ETV Bharat / state

ಲಾರಿ ಡ್ರೈವರ್​ಗೆ ಕೊರೊನಾ ಪಾಸಿಟಿವ್​: ಸಂಪರ್ಕ ಹೊಂದಿದ್ಧ 6 ಮಂದಿ ನೇರ ಆಸ್ಪತ್ರೆಗೆ ರವಾನೆ

ಸೋಂಕಿತನೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ಕೇರಳ ಮೂಲದ 3 ಹಾಗೂ ಸಾಲೇಕೊಪ್ಪಲು ಗ್ರಾಮದ 3 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Corona infection to lorry driver
ಲಾರಿ ಡ್ರೈವರ್​ಗೆ ಕೊರೊನಾ ಸೋಂಕು
author img

By

Published : May 5, 2020, 5:00 PM IST

ಮೈಸೂರು: ಕೆ.ಆರ್.ನಗರ ತಾಲೂಕಿನ‌ ಸಾಲೇಕೊಪ್ಪಲು ಗ್ರಾಮದಲ್ಲಿ ಶುಂಠಿ ಖರೀದಿಗೆ ಬಂದಿದ್ದ ಲಾರಿ ಡ್ರೈವರ್​ಗೆ ಕೊರೊನಾ ಪಾಸಿಟಿವ್ ಇರುವುದು ದೃಢ ಪಟ್ಟಿದೆ. ಈ ಹಿನ್ನೆಲೆ 6 ಜನರನ್ನು ಜಿಲ್ಲಾ ಕೋವಿಡ್​-19 ಆಸ್ಪತ್ರೆಗೆ ವೈದ್ಯಕೀಯ ‌ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದೆ.

ಸೋಂಕಿತನೊಂದಿಗೆ ಪ್ರಾಥಮಿಕ ಹೊಂದಿದ್ದ ಕೇರಳ ಮೂಲದ 3 ಹಾಗೂ ಸಾಲೇಕೊಪ್ಪಲು ಗ್ರಾಮದ 3 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಿಲ್ಲಾಧಿಕಾರಿ ಭೇಟಿ

ಸಾಲೇಕೊಪ್ಪಲು ಗ್ರಾಮದ ಜಮೀನೊಂದರಲ್ಲಿ ಶುಂಠಿ ಖರೀದಿಗಾಗಿ ಬಂದಿದ್ದ ಕೇರಳದ ವಯನಾಡು ಮೂಲದ ತಾಮಸ್ ಎಂಬ ಲಾರಿ ಚಾಲಕನಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಇದರ ಬಗ್ಗೆ ಅಲ್ಲಿನ ಜಿಲ್ಲಾಡಳಿತ ಮೈಸೂರು ಜಿಲ್ಲಾಡಳಿತಕ್ಕೆ ಮಾಹಿತಿ ರವಾನಿಸಿತ್ತು. ಈ ಹಿನ್ನೆಲೆ ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಪರಿಶೀಲನೆ ನಡೆಸುವಂತೆ ತಾಲೂಕು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ಈ ಸಂಬಂಧ ಬೆಳಗ್ಗೆ​​​ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್​ರೊಂದಿಗೆ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.