ETV Bharat / state

ಸಾರಿಗೆ ಅಧಿಕಾರಿಗಳಿಗೆ ಮಚ್ಚು ತೋರಿಸಿ ಹೆದರಿಸಿದ ದಂಪತಿ ಬಂಧನ : ಮೈಸೂರು ಪೊಲೀಸ್ ಕಮಿಷನರ್ - ಮತ್ತೊಬ್ಬ ರೌಡಿಶೀಟರ್ ಗಡಿಪಾರು

ಮೈಸೂರಿನಲ್ಲಿ ಕೆಲವು ದಿನಗಳ ಹಿಂದೆ ಸಾರಿಗೆ ಅಧಿಕಾರಿಗಳಿಗೆ ಮಚ್ಚು ತೋರಿಸಿ ಹೆದರಿಸಿದ ದಂಪತಿಯನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ.

Couple arrested for threatening  threatening transport officer with sword  Mysore Commissioner of Police Ramesh Banoth  ಸಾರಿಗೆ ಅಧಿಕಾರಿಗಳಿಗೆ ಮಚ್ಚು ತೋರಿಸಿ ಹೆದರಿಸಿದ ದಂಪತಿ  ಅಧಿಕಾರಿಗಳಿಗೆ ಮಚ್ಚು ತೋರಿಸಿ ಹೆದರಿಸಿದ ದಂಪತಿ ಬಂಧನ  ನಗರ ಪೊಲೀಸ್ ಆಯುಕ್ತರ ಕಚೇರಿ  ನಗರ ಪೊಲೀಸ್ ಆಯುಕ್ತರ ಕಚೇರಿ  ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಮಚ್ಚು ತೋರಿಸಿ ಬೆದರಿಕೆ  ಬೆದರಿಕೆ ಹಾಕಿ ನಾಪತ್ತೆಯಾಗಿದ್ದ ದಂಪತಿ  ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್  ಮತ್ತೊಬ್ಬ ರೌಡಿಶೀಟರ್ ಗಡಿಪಾರು  ಸಂಚಾರ ನಿಯಮ ಉಲ್ಲಂಘನೆ ತಡೆಗೆ ತಪಾಸಣೆ
ಸಾರಿಗೆ ಅಧಿಕಾರಿಗಳಿಗೆ ಮಚ್ಚು ತೋರಿಸಿ ಹೆದರಿಸಿದ ದಂಪತಿ ಬಂಧನ
author img

By

Published : Dec 17, 2022, 7:33 AM IST

ನಗರ ಪೊಲೀಸ್ ಕಮಿಷನರ್ ರಮೇಶ್​ ಬಾನೋತ್​ ಮಾಹಿತಿ

ಮೈಸೂರು: ನಗರದ ಸಾತಗಳ್ಳಿ ಬಸ್ ಡಿಪೋದಲ್ಲಿ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಮಚ್ಚು ತೋರಿಸಿ ಬೆದರಿಕೆ ಹಾಕಿ ನಾಪತ್ತೆಯಾಗಿದ್ದ ದಂಪತಿಯನ್ನು ಬಂಧಿಸಲಾಗಿದ್ದು, ಇಬ್ಬರನ್ನು ರೌಡಿಶೀಟರ್ ಪಟ್ಟಿಗೆ ಸೇರಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ತಿಳಿಸಿದರು.

ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಶುಕ್ರವಾರ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಸಾತಗಳ್ಳಿ ಬಸ್ ನಿಲ್ದಾಣದ ಮಳಿಗೆಗಳನ್ನು ಬಾಡಿಗೆ ಪಡೆದುಕೊಂಡು ಎರಡು ವರ್ಷಗಳಿಂದ ಬಾಡಿಗೆ ಕಟ್ಟದ ಹಿನ್ನೆಲೆ ಡಿ.10ರಂದು ಬೆಳಗ್ಗೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಮತ್ತು ಸಿಬ್ಬಂದಿ ಬಾಡಿಗೆದಾರರನ್ನು ತೆರವು ಮಾಡಲು ಮುಂದಾಗಿದ್ದರು. ಈ ವೇಳೆ ಬಾಡಿಗೆ ಪಡೆದುಕೊಂಡಿದ್ದ ಕಾಂಗ್ರೆಸ್ ಮುಖಂಡ ಶಫೀಕ್ ಅಹಮ್ಮದ್ ಮತ್ತು ಅವರ ಪತ್ನಿ ಸೈಯದ್ ಮುನಿಬುನ್ನಿಸಾ ಸೇರಿದಂತೆ ಮೂವರು ಮಹಿಳೆಯರು ಅಧಿಕಾರಿಗಳ ವಿರುದ್ಧ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರು. ಅಲ್ಲದೇ, ಸೈಯದ್ ಮುನಿಬುನ್ನಿಸಾ ಮಚ್ಚು ಹಿಡಿದು ಕೊಲೆ ಬೆದರಿಕೆ ಹಾಕಿ ನಾಪತ್ತೆಯಾಗಿದ್ದರು. ಈ ಸಂಬಂಧ ಕೆಎಸ್‌ಆರ್‌ಟಿಸಿ ವಿಭಾಗೀಯ ಸಾರಿಗೆ ಅಧಿಕಾರಿ ಮರಿಗೌಡ ಉದಯಗಿರಿ ಪೊಲೀಸರಿಗೆ ದೂರು ನೀಡಿದ್ದರು ಎಂದು ಹೇಳಿದರು.

Couple arrested for threatening  threatening transport officer with sword  Mysore Commissioner of Police Ramesh Banoth  ಸಾರಿಗೆ ಅಧಿಕಾರಿಗಳಿಗೆ ಮಚ್ಚು ತೋರಿಸಿ ಹೆದರಿಸಿದ ದಂಪತಿ  ಅಧಿಕಾರಿಗಳಿಗೆ ಮಚ್ಚು ತೋರಿಸಿ ಹೆದರಿಸಿದ ದಂಪತಿ ಬಂಧನ  ನಗರ ಪೊಲೀಸ್ ಆಯುಕ್ತರ ಕಚೇರಿ  ನಗರ ಪೊಲೀಸ್ ಆಯುಕ್ತರ ಕಚೇರಿ  ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಮಚ್ಚು ತೋರಿಸಿ ಬೆದರಿಕೆ  ಬೆದರಿಕೆ ಹಾಕಿ ನಾಪತ್ತೆಯಾಗಿದ್ದ ದಂಪತಿ  ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್  ಮತ್ತೊಬ್ಬ ರೌಡಿಶೀಟರ್ ಗಡಿಪಾರು  ಸಂಚಾರ ನಿಯಮ ಉಲ್ಲಂಘನೆ ತಡೆಗೆ ತಪಾಸಣೆ
ನಗರ ಪೊಲೀಸ್ ಕಮಿಷನರ್ ರಮೇಶ್​ ಬಾನೋತ್​

ಘಟನಾ ಸ್ಥಳದಲ್ಲಿ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಖಾಕಿ ಸಮವಸ್ತ್ರ ಧರಿಸಿದ್ದರಿಂದ ಪೊಲೀಸರ ಸಮ್ಮುಖದಲ್ಲೇ ಕೊಲೆ ಬೆದರಿಕೆ ನಡೆಯುತ್ತಿದೆ ಎಂದು ಸಾರ್ವಜನಿಕರು ವಿಡಿಯೋ ತುಣುಕಗಳನ್ನು ನೋಡಿ ಭಾವಿಸಿದ್ದರು. ಬಳಿಕ ಡಿ.12ರಂದು ದೂರುದಾರರು ಘಟನೆಯ ವಿಡಿಯೋ ಚಿತ್ರಿಕರಣವನ್ನು ಪೊಲೀಸರಿಗೆ ನೀಡಿದ್ದರು. ಶುಕ್ರವಾರ ಮುಂಜಾನೆ ವಿರಾಜಪೇಟೆಯ ಗ್ರಾಮವೊಂದರಲ್ಲಿ ಆರೋಪಿ ದಂಪತಿ ಇರುವುದು ಗಮನಕ್ಕೆ ಬಂದಿದೆ. ಕೂಡಲೇ ಅವರನ್ನು ಬಂಧಿಸಲಾಗಿದೆ. ಜತೆಗೆ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಅವರಿಬ್ಬರ ವಿರುದ್ಧ ರೌಡಿಶೀಟರ್ ತೆರೆಯಲಾಗಿದೆ. ಉಳಿದ ಮೂವರು ಆರೋಪಿಗಳು ಬಂಧಿತರ ಸಂಬಂಧಿಯಾಗಿದ್ದು, ಅವರ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್​ ಆಯುಕ್ತರು ಮಾಹಿತಿ ನೀಡಿದರು.

ಮತ್ತೊಬ್ಬ ರೌಡಿಶೀಟರ್ ಗಡಿಪಾರು: ಪೊಲೀಸರು ಗುರುವಾರ ಬನ್ನಿಮಂಟಪದ ಆರ್‌ಎಕ್ಸ್ ಮನು ಎಂಬಾತನನ್ನು ಮೈಸೂರು ನಗರದಿಂದ ಮಂಡ್ಯ ಜಿಲ್ಲೆಗೆ 3 ತಿಂಗಳು ಕಾಲ ಗಡಿಪಾರು ಮಾಡಿದ್ದ ಬೆನ್ನಲ್ಲೇ ಶುಕ್ರವಾರ ಮತ್ತೊಬ್ಬ ರೌಡಿಶೀಟರ್‌ನನ್ನು ಗಡಿಪಾರು ಮಾಡಿದ್ದಾರೆ. ಈ ಸಂಬಂಧ ಮಾತನಾಡಿದ ಪೊಲೀಸ್ ಆಯುಕ್ತರು, ಗೌಸಿಯಾ ನಗರ ನಿವಾಸಿ ಅಕ್ಮಲ್ ಪಾಷ (34) ಎಂಬಾತನ ವಿರುದ್ಧ ಈಗಾಗಲೇ 9 ಪ್ರಕರಣಗಳು ದಾಖಲಾಗಿದ್ದು, ಒಂದು ಪ್ರಕರಣದಲ್ಲಿ ಶಿಕ್ಷೆಯನ್ನೂ ಅನುಭವಿಸಿದ್ದಾರೆ. ಆದರೂ ತನ್ನ ಹಳೇ ಚಾಳಿಯನ್ನು ಮುಂದುವರೆಸಿದ ಹಿನ್ನೆಲೆ 6 ತಿಂಗಳುಗಳ ಕಾಲ ರಾಮನಗರ ಜಿಲ್ಲೆಗೆ ಗಡಿಪಾರು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಸಂಚಾರ ನಿಯಮ ಉಲ್ಲಂಘನೆ ತಡೆಗೆ ತಪಾಸಣೆ: ಸಾರ್ವಜನಿಕರ ಹಿತದೃಷ್ಟಿಯಿಂದ ಸಂಚಾರ ನಿಯಮ ಉಲ್ಲಂಘನೆ ತಡೆ ಹಾಗೂ ಅಪರಾಧಗಳನ್ನು ತಡೆಯಲು ಮುಂಜಾಗ್ರತಾ ಕ್ರಮವಾಗಿ ನಗರದಲ್ಲಿ ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ. ನಾನು ಆಯುಕ್ತರಾಗಿ ಬಂದ ಮೇಲೆ ನಗರದೆಲ್ಲೆಡೆ ಸಂಚರಿಸಿದ ನನಗೆ ಸಂಚಾರ ನಿಯಮ ಉಲ್ಲಂಘನೆ ಹೆಚ್ಚಾಗಿರುವುದು ಕಂಡು ಬಂತು ಎಂದರು.

ಯಾವುದೇ ಭಯವಿಲ್ಲದೇ ವಾಹನ ಸವಾರರು ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಿದ್ದರು. ಇದನ್ನು ನಿಯಂತ್ರಿಸಲು ವಾಹನಗಳ ತಪಾಸಣೆ ತೀವ್ರಗೊಳಿಸಲಾಗಿದೆ. ಇದರೊಂದಿಗೆ ಮೈಸೂರಿನಿಂದ ತೆರಳಿದ್ದ ಶಂಕಿತ ಉಗ್ರ ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟ ನಡೆಸಿದ್ದರಿಂದ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಲು ವಾಹನಗಳ ತಪಾಸಣೆ ನಡೆಸಲಾಗುತ್ತಿದೆ ಎಂದು ಹೇಳಿದರು. ಮಾಧ್ಯಮಗೋಷ್ಟಿಯಲ್ಲಿ ಡಿಸಿಪಿ ಪ್ರದೀಪ್ ಗುಂಟಿ, ಎಸಿಪಿ ಎಂ.ಎನ್. ಶಶಿಧರ್ ಇದ್ದರು.

ಓದಿ: ಮೈಸೂರಿನಲ್ಲಿ ಅಧಿಕಾರಿಗಳ ಎದುರು ಮಚ್ಚು ಹಿಡಿದು ಮಹಿಳೆಯ ರಂಪಾಟ: ದೂರು ದಾಖಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.