ETV Bharat / state

ನಂಜನಗೂಡು: ಬಾಡಿಗೆ ಪಡೆದ ಕಾರನ್ನೇ ಕದ್ದೊಯ್ದ ದುಷ್ಕರ್ಮಿಗಳು! - ಕಾರು ಕದ್ದು ಪರಾರಿ

ನಂಜನಗೂಡು ತಾಲೂಕಿನ ಅಹಲ್ಯ ಗ್ರಾಮದ ಗೇಟ್ ಬಳಿ ಚಾಲಕನಿಗೆ ಚಾಕು ತೋರಿಸಿ, ಬಾಡಿಗೆ ಪಡೆದಿದ್ದ ಕಾರನ್ನೇ ಖದೀಮರು ಕಳ್ಳತನ ಮಾಡಿದ್ದಾರೆ.

Hullahalli Police Station
ಹುಲ್ಲಹಳ್ಳಿ ಪೊಲೀಸ್ ಠಾಣೆ
author img

By

Published : Jun 21, 2023, 10:44 PM IST

ಮೈಸೂರು: ಬಾಡಿಗೆ ಕಾರಿನಲ್ಲಿ ಚಲಿಸುತ್ತಿದ್ದ ಅಪರಿಚಿತ ವ್ಯಕ್ತಿಗಳು, ಚಾಲಕನನ್ನು ಮಾರ್ಗಮಧ್ಯೆ ಬೆದರಿಸಿ ಕಾರನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಘಟನೆ ನಂಜನಗೂಡು ತಾಲೂಕಿನ ಅಹಲ್ಯ ಗ್ರಾಮದ ಗೇಟ್ ಬಳಿ ನಡೆದಿದೆ. ಅಪ್ಸರ್ ಪಾಷಾ ಎಂಬವರ ಕಾರು ಕಳ್ಳತನವಾಗಿದೆ.

ಮೈಸೂರಿನ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಮಂಗಳವಾರ ರಾತ್ರಿ 10 ಗಂಟೆ ಸಮಯದಲ್ಲಿ ಅಪ್ಸರ್ ಪಾಷಾ ಎಂಬ ಚಾಲಕನ ಕಾರನ್ನು ಅಪರಿಚಿತ ಇಬ್ಬರು ಯುವಕರು ಹುಲ್ಲಹಳ್ಳಿ ಗ್ರಾಮಕ್ಕೆ ಹೋಗಬೇಕೆಂದು ಬಾಡಿಗೆ ಕೇಳಿ ಹತ್ತಿ ಕುಳಿತಿದ್ದಾರೆ. ಟಾಟಾ ಇಂಡಿಕಾ ಕಾರನ್ನು ಅಪ್ಸರ್ ಪಾಷಾ ಚಾಲನೆ ಮಾಡಿಕೊಂಡು ರಾಂಪುರ ಗ್ರಾಮದ ಮುಖ್ಯ ರಸ್ತೆಯಲ್ಲಿ ಬರುತ್ತಿದ್ದಂತೆ ಅಹಲ್ಯ ಗ್ರಾಮದ ಗೇಟ್ ಬಳಿ ಏಕಾಏಕಿ ಕಾರಿನ ನನ್ನ ಮೇಲೆ ಬಾಡಿಗೆದಾರರಾದ ಇಬ್ಬರು ಹಲ್ಲೆ ನಡೆಸಿದರು. ಚಾಕು ತೋರಿಸಿ ಜೀವ ಬೆದರಿಕೆ ಹಾಕಿದರು. 500 ರೂಪಾಯಿ ನಗದು ಮತ್ತು ವಾಚ್, ಮೊಬೈಲ್ ಕಸಿದುಕೊಂಡರು. ದಾರಿಯಲ್ಲೇ ಕೆಳಗಿಳಿಸಿ, ಕಾರು ಕದ್ದು ಪರಾರಿಯಾದರು ಎಂದು ಅವರು ದೂರಿದ್ದಾರೆ.

ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ಕಾರು ಇದಾಗಿದೆ. ಕಾರು ದುಡಿಮೆಯಿಂದಲೇ ನನ್ನ ಜೀವನ ಸಾಗುತ್ತದೆ. ಕಳ್ಳರನ್ನು ಪತ್ತೆ ಹಚ್ಚಿ ನನ್ನ ಕಾರು ಕೊಡಿಸಬೇಕು ಎಂದು ಹುಲ್ಲಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಕಾರು ಕದ್ದ ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ.

ಮೈಸೂರು- ಹುಲ್ಲಹಳ್ಳಿ ಮುಖ್ಯರಸ್ತೆಯಲ್ಲಿ ರಾತ್ರಿಯ ಸಮಯದಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ. ರಾತ್ರಿ ಪಾಳಿಯಲ್ಲಿ ಪೊಲೀಸರು ನಿಗಾವಹಿಸದೇ ಇದ್ದರಿಂದ ಇಲ್ಲಿ ಕಳ್ಳತನ ಪ್ರಕರಣಗಳು ಜರಗುತ್ತಿವೆ. ಹಳ್ಳಿಗಳಲ್ಲೂ ಕಳ್ಳತನ ಹೆಚ್ಚಾಗಿ ನಡೆಯುತ್ತಿದ್ದು, ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಮುಂಡರಗಿ ಬಿಇಒಗೆ 5 ವರ್ಷ ಜೈಲು ಶಿಕ್ಷೆ : ಅಪ್ರಾಪ್ತೆಗೆ ಲೈಂಗಿಕ‌ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಡರಗಿ ಕ್ಷೇತ್ರ ದ ಬಿಇಒ ಶಂಕ್ರಪ್ಪ ಹಳ್ಳಿಗುಡಿ ಎಂಬವರಿಗೆ ಗದಗ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 5 ವರ್ಷ ಜೈಲು ಶಿಕ್ಷೆ ಹಾಗೂ 25 ಸಾವಿರ ರೂ.‌ ದಂಡ ವಿಧಿಸಿದೆ. ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶ ರಾಜೇಶ್ವರ ಶೆಟ್ಟಿ ಅವರು ಆದೇಶ ಹೊರಡಿಸಿದರು. ದಂಡ ಪಾವತಿಸಲು ವಿಫಲವಾದಲ್ಲಿ ಹೆಚ್ಚುವರಿ 6 ತಿಂಗಳು ಜೈಲುವಾಸ ಶಿಕ್ಷೆ ನೀಡುವ ಕುರಿತು ಕೋರ್ಟ್‌ ಆದೇಶದಲ್ಲಿ ಎಚ್ಚರಿಕೆ ನೀಡಿದೆ.

ಶಂಕ್ರಪ್ಪ ಹಳ್ಳಿಗುಡಿ ವಿಜಯನಗರ ಜಿಲ್ಲೆ ಹೂವಿನಹಡಗಲಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಬಿಇಒ ಆಗಿದ್ದ ವೇಳೆ ಕಾರ್ಯಕ್ರಮದ ನೆಪವೊಡ್ಡಿ ವಿದ್ಯಾರ್ಥಿನಿಯ ಮನೆಗೆ ತೆರಳಿ ಲೈಂಗಿಕ ಕಿರುಕುಳ ನೀಡಿದ್ದ ಆರೋಪ ಕೇಳಿ ಬಂದಿತ್ತು. ಪ್ರಕರಣ ಕುರಿತಂತೆ ಸಂತ್ರಸ್ತೆಯ ಪೋಷಕರು ಘಟನೆ ಬಗ್ಗೆ ಮುಂಡರಗಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಬಳಿಕ 2020ರ ಮಾ.27ರಂದು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಜಿಲ್ಲಾ ನ್ಯಾಯಾಲಯ ಅಪರಾಧಿ ಶಂಕ್ರಪ್ಪಗೆ ಶಿಕ್ಷೆ ವಿಧಿಸಿದೆ.

ಇದನ್ನೂಓದಿ: ಇಬ್ಬರು ಹೆಣ್ಣು ಮಕ್ಕಳನ್ನು ಜೀವಂತವಾಗಿ ಸುಟ್ಟು ಹಾಕಿದ ತಾಯಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.