ಮೈಸೂರು : ಜಿಲ್ಲೆಯಲ್ಲಿ ಸದ್ಯಕ್ಕೆ ಯಾವುದೇ ಅಕ್ರಮ ಗಣಿಗಾರಿಕೆ ಜಿಲ್ಲೆಯಲ್ಲಿ ನಡೆಯುತ್ತಿಲ್ಲ. ಜಿಲ್ಲೆಯ 7 ಕಡೆ ಗಣಿಗಾರಿಕೆ ಪ್ರದೇಶಗಳಿಗೆ ಲೈಸೆನ್ಸ್ ರೀನಿವಲ್ ಆಗಿದೆ. ಅದರಲ್ಲಿ ಕೆಲವರು ಮಾತ್ರ ಬ್ಲಾಸ್ಟಿಂಗ್ ಅನುಮತಿ ಪಡೆದಿದ್ದಾರೆ. ಬ್ಲಾಸ್ಟಿಂಗ್ ಅನುಮತಿ ಪಡೆದಿರುವವರು ಮಾತ್ರ ಗಣಿಗಾರಿಕೆ ನಡೆಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್ ಚೇತನ್ ತಿಳಿಸಿದ್ದಾರೆ.
ಇಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಅನುಮತಿ ಇಲ್ಲದವರು ಬ್ಲಾಸ್ಟಿಂಗ್ ಮಾಡಬಾರದು. ಇದರ ಬಗ್ಗೆ ನಾವು ನಿತ್ಯ ಮಾಹಿತಿ ಪಡೆದುಕೊಳ್ಳುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
ಖುದ್ದಾಗಿ ನಾವು ಗಣಿಗಾರಿಕೆ ನಡೆಯುವ ಸ್ಥಳಕ್ಕೆ ಭೇಟಿ ನೀಡಿಲ್ಲ. ಅದರ ವ್ಯಾಪ್ತಿಗೆ ಬರುವ ಪೊಲೀಸ್ ಠಾಣೆಯ ಮೂಲಕ ಮಾಹಿತಿ ಪಡೆಯುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಗಣಿಗಾರಿಕೆ ನಡೆಯುತ್ತಿರುವ ಸ್ಥಳಗಳಿಗೆ ಭೇಟಿ ನೀಡುತ್ತೇವೆ. ಏನಾದರೂ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೆ ಅದರ ವಿರುದ್ಧ ಕ್ರಮವನ್ನು ಜರುಗಿಸುತ್ತೇವೆ ಎಂದು ಇದೇ ಸಂದರ್ಭದಲ್ಲಿ ಎಸ್ಪಿ ಚೇತನ್ ತಿಳಿಸಿದರು.
ಇದನ್ನೂ ಓದಿ:ಬೊಮ್ಮಾಯಿ ಸಂಪುಟಕ್ಕೆ 29 ಮಂದಿ ದಂಡು.. ಸಿಕ್ಕವರ ಪ್ರಮಾಣ, ಸಿಗದವರಿಗಿಲ್ಲ ಸಮಾಧಾನ..