ETV Bharat / state

ಉದ್ಯಮಿ ಹೆಸರಲ್ಲಿ ಮಹಿಳೆಯರಿಗೆ ವಂಚನೆ: ಕೇರಳ ಮೂಲದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲು - Dowry harassment case registered in mysore

ಗಂಡನಿಂದ ವಿಚ್ಚೇದನ ಪಡೆದವರು ಮತ್ತು 40 ವರ್ಷ ಮೇಲ್ಪಟ್ಟ ಅವಿವಾಹಿತ ಶ್ರೀಮಂತ ಮಹಿಳೆಯರನ್ನ ಟಾರ್ಗೆಟ್ ಮಾಡಿ, ಅವರಿಂದ ಚಿನ್ನಾಭರಣ, ಹಣ ಪಡೆದು ವಂಚಿಸಿ ಕೇರಳ ಮೂಲದ ಚಾಲಾಕಿಯೊಬ್ಬ ಎಸ್ಕೇಪ್ ಆಗಿದ್ದಾನೆ ಎಂದು ಮೈಸೂರು ನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರು ದೂರು ನೀಡಿದ್ದಾರೆ.

ಕೇರಳ ಮೂಲದ ವ್ಯಕ್ತಿ ಸುನೀಶ್ ಪಿಳ್ಳೆ
ಕೇರಳ ಮೂಲದ ವ್ಯಕ್ತಿ ಸುನೀಶ್ ಪಿಳ್ಳೆ
author img

By

Published : Nov 4, 2022, 4:12 PM IST

ಮೈಸೂರು: ಉದ್ಯಮಿಯ ಮುಖವಾಡ ಧರಿಸಿ, ಶ್ರೀಮಂತ ವಿಚ್ಚೇದನ ಮತ್ತು ಅವಿವಾಹಿತ ಮಹಿಳೆಯರನ್ನ ಪರಿಚಯಿಸಿಕೊಂಡು ಮದುವೆಯಾಗಿ ಅವರಿಂದ ಹಣ ಚಿನ್ನಾಭರಣ ಪಡೆದು ವಂಚನೆ ಮಾಡುತ್ತಿರುವ ಕೇರಳ ಮೂಲದ ಚಾಲಾಕಿ ವಿರುದ್ದ ಮೈಸೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಂಡನಿಂದ ವಿಚ್ಚೇದನ ಪಡೆದವರು ಮತ್ತು 40 ವರ್ಷ ಮೇಲ್ಪಟ್ಟ ಅವಿವಾಹಿತ ಶ್ರೀಮಂತ ಮಹಿಳೆಯರನ್ನ ಟಾರ್ಗೆಟ್ ಮಾಡಿ, ಅವರಿಂದ ಚಿನ್ನಾಭರಣ, ಹಣ ಪಡೆದು ವಂಚಿಸಿ ಎಸ್ಕೇಪ್ ಆಗಿದ್ದಾನೆ ಎಂದು ಮೈಸೂರು ನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರು ದೂರು ನೀಡಿದ್ದಾರೆ. ಮೈಸೂರಿನ ವಿಜಯ ನಗರ ನಿವಾಸಿ ಪ್ರೀತಿ ಸಿಂಗ್ ಕೇರಳ ಮೂಲದ ನಿವಾಸಿ ಸುನೀಶ್ ಪಿಳ್ಳೆ(33)ವಿರುದ್ದ ಪ್ರಕರಣ ದಾಖಲಿಸಿದ್ದಾರೆ.

ಕೇರಳ ಮೂಲದ ನಿವಾಸಿ ಸುನೀಶ್ ಪಿಳ್ಳೆ
ಕೇರಳ ಮೂಲದ ನಿವಾಸಿ ಸುನೀಶ್ ಪಿಳ್ಳೆ

ಪ್ರೀತಿ ಸಿಂಗ್ ಹಾಗೂ ಸುನೀಲ್ ಪಿಳ್ಳೆ ಐದು ವರ್ಷದ ಹಿಂದೆ ವಿವಾಹವಾಗಿದ್ದರು. ಜೋಡಿಗೆ ನಾಲ್ಕು ವರ್ಷದ ಹೆಣ್ಣು ಮಗುವಿದ್ದು, ವಿವಾಹದ ಬಳಿಕ ಆಗಾಗ ಹಣಕ್ಕಾಗಿ ಪೀಡಿಸುತ್ತಿದ್ದ. ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಅಡವಿಟ್ಟು ಲಕ್ಷಾಂತರ ರೂ. ಪಡೆದಿದ್ದರು ಸಹ ಆಗಾಗ ಮನೆಗೆ ಬಂದು ಹಣಕ್ಕಾಗಿ ಪೀಡಿಸುತ್ತಿದ್ದ. ಈ ಬಗ್ಗೆ ಸುನೀಶ್ ಪಿಳ್ಳೆ ಅವರ ಪೋಷಕರಿಗೆ ಮಾಹಿತಿ ನೀಡಿದ್ದೆ ಸಮಸ್ಯೆ ಬಗೆಹರಿಸುವುದಾಗಿ ಹೇಳಿ ಕೊನೆಗೆ ನಮಗೆ ಯಾವುದೇ ಸಂಬಂಧವಿಲ್ಲ ಎಂದು ತಪ್ಪಿಸಿಕೊಂಡಿದ್ದಾರೆ.

ಸುನೀಲ್ ಸೇರಿದಂತೆ ಕುಟುಂಬದ ನಾಲ್ವರ ವಿರುದ್ದ ವರದಕ್ಷಿಣೆ ಕಿರುಕುಳ ಮತ್ತು ಕೌಟುಂಬಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದಾರೆ ಎಂದು ಸಂತ್ರಸ್ತ ಮಹಿಳೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಜೊತೆಗೆ ಈತ ಮ್ಯಾಟ್ರಿಮೋನಿಯಲ್ಲಿ ಪರಿಚಯವಾದ ವೈದ್ಯರು, ಸಾಫ್ಟ್‌ವೇರ್ ಇಂಜಿನಿಯರ್, ಶ್ರೀಮಂತ ವಿಚ್ಛೇದಿತ ಮಹಿಳೆಯರನ್ನು ಪರಿಚಯ ಮಾಡಿಕೊಂಡು, ವಿವಾಹವಾಗಿ ಲಕ್ಷಾಂತರ ರೂ. ಪಡೆದು ವಂಚಿಸಿದ್ದಾರೆ. 12 ಕ್ಕೂ ಹೆಚ್ಚು ಮಂದಿ ಮಹಿಳೆಯರನ್ನು ಈತ ವಂಚಿಸಿದ್ದಾನೆ ಎಂದು ಸಂತ್ರಸ್ತೆ ಮಹಿಳೆ ದೂರಿನಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಹಣ ಪಡೆದು ವಂಚಿಸಿ ಪರಾರಿ: ಸುನೀಲ್ ಮ್ಯಾಟ್ರಿಮೋನಿಯಲ್ಲಿ ಶ್ರೀಮಂತ ಉದ್ಯಮಿ ಎಂದು ಪ್ರೊಫೈಲ್ ಕ್ರಿಯೇಟ್ ಮಾಡಿಕೊಂಡು ಶ್ರೀಮಂತ ಮಹಿಳೆಯರನ್ನು ಪರಿಚಯಿಸಿಕೊಂಡು ಮದುವೆಯಾಗುತ್ತಿದ್ದ ಎನ್ನಲಾಗಿದ್ದು, ಬಳಿಕ ಅವರೊಂದಿಗೆ ಕೆಲ ತಿಂಗಳ ಕಾಲ ಸಂಸಾರ ನಡೆಸಿ, ಉದ್ಯಮದಲ್ಲಿ ನಷ್ಟವಾಗಿದೆ ಎಂದು ಹಣ ಪಡೆದು ವಂಚಿಸಿ ಪರಾರಿಯಾಗುತ್ತಿದ್ದ ಬಗ್ಗೆ ಈಗಾಗಲೇ ಬೆಂಗಳೂರಿನಲ್ಲಿ ನಾಲ್ಕೈದು ಪ್ರಕರಣಗಳು ದಾಖಲಾಗಿದೆ.

ಲುಕ್ ಔಟ್ ನೋಟಿಸ್ ಜಾರಿ: ಈತನ ವಿರುದ್ದ ಕೇರಳದಲ್ಲಿ ಅಪಹರಣ ಪ್ರಕರಣ ಕೂಡ ದಾಖಲಾಗಿದ್ದು, ಸ್ಥಳೀಯ ಪೊಲೀಸರು ಲುಕ್ ಔಟ್ ನೋಟಿಸ್ ಕೂಡ ಜಾರಿ ಮಾಡಿದ್ದಾರೆ. ಈತನ ಪತ್ತೆಗೆ ಮೈಸೂರು ಸೇರಿದಂತೆ ಎಲ್ಲೆಡೆ ಶೋಧ ಕಾರ್ಯ ನಡೆಯುತ್ತಿದೆ.

ಓದಿ: 4.5 ಕೆಜಿ ನಕಲಿ ಚಿನ್ನ ಅಡವಿಟ್ಟು ಮೋಸ: ನಗರಸಭೆ ಮಾಜಿ‌ ಉಪಾಧ್ಯಕ್ಷರ ಮಗ, 18 ಮಂದಿ ವಿರುದ್ಧ ದೂರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.