ಮೈಸೂರು : ಲಾಕ್ಡೌನ್ನಲ್ಲಿ ದೇವಾಲಯಕ್ಕೆ ಭಕ್ತರಿಗೆ ನಿಷೇಧವಿದ್ದರೂ ಸಹ ನಿತ್ಯವೂ ಪೂಜಾ ಕೈಂಕರ್ಯವು ಯಾವುದೇ ಅಡಚಣೆ ಇಲ್ಲದೆ ಎಂದಿನಂತೆ ಚಾಮುಂಡೇಶ್ವರಿ ತಾಯಿಗೆ ನಡೆಯುತ್ತಿದೆ.
ನಾಡ ಅಧಿದೇವತೆ ಚಾಮುಂಡೇಶ್ವರಿ ದೇವಾಲಯಕ್ಕೆ ಕೋವಿಡ್ ಹಿನ್ನೆಲೆ ಕಳೆದ 2 ತಿಂಗಳಿಂದ ಭಕ್ತರಿಗೆ ನಿಷೇಧ ಹೇರಲಾಗಿದೆ. ಆದರೆ, ಚಾಮುಂಡೇಶ್ವರಿಯ ಮೂಲ ಮೂರ್ತಿಗೆ ಎಂದಿನಂತೆ ಅಭಿಷೇಕ, ಅಲಂಕಾರ, ಮಹಾ ಮಂಗಳಾರತಿ ನಡೆಯುತ್ತಿದೆ.
ಉತ್ಸವ ಮೂರ್ತಿ ಚಾಮುಂಡಿ ತಾಯಿಗೆ ದೇವಾಲಯದ ಒಳಗಡೆ ಮಂಗಳ ವಾಧ್ಯದೊಂದಿಗೆ ಪ್ರತಿ ದಿನ ಉತ್ಸವ ನಡೆಯುತ್ತಿದೆ. ರಾಜ ಪರಂಪರೆಯಿಂದಲೂ ಪ್ರತಿ ದಿನ ದೇವಾಲಯದಲ್ಲಿ ಪೂಜೆ ನಡೆಯುವುದು ಸಂಪ್ರದಾಯವಾಗಿದೆ.
ಓದಿ: ಸಿಡಿ ಕೇಸ್ ಪಿಐಎಲ್ ವಿಚಾರಣೆಗೆ ಅರ್ಹವಲ್ಲ: ಜಾರಕಿಹೊಳಿ ಪರ ವಕೀಲರಿಂದ ಆಕ್ಷೇಪಣೆ ಸಲ್ಲಿಕೆ