ಮೈಸೂರು : ತಲಕಾಡಿನ ಪಂಚಲಿಂಗ ದರ್ಶನಕ್ಕೆ ದಸರಾದಲ್ಲಿ ಖರ್ಚಾಗದೆ ಉಳಿದ ಹಣವನ್ನು ಬಳಸುವಂತೆ ಸಿಎಂ ಸೂಚನೆ ನೀಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ತಿಳಿಸಿದ್ದಾರೆ.
ಇದೇ ತಿಂಗಳ ಡಿಸೆಂಬರ್ 10ರಿಂದ 19ರವರೆಗೆ ಪಂಚಲಿಂಗ ದರ್ಶನ ನಡೆಯಲಿದೆ. ಇದರ ವೆಚ್ಚಕ್ಕಾಗಿ ದಸರಾದ 7.8 ಕೋಟಿ ರೂಪಾಯಿ ಅನುದಾನ ಬಳಸಿಕೊಳ್ಳಲು ಸಿಎಂ ಸೂಚಿಸಿದ್ದಾರೆ. ಪಂಚಲಿಂಗ ದರ್ಶನಕ್ಕೆ ಪ್ರತಿ ದಿನ ಸ್ಥಳೀಯ 1,500 ಮಂದಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಡಿಸೆಂಬರ್ 13ರ ರಾತ್ರಿ ತಲಕಾಡಿಗೆ ಬಿ ಎಸ್ ಯಡಿಯೂರಪ್ಪ ಆಗಮಿಸಲಿದ್ದಾರೆ. ಡಿ.14ರ ಪಂಚಲಿಂಗ ದರ್ಶನದ ಪ್ರಮುಖ ಕಾರ್ಯಕ್ರಮಗಳಲ್ಲಿ ಸಿಎಂ ಭಾಗಿಯಾಗಲಿದ್ದಾರೆ.
ಇದನ್ನು ಓದಿ:ಏಷ್ಯನ್ ಪೇಂಟ್ಸ್ ಕಾರ್ಖಾನೆ ವಿರುದ್ಧದ ರೈತರ ಪ್ರತಿಭಟನೆ 14ನೇ ದಿನಕ್ಕೆ
ಕೋವಿಡ್ ಹಿನ್ನೆಲೆ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ತಿಳಿಸಲಾಗಿದ್ದು, 2013ರಲ್ಲಿ ಪಂಚಲಿಂಗ ದರ್ಶನ ನಡೆದಿತ್ತು. 7ವರ್ಷಗಳ ಬಳಿಕ ಈ ಬಾರಿ ಪಂಚಲಿಂಗ ದರ್ಶನ ನಡೆಯುತ್ತಿದೆ.
ಎಲ್ಲಾ ರೀತಿಯ ಸಿದ್ಧತೆಯನ್ನು ಮಾಡಿಕೊಳ್ಳುವಂತೆ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಹಾಗೂ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ತಿಳಿಸಿದ್ದಾರೆ.