ಮೈಸೂರು: ಮೂರು ಬಾರಿ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ದ್ರೋಣ ಆನೆ ಹೃದಯಾಘಾತದಿಂದ ಇಂದು ಮೃತಪಟ್ಟಿದೆ.
ನಾಗರಹೊಳೆ (ರಾಜೀವ್ ಗಾಂಧಿ) ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿರುವ ಮತ್ತಿಗೋಡು ಸಾಕಾನೆ ಶಿಬಿರದಲ್ಲಿದ್ದ ದ್ರೋಣ (39) ಕೆಲ ತಿಂಗಳ ಹಿಂದೆ ಕಾಡಾನೆ ದಾಳಿಯಿಂದ ಸೊಂಟ ಮುರಿದುಕೊಂಡು ಚೇತರಿಸಿಕೊಂಡಿದ್ದ. ಆದರೆ ಇಂದು ಹೃದಯಾಘಾತದಿಂದ ದ್ರೋಣ ಕೊನೆಯುಸಿರೆಳೆದಿದ್ದಾನೆ.
ದ್ರೋಣ ಸೌಮ್ಯ ಸ್ವಭಾವದವನಾಗಿದ್ದ. ಅರ್ಜುನನ ನಿವೃತ್ತಿಯ ನಂತರ ಈತನೇ ಅಂಬಾರಿ ಹೊರಲು ಸೂಕ್ತ ಎಂದು ಅಧಿಕಾರಿಗಳು ನಿರ್ಧರಿಸಿದ್ದರು. ಆದರೆ ವಿಧಿಯ ಆಟ ಈ ಆಸೆಯನ್ನು ಚಿವುಟಿಹಾಕಿದೆ.