ETV Bharat / state

'ಲವರ್ಸ್​ ಡೇಯಂದು MLC ಸ್ಥಾನಕ್ಕೆ ರಾಜೀನಾಮೆ, ಯಾವ ಪಕ್ಷದ ಮೇಲೆ ಲವ್ ಅಂತಾ ಅಂದೇ ಹೇಳ್ತೇನೆ': ಸಿ ಎಂ ಇಬ್ರಾಹಿಂ

ನನ್ನ ಮುಂದೆ ಮೂರು ಆಯ್ಕೆಗಳಿವೆ. ಒಂದು ಜೆಡಿಎಸ್, ಅಖಿಲೇಶ್ ಯಾದವ್, ಮಮತಾ ಬ್ಯಾನರ್ಜಿ ಆಗಿದ್ದು, ಈ ಬಗ್ಗೆ ಮುಂದೆ ತೀರ್ಮಾನ ಕೈಗೊಳ್ಳುತ್ತೇನೆ ಎಂದರು. ಫೆಬ್ರವರಿ ಕೊನೆಯ ವಾರ ಅಲ್ಪಅಸಂಖ್ಯಾತರು, ಲಿಂಗಾಯತರು ಹಾಗೂ ಒಕ್ಕಲಿಗರನ್ನು ಸೇರಿಸಿಕೊಂಡು ಅಲಿಂಗ ಸಮಾವೇಶ ನಡೆಸುತ್ತೇವೆ..

CM Ibrahim Will Resigning Council Post on February 14th
ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡುವ ದಿನಾಂಕ ಘೋಷಿಸಿದ ಸಿಎಂ ಇಬ್ರಾಹಿಂ
author img

By

Published : Feb 2, 2022, 4:12 PM IST

Updated : Feb 2, 2022, 8:13 PM IST

ಮೈಸೂರು : ಫೆಬ್ರವರಿ 14ರಂದು ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂದಿನ ರಾಜಕೀಯದ ಬಗ್ಗೆ ತೀರ್ಮಾನ ಮಾಡುತ್ತೇನೆ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ವಿಧಾನಪರಿಷತ್ ಸದಸ್ಯ ಸಿ ಎಂ ಇಬ್ರಾಹಿಂ ಹೇಳಿದರು.

ಸಿ ಎಂ ಇಬ್ರಾಹಿಂ ಮಾಧ್ಯಮಗೋಷ್ಟಿ

ನಗರದಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಮುಸ್ಲಿಮರು ಕಾಂಗ್ರೆಸ್​​​​​​​ನಿಂದ ಒಬ್ಬೊಬ್ಬರಾಗಿ ಹೊರ ಬರುತ್ತಿದ್ದಾರೆ. ಇದಕ್ಕೆ ಧರ್ಮ ಗುರುಗಳ ಬೆಂಬಲ ಇದೆ. ನಾನು ಫೆಬ್ರವರಿ 14ರಂದು ಪ್ರೇಮಿಗಳ ದಿನದಂದು ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿ, ನನ್ನ ಮುಂದಿನ ರಾಜಕೀಯ ನಿರ್ಧಾರ ಕೈಗೊಳ್ಳುತ್ತೇನೆ.

ನನ್ನ ಮುಂದೆ ಮೂರು ಆಯ್ಕೆಗಳಿವೆ. ಒಂದು ಜೆಡಿಎಸ್, ಅಖಿಲೇಶ್ ಯಾದವ್, ಮಮತಾ ಬ್ಯಾನರ್ಜಿ ಆಗಿದ್ದು, ಈ ಬಗ್ಗೆ ಮುಂದೆ ತೀರ್ಮಾನ ಕೈಗೊಳ್ಳುತ್ತೇನೆ ಎಂದರು. ಫೆಬ್ರವರಿ ಕೊನೆಯ ವಾರ ಅಲ್ಪಅಸಂಖ್ಯಾತರು, ಲಿಂಗಾಯತರು ಹಾಗೂ ಒಕ್ಕಲಿಗರನ್ನು ಸೇರಿಸಿಕೊಂಡು ಅಲಿಂಗ ಸಮಾವೇಶ ನಡೆಸುತ್ತೇವೆ.

ಸಿ ಎಂ ಇಬ್ರಾಹಿಂ ಮಾಧ್ಯಮಗೋಷ್ಟಿ

ಆ ನಂತರ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು. ಕಾಂಗ್ರೆಸ್ ನನ್ನ ಪಾಲಿಗೆ ಮುಗಿದ ಅಧ್ಯಾಯ.‌ ಅಲ್ಲಿ ಅಲ್ಪಸಂಖ್ಯಾತರಿಗೆ ಉಳಿಗಾಲವಿಲ್ಲ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವುದಿಲ್ಲ ಎಂದು ಭವಷ್ಯ ನುಡಿದರು.

ಇದನ್ನೂ ಓದಿ: ಸಚಿವ ಸ್ಥಾನದ ಮೇಲೆ ಕಣ್ಣು: ದೆಹಲಿಗೆ ಹಾರಲಿದ್ದಾರಂತೆ ರಮೇಶ್​ ಜಾರಕಿಹೊಳಿ

ಬಾದಾಮಿ ಕ್ಷೇತ್ರದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರ ಗೆಲುವಿಗೆ ನಾವು ಕಾರಣ. ಆದರೆ, ನನಗೆ 19 ಎಂಎಲ್ಸಿಗಳ ಬೆಂಬಲವಿದ್ದರೂ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲಿಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Feb 2, 2022, 8:13 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.