ETV Bharat / state

ಎಸ್​​ಪಿಬಿ ನಿಧನಕ್ಕೆ ಸುತ್ತೂರು ಸ್ವಾಮೀಜಿ, ಗಣಪತಿ ಶ್ರೀಗಳಿಂದ ಸಂತಾಪ

ಕೆನರಾ ಬ್ಯಾಂಕಿನಿಂದ ಪ್ರಾಯೊಜಿಸಿದ್ದ ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮದಲ್ಲಿ ಅವರು ಕಿರಿಯ ಕಲಾವಿದರಿಗೆ ನೀಡುತ್ತಿದ್ದ ಉತ್ತೇಜನವನ್ನು ಎಲ್ಲರೂ ಬಲ್ಲರು..

ಸುತ್ತೂರು ಶ್ರೀ
ಸುತ್ತೂರು ಶ್ರೀ
author img

By

Published : Sep 25, 2020, 9:10 PM IST

Updated : Sep 25, 2020, 9:57 PM IST

ಮೈಸೂರು : ಖ್ಯಾತ ಹಿನ್ನೆಲೆ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ನಿಧನಕ್ಕೆ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹಾಗೂ ಗಣಪತಿ ಸಚ್ಚಿದಾನಂದ ಶ್ರೀಗಳು ಸಂತಾಪ ಸೂಚಿಸಿದ್ದಾರೆ. ಮೈಸೂರು ಅವಧೂತ ದತ್ತಪೀಠಾಧ್ಯಕ್ಷ ಶ್ರೀಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು ಮಾತನಾಡಿ, ನಾದ ನಿಧಿ, ಗಾನಗಂಧರ್ವ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ನಿಧನದಿಂದ ತುಂಬ ದುಃಖವಾಗಿದೆ. ಅನೇಕ ಪ್ರಕಾರದ, ಭಾವಪೂರ್ಣ ಹಾಡುವಿಕೆಯಿಂದ ನಾದ ಸೇವೆ ಮಾಡಿ ಸಹಸ್ರ ಸಹಸ್ರ ಶ್ರೋತೃಗಳ ಹೃದಯದಲ್ಲಿ ಚಿರಂಜೀವಿಯಾಗಿದ್ದಾರೆ ಎಂದಿದ್ದಾರೆ.

ಗಣಪತಿ ಸಚ್ಚಿದಾನಂದ ಶ್ರೀಗಳ ಸಂತಾಪ

ಅವರ ಸರಳತೆ, ಸಂಗೀತವು ಅತಿ ಸಾಮಾನ್ಯನಿಗೂ ರಂಜಿಸಬೇಕೆಂಬ ಪ್ರಯತ್ನ ಶ್ಲಾಘನೀಯ. ಆಶ್ರಮದ ನಾದ ಮಂಟಪದಲ್ಲಿ ಅನೇಕ ಸಾರಿ ಬಾಲು ಅವರ ಸಿರಿಕಂಠದ‌ ಹಾಡುಗಳು ಮೈಸೂರಿನ ಸಂಗೀತ ಶ್ರೋತೃಗಳ, ದತ್ತ ಭಕ್ತರ ಹೃದಯದಲ್ಲಿ ಅವರ ಕಂಠ ಅಜರಾಮರವಾಗಿದೆ‌ ಎಂದು ತಿಳಿಸಿದರು. ಶ್ರೀಗಳ ಭಜನೆಗಳನ್ನು 'ಭಜನ ವೈಭವಮ್' ಎಂಬ ಧ್ವನಿ ಸುರುಳಿಯನ್ನು ಸಮರ್ಪಿಸಿ ಕೃತಾರ್ಥರಾಗಿದ್ದಾರೆ. ಬಾಲಸುಬ್ರಹ್ಮಣ್ಯಂ ಅವರ ಅಗಲಿಕೆಯಿಂದ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಭಗವಂತನು ಅವರಿಗೆ ಸದ್ಗತಿಯನ್ನು ಕರುಣಿಸಿ. ಅವರ ಕುಟುಂಬ ವರ್ಗಕ್ಕೆ, ಅಪಾರ ಅಭಿಮಾನಿಗಳಿಗೆ ಸ್ಥೈರ್ಯವನ್ನು ನೀಡಲೆಂದು ಪ್ರಾರ್ಥಿಸುತ್ತೇವೆ ಎಂದರು‌.

ಸುತ್ತೂರು ಶ್ರೀಗಳ ಕಂಬನಿ : ಖ್ಯಾತ ಗಾಯಕರಾಗಿದ್ದ ಎಸ್ ಪಿ ಬಾಲಸುಬ್ರಹ್ಮಣ್ಯಂ‌ ಅವರು ವಿಧಿವಶರಾದುದು ದುರ್ದೈವದ ಸಂಗತಿ. ಶ್ರೀಪತಿ ಪಂಡಿತಾರಾಧ್ಯುಲ ಬಾಲಸುಬ್ರಹ್ಮಣ್ಯಂರು ಚಲನಚಿತ್ರ ಸಂಗೀತ ಕ್ಷೇತ್ರದಲ್ಲಿ ಬದುಕಿದ್ದಾಗಲೇ ದಂತಕಥೆಯಾಗಿದ್ದರು. ಸುಮಾರು 66,000ಕ್ಕೂ ಹೆಚ್ಚು ಹಾಡುಗಳನ್ನು ಅವರ ಸಿರಿಕಂಠದಿಂದ ಮನೋಜ್ಞಗೊಳಿಸಿದ್ದ ಅಭಿಜಾತ ಕಲಾವಿದರು.

ಸುತ್ತೂರು ಮಠದ ಪ್ರಕಟಣೆ
ಸುತ್ತೂರು ಮಠದ ಪ್ರಕಟಣೆ

ಭಾರತೀಯ ಚಿತ್ರರಂಗದಲ್ಲಿ ನಾದಸುಧೆಯ ಛಾಪನ್ನು ಮೂಡಿಸಿದ್ದ ಮೇರು ಪ್ರತಿಭೆ. ಶ್ರೀ ಎಸ್​​ಪಿಬಿಯವರು ಸರಳ ಸಜ್ಜನ ವ್ಯಕ್ತಿಗಳಾಗಿದ್ದರು. ಕಿರಿಯರ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದ್ದರು. ಕೆನರಾ ಬ್ಯಾಂಕಿನಿಂದ ಪ್ರಾಯೊಜಿಸಿದ್ದ ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮದಲ್ಲಿ ಅವರು ಕಿರಿಯ ಕಲಾವಿದರಿಗೆ ನೀಡುತ್ತಿದ್ದ ಉತ್ತೇಜನವನ್ನು ಎಲ್ಲರೂ ಬಲ್ಲರು ಎಂದು ಸುತ್ತೂರು‌ ಮಠದ ಪೀಠಾಧಿಪತಿ‌ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ.

Last Updated : Sep 25, 2020, 9:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.