ಮೈಸೂರು: ಕೆಲ ದಿನಗಳಿಂದ ಆಹಾರ ಸಿಗದೆ ಬಳಲಿ ಮರದ ಮೇಲೆ ಕೂತಿದ್ದ ಕೋತಿಗಳಿಗೆ ಆಹಾರ ಮತ್ತು ನೀರು ನೀಡಿ ಪ್ರಾಣಿಪ್ರಿಯರು ಮಾನವೀಯತೆ ಮೆರೆದರು.
ನಗರದ ವೈದ್ಯಕೀಯ ಹಾಸ್ಟೆಲ್ ಆವರಣದಲ್ಲಿದ್ದ ಮರದ ಮೇಲೆ ಆಹಾರ ಸಿಗದೆ ಹಸಿವಿನಿಂದ ಬಳಲುತ್ತಿದ್ದ ಕೋತಿಗಳನ್ನು ನೋಡಿದ ಜನರು ಬಿಸ್ಕೆಟ್, ಬಾಳೆಹಣ್ಣು ಮತ್ತು ನೀರು ನೀಡಿದರು.