ಮೈಸೂರು : ಬೆಳಗಿನ ಜಾವ ಹಸುವನ್ನು ಕದ್ದು ಪರಾರಿಯಾಗುತ್ತಿದ್ದ 4 ಮಂದಿ ಹಸುಗಳ್ಳರನ್ನು ಗ್ರಾಮಸ್ಥರೇ ಹಿಡಿದು ಗೂಸಾ ಕೊಟ್ಟು ಪೊಲೀಸರಿಗೆ ಒಪ್ಪಿಸಿದ ಘಟನೆ ಕೆ ಆರ್ ನಗರ ತಾಲೂಕಿನ ದಿಟ್ಟಳ್ಳಿ ಗ್ರಾಮದಲ್ಲಿ ನಡೆದಿದೆ.
ಬೆಳಗಿನ ಜಾವ ಗ್ರಾಮಕ್ಕೆ ಬಂದ 4 ಜನ ಕಳ್ಳರು ಹಸುಗಳನ್ನು ಕದ್ದು ಗೂಡ್ಸ್ ಆಟೋದಲ್ಲಿ ತುಂಬಿಕೊಂಡು ಪಾರಾರಿಯಾಗುವ ವೇಳೆ ಗ್ರಾಮಸ್ಥರ ಕಣ್ಣಿಗೆ ಬಿದ್ದಿದ್ದಾರೆ. ಹಸುಗಳ್ಳರನ್ನು ಹಿಡಿದ ಗ್ರಾಮಸ್ಥರು ಗೂಸಾ ಕೊಟ್ಟು ಕೆ ಆರ್‌ನಗರದ ಪೊಲೀಸರಿಗೆ ಒಪ್ಪಿಸಿದ್ದಾರೆ.
ಅದೇ ಗ್ರಾಮದ ಬೀರೇಶ್, ಐಚನಳ್ಳಿಯ ರಾಮಚಂದ್ರ, ಹುಣಸೂರು ತಾಲೂಕಿನ ಕಳುವಿಗೆ ಗ್ರಾಮದ ದೇವರಾಜ ನಾಯಕ ಮತ್ತು ಚಂದ್ರನಾಯಕ ಬಂಧಿತ ಆರೋಪಿಗಳೆಂದು ಗುರುತಿಸಲಾಗಿದ್ದು, ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.