ETV Bharat / state

ಕಾಂಗ್ರೆಸ್​ನಲ್ಲಿ ಡಿಕೆಶಿ ಒಂದು ತೀರ, ಸಿದ್ದರಾಮಯ್ಯ ಮತ್ತೊಂದು ತೀರ: ಸಿಎಂ ಬೊಮ್ಮಾಯಿ

ರಾಜ್ಯದಲ್ಲಿ ರಿಮೋಟ್ ಕಂಟ್ರೋಲ್ ಮುಖ್ಯಮಂತ್ರಿ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಸಿಎಂ ಬೊಮ್ಮಾಯಿ ತಿರುಗೇಟು ನೀಡಿದರು.

cm basavaraja bommai
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
author img

By

Published : Jul 20, 2022, 12:25 PM IST

ಮೈಸೂರು: ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಅವರನ್ನು ಸಮರ್ಪಕವಾಗಿ ಕೆಲಸ ಮಾಡಲು ಅವರ ಪಕ್ಷದವರೇ ಬಿಡುತ್ತಿಲ್ಲ. ಕಾಂಗ್ರೆಸ್​ನಲ್ಲಿ ಆಂತರಿಕ ತಿಕ್ಕಾಟ ಶುರುವಾಗಿದೆ. ಡಿಕೆಶಿ ಹಾಗೂ ಸಿದ್ದರಾಮಯ್ಯ ನಾನೊಂದು ತೀರ, ನೀನೊಂದು ತೀರ ಎನ್ನುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಕಿಸಿದರು. ಅವರ ತಟ್ಟೆಯಲ್ಲೇನಿದೆ ಅನ್ನೋದನ್ನು ನೋಡುವುದು ಬಿಟ್ಟು ನಮ್ಮ ಬಗ್ಗೆ ಮಾತನಾಡಲು ಬರುತ್ತಾರೆ ಎಂದು ಗರಂ ಆದರು.

ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ನಾಡಿನೆಲ್ಲೆಡೆ ಉತ್ತಮ ಮಳೆಯಾಗುತ್ತಿದೆ. ಕಾವೇರಿ ಮತ್ತು ಕಬಿನಿ ಒಟ್ಟಿಗೆ ಆಷಾಢ ಮಾಸದಲ್ಲಿ ಭರ್ತಿಯಾಗಿದೆ. ಇದು ಬಹಳ ಅಪರೂಪ. ಹಾಗಾಗಿ ತಡಮಾಡದೇ ಎರಡು ಜಲಾಶಯಗಳಿಗೆ ಬಾಗಿನ ಅರ್ಪಿಸಲಾಗುವುದು ಎಂದು ತಿಳಿಸಿದರು.

ಜಿಎಸ್‌ಟಿ ರೂಪಿಸುವಾಗಲೇ ಆರಂಭದ 5 ವರ್ಷ ಮಾತ್ರ ರಾಜ್ಯಗಳಿಗೆ ಪಾಲು ಎಂದಿದ್ದರು. ಈಗ ಕೊರೊನಾದಿಂದ 2 ವರ್ಷಗಳ ರಾಜ್ಯದ ಆದಾಯ ಇಳಿದಿದೆ. ಈ ಕಾರಣಕ್ಕಾಗಿ 5 ವರ್ಷದ ಅವಧಿಯನ್ನು ಮತ್ತೆ ವಿಸ್ತರಿಸುವಂತೆ ಕೇಳಲಾಗಿತ್ತು. ಆದರೆ ಜಿಎಸ್​ಟಿ ಸಂವಿಧಾನಾತ್ಮಕವಾಗಿ ರೂಪಿಸಲಾಗಿರುವ ಕಾನೂನಾಗಿದ್ದು ತಕ್ಷಣ ಬದಲಾಯಿಸಲು ಆಗುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಅದರ ಬದಲು ಈ ಅವಧಿಯಲ್ಲಿ ರಾಜ್ಯಗಳಿಗೆ ಬಾಕಿ ಉಳಿದಿರುವ ಜಿಎಸ್​ಟಿ ಪಾಲನ್ನು ಕೇಂದ್ರ ಪಾವತಿಸುತ್ತಿದೆ ಎಂದು ಸಿಎಂ ತಿಳಿಸಿದರು.

ಇದನ್ನೂ ಓದಿ: ದೇವರ ದರ್ಶನಕ್ಕೆ ತೆರಳಿದ್ದಾಗ ಮನೆಗೆ ಕನ್ನ: ಕಳ್ಳರ ಪಾಲಾಯ್ತು ಮದುವೆಗೆ ಖರೀದಿಸಿಟ್ಟಿದ್ದ ಚಿನ್ನ

ಜುಲೈ 22ರಂದು ಸುಪ್ರೀಂಕೋರ್ಟ್​ಗೆ ಕ್ಷೇತ್ರ ಪುನರ್ ವಿಂಗಡಣೆ ಕುರಿತು ಪ್ರಮಾಣಪತ್ರ ಸಲ್ಲಿಸುತ್ತೇವೆ. ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ಬಿಬಿಎಂಪಿ ಚುನಾವಣೆ ನಡೆಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಮೈಸೂರು ಮೇಯರ್ ಚುನಾವಣೆಗೆ ಮೀಸಲಾತಿ ನಿಗದಿ ಮಾಡಲು ಶೀಘ್ರವೇ ಕ್ರಮವಹಿಸುತ್ತೇವೆ ಎಂದು ಅವರು ಸ್ಪಷ್ಟಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.