ETV Bharat / state

ಬಾಗಿಲು, ಕಿಟಕಿ ಮುರಿಯದೆ ಸಿನಿಮಾ ರೀತಿಯಲ್ಲಿ ಚಿನ್ನ ಕದ್ದ ಕಳ್ಳರು - ಮೈಸೂರು ಸುದ್ದಿ

ಮೈಸೂರಿನ ಸರಸ್ವತಿಪುರಂನ 7ನೇ ಕ್ರಾಸ್​​ನ ಮನೆಯೊಂದರಲ್ಲಿ ಮಧ್ಯರಾತ್ರಿ ಕಳ್ಳರು ಬಾಗಿಲಿನ ಬೀಗ ಹೊಡೆಯದೆ, ಕಿಟಕಿ ಮುರಿಯದೇ ಬುದ್ದಿವಂತಿಕೆಯಿಂದ ಕಳ್ಳತನ ಮಾಡಿದ್ದಾರೆ.

Cinema style theft in Mysore
ಬಾಗಿಲು, ಕಿಟಕಿ ಮುರಿಯದೆ ಸಿನಿಮಾ ರೀತಿಯಲ್ಲಿ ಚಿನ್ನ ಕದ್ದ ಕಳ್ಳರು
author img

By

Published : Sep 1, 2020, 7:42 PM IST

ಮೈಸೂರು: ಸಿನಿಮಾ ರೀತಿಯಲ್ಲಿ ಮನೆಯೊಂದರಲ್ಲಿ ಚಿನ್ನ ಕಳ್ಳತನ ಮಾಡಿರುವ ಘಟನೆ ನಗರದ ಸರಸ್ವತಿಪುರಂನಲ್ಲಿ ನಡೆದಿದೆ.
ನಗರದ ಸರಸ್ವತಿಪುರಂನ 7ನೇ ಕ್ರಾಸ್​​ನ ಮನೆಯೊಂದರಲ್ಲಿ ಮಧ್ಯರಾತ್ರಿ ಕಳ್ಳರು ಬಾಗಿಲಿನ ಬೀಗ ಹೊಡೆಯದೆ, ಕಿಟಕಿ ಮುರಿಯದೇ ಬುದ್ದಿವಂತಿಕೆಯಿಂದ ಕಳ್ಳತನ ಮಾಡಿದ್ದಾರೆ.

ಕಳ್ಳರು ಮನೆಯ ಬೀರುವಿನಲ್ಲಿದ್ದ ಕೆಜಿ ಗಟ್ಟಲೆ ಚಿನ್ನವನ್ನು ಕದ್ದು ಪರಾರಿಯಾಗಿದ್ದಾರೆ. ಕೊರೊನಾ ಸಂದರ್ಭದಲ್ಲಿ ಬ್ಯಾಂಕ್​​​ ಲಾಕರ್​​​ನಲ್ಲಿ ಇಟ್ಟಿದ್ದ ಚಿನ್ನದ ಒಡವೆಗಳನ್ನು ಮನೆಗೆ ತಂದು ಇಟ್ಟಿದ್ದರು. ಇದನ್ನು ನೋಡಿರುವ ವ್ಯಕ್ತಿಗಳೇ ಕಳ್ಳತನ ಮಾಡಿದ್ದಾರೆ ಎಂದು ಪೋಲಿಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಸರಸ್ವತಿಪುರಂ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ತನಿಖೆ ಕೈಗೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.