ETV Bharat / state

ಶಾಲಾ ಶ್ರೇಯೋಭಿವೃದ್ಧಿಗೆ ಹಣ ಸಂಗ್ರಹ.. ಆದೇಶ ಹಿಂಪಡೆಯುವಂತೆ ಸರ್ಕಾರಕ್ಕೆ ಹೆಚ್​ ವಿಶ್ವನಾಥ್ ಆಗ್ರಹ

author img

By

Published : Oct 22, 2022, 6:12 PM IST

ಶಾಲಾ ಶ್ರೇಯೋಭಿವೃದ್ಧಿಗೆ ಪೋಷಕರಿಂದ ಹಣ ಸಂಗ್ರಹ ಮಾಡುವ ನಿರ್ಧಾರಕ್ಕೆ ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ವಿರೋಧ ವ್ಯಕ್ತಪಡಿಸಿದ್ದಾರೆ.

collection-of-money-from-parents-for-school-credit-development
ಶಾಲಾ ಶ್ರೇಯೋಭಿವೃದ್ಧಿಗೆ ಪೋಷಕರಿಂದ ಹಣ ಸಂಗ್ರಹ ಆದೇಶವನ್ನು ಸರ್ಕಾರ ಹಿಂಪಡೆಯಬೇಕು

ಮೈಸೂರು: ರಾಜ್ಯ ಸರ್ಕಾರ ಶಾಲಾ ಶ್ರೇಯೋಭಿವೃದ್ಧಿಗೆ ಪೋಷಕರಿಂದ ಹಣ ಸಂಗ್ರಹ ಮಾಡುವಂತೆ ಹೊರಡಿಸಿರುವ ಆದೇಶವನ್ನು ಹಿಂಪಡೆಯುವಂತೆ ಮೈಸೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಆಗ್ರಹ ಮಾಡಿದ್ದಾರೆ.

ನಗರದಲ್ಲಿಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಸರ್ಕಾರ ಶಾಲಾ ಶಿಕ್ಷಣದ ದಿಕ್ಕು ತಪ್ಪಿಸುತ್ತಿದೆ. ಸರ್ಕಾರಿ ಶಾಲೆಗೆ ನೂರು ರೂಪಾಯಿ ಶುಲ್ಕ ಯಾಕೆ ಬೇಕು. ಸರ್ಕಾರಿ ಶಾಲೆಗಳಲ್ಲಿ ಓದೋರು ಆರ್ಥಿಕವಾಗಿ ಹಿಂದೆ ಇರುವವರು ಅವರ ಬಳಿ ಹಣ ಕೇಳುವ ಅಗತ್ಯವೇನಿದೆ ಎಂದು ಪ್ರಶ್ನಿಸಿದರು. ಅಲ್ಲದೇ ಇವತ್ತು ಸರ್ಕಾರವೇ ಪರೋಕ್ಷವಾಗಿ ಸರ್ಕಾರಿ ಶಾಲೆಗಳನ್ನು ಮುಚ್ಚುವ ಕೆಲಸವನ್ನು ಮಾಡುತ್ತಿದೆ. ಕನ್ನಡ ಶಾಲೆಗಳನ್ನು ಮುಚ್ಚೋದಕ್ಕೆ ಏನೇನೂ ಹುನ್ನಾರ ಬೇಕೋ ಅದೆಲ್ಲವನ್ನು ನಡೆಸುತ್ತಿದೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.

ಹಿಂದೆ ಸರ್ಕಾರದಿಂದಲೇ ಶಾಲಾ ನಿರ್ವಹಣೆಗೆ ವರ್ಷಕ್ಕಿಷ್ಟು ಅಂತ ಅನುದಾನ ನೀಡಲಾಗಿತ್ತು. ಆದರೆ ಈಗ ಅದೆಲ್ಲವನ್ನು ಸರ್ಕಾರದಿಂದ ಏಕಾಏಕಿ ನಿಲ್ಲಿಸಿದ್ದಾರೆ. ಶಾಲಾ ನಿರ್ವಹಣಾ ವೆಚ್ಚ ಅಂತ ನೂರು ರೂಪಾಯಿಯನ್ನು ವಿದ್ಯಾರ್ಥಿಗಳ ಪೋಷಕರಿಂದ ಶಾಲೆಗೆ ಕೊಡುಗೆ ಎಂದು ಹಣ ಪಡೆಯುವುದು ಎಷ್ಟು ಸರಿ. ರಾಜ್ಯ ಸರ್ಕಾರ ಶಾಲಾ ಶ್ರೇಯೋಭಿವೃದ್ಧಿಗೆ ಪೋಷಕರಿಂದ ಹಣ ಸಂಗ್ರಹ ಮಾಡುವಂತೆ ಹೊರಡಿಸಿರುವ ಆದೇಶವನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ದಲಿತರ ಮನೆಗೆ ಬರುವುದಾದರೆ ಕಾರ್ಯಕ್ರಮದೊಂದಿಗೆ ಬನ್ನಿ : ಬಿಜೆಪಿ ನಾಯಕರು ದಲಿತರ ಮನೆ ಊಟದ ವಿಚಾರ ಕುರಿತಂತೆ ಪ್ರತಿಕ್ರಿಯಿಸಿ ಹೆಚ್​ ವಿಶ್ವನಾಥ್, ಸ್ವಾತಂತ್ರ್ಯ ನಂತರದ 75 ವರ್ಷದ ಇತಿಹಾಸದಲ್ಲಿ ಈ ರೀತಿಯಾದ ಬೆಳವಣಿಗೆ ನಡೆದಿರಲಿಲ್ಲ. ಇಂದಿನ ಸರ್ಕಾರ ದಲಿತರ ಮನೆಗೆ ಊಟಕ್ಕೆ ಹೋಗಿ ರಾಜ್ಯದಲ್ಲಿ ಇನ್ನೂ ಅಸ್ಪೃಶ್ಯತೆ ಜಾರಿಯಲ್ಲಿದೆ ಅಂತ ಬಯಲು ಮಾಡಿದ್ದಾರೆ.

ದಲಿತರ ಮನೆಗೆ ಹೋಗಿ ಹೋಟೆಲ್​ ಊಟ ತರಿಸಿ ಹೊಸ ತಟ್ಟೆ ಲೋಟದೊಂದಿಗೆ ಊಟ ಮಾಡುತ್ತಿದ್ದಾರೆ. ಈ ರೀತಿ ಮಾಡಲು ದಲಿತರ ಮನೆಗೆ ಏಕೆ ಹೋಗಬೇಕು. ಈ ರೀತಿಯ ಬೆಳವಣಿಗೆ ಕರ್ನಾಟಕ ಸರ್ಕಾರಕ್ಕೆ ಒಳ್ಳೆಯ ಲಕ್ಷಣವಲ್ಲ. ಇವರೆಲ್ಲಾ ಸಂವಿಧಾನ ಶಿಲ್ಪಿ ಅಂಬೇಡ್ಕರ್​ಗೆ, ಸಂವಿಧಾನಕ್ಕೆ ಮತ್ತು ನಮ್ಮ ಭಾವನೆಗಳಿಗೆ ಧಕ್ಕೆಯುಂಟು ಮಾಡಿದಂತೆ. ರಾಜಕೀಯಕ್ಕಾಗಿ ದಲಿತರ ಮನೆಗೆ ಊಟಕ್ಕೆ ಹೋಗುವ ಬದಲು, ಒಂದು ಕಾರ್ಯಕ್ರಮದೊಂದಿಗೆ ಅವರ ಮನೆಗೆ ಹೋಗಿ ಎಂದು ಸಲಹೆ ನೀಡಿದರು.

ಪ್ರತಾಪ್ ಸಿಂಹ ದೊಡ್ಡ ವ್ಯಕ್ತಿ ಅವರ ಬಗ್ಗೆ ಏನು ಮಾತನಾಡಲಿ : ಟಿಪ್ಪು ಎಕ್ಸ್‌ಪ್ರೆಸ್‌ ರೈಲಿನ ಹೆಸರು ಬದಲಾವಣೆ ಉದ್ದೇಶ ಪೂರ್ವಕವಾಗಿ ಮಾಡಿರುವುದಾಗಿ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಉತ್ತರಿಸಿದ ಎಂ ಎಲ್ ಸಿ ವಿಶ್ವನಾಥ್ ಅವರು, ಪ್ರತಾಪ್ ಸಿಂಹ ಮೈಸೂರು ಮಹಾರಾಜರಿಗಿಂತ ದೊಡ್ಡವರು. ಮೈಸೂರು ಮಹಾರಾಜರಿಗಿಂತ ತಾನೇ ಜಾಸ್ತಿ ಕೆಲಸ ಮಾಡಿದ್ದೇನೆ ಅಂತಾ ಹೇಳಿದ್ದಾರೆ. ಅವರ ಬಗ್ಗೆ ನಾನೇನು ಮಾತನಾಡಲಿ ಅವರು ದೊಡ್ಡ ವ್ಯಕ್ತಿ ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ : ಸರ್ಕಾರಿ ಶಾಲೆಯಲ್ಲಿ ಹಣ ಸಂಗ್ರಹಕ್ಕೆ ಸುತ್ತೋಲೆ.. ಅದಕ್ಕೂ ನಮಗೂ ಸಂಬಂಧವೇ ಇಲ್ಲ- ಸಚಿವ ನಾಗೇಶ್

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.