎಂದು ಡಿಸಿಎಂ ಭರವಸೆ ಕೊಟ್ಟರು.

ಆ.29 ರಿಂದಲೇ ನೀರು ಬಿಡಬೇಕೆ? ನೀವು ನೀರು ಬಿಡಲು ಆದೇಶ ನೀಡಿದ್ದೀರೆ ಎಂದು ಮಾಧ್ಯಮಗಳು ಕೇಳಿದಾಗ, "ಈಗ ತಾನೇ ತೀರ್ಪು ಬಂದಿದೆ. ಅದನ್ನು ನಾನು ಪರಿಶೀಲಿಸಬೇಡವೇ. ಈಗ ಕೆಆರ್‌ಎಸ್ ಬೀಗ ಯಾರ ಬಳಿ ಇದೆ? ಕೇಂದ್ರ ಸರ್ಕಾರದ ಬಳಿ ತಾನೇ? ನಮ್ಮ ಬಳಿ ಇದೆಯೇ? ಶುಕ್ರವಾರ ಸುಪ್ರೀಂ ಕೋರ್ಟ್​ನಲ್ಲಿ ಬೈಸಿಕೊಳ್ಳಲು ಇಷ್ಟವಿಲ್ಲ. ನಿಮಗೆ ಇಷ್ಟವಿದೆಯೇ?" ಎಂದು ಡಿಕೆಶಿ ತೀಕ್ಷ್ಣವಾಗಿ ಉತ್ತರಿಸಿದರು.

ಇಂಡಿಯಾ ಮೆಚ್ಚಿಸಲು ಕಾಂಗ್ರೆಸ್ ಸರ್ಕಾರ ರಾಜಿಯಾಗಿದೆ ಎಂದು ಸಿ.ಟಿ.ರವಿ ಆರೋಪ‌ ಮಾಡಿದ್ದಾರೆ ಎನ್ನುವ ಪ್ರಶ್ನೆಗೆ "ನಾನು ನೀರಿನ ವಿಚಾರದಲ್ಲಿ ರಾಜಕಾರಣ ಮಾಡುವುದಿಲ್ಲ ಎಂದು ಹೇಳಿದ್ದೇನೆ. ಬಿಜೆಪಿಯವರು ತಮ್ಮ ಅಧಿಕಾರವಧಿಯಲ್ಲಿ ಎಷ್ಟು ನೀರು ಬಿಟ್ಟಿದ್ದಾರೆ ಎನ್ನುವ ದಾಖಲೆ ನನ್ನ ಬಳಿ ಇದೆ. ಅದನ್ನು ಹೊರಗಡೆ ಬಿಡಲೇ? ಸುಮ್ಮನೇ ರಾಜಕಾರಣ ಮಾಡುತ್ತಿದ್ದಾರೆ. ಅವರಿಗೆ ವಾಸ್ತವಾಂಶ ಅರಿವಿಲ್ಲವೇ ಎಂದು ಹೇಳಿದರು.

ಇದನ್ನೂ ಓದಿ : ಇಂಡಿಯಾದಲ್ಲಿ ಒಡಕು ಬರಬಾರದು ಎಂದು ಕೇಳುವುದಕ್ಕಿಂತ ಮುಂಚೆಯೇ ನೀರು ಬಿಟ್ಟಿದ್ದಾರೆ : ಮಾಜಿ ಸಚಿವ ಸಿ ಟಿ ರವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.