ETV Bharat / state

ಮೈಸೂರಿನ ಚಾಮರಾಜೇಂದ್ರ ಮೃಗಾಲಯ ಈಗ ಸಂಪೂರ್ಣ​ ಪ್ಲಾಸ್ಟಿಕ್​​​​​ ಮುಕ್ತ - ಪ್ಲಾಸ್ಟಿಕ್ ಬಾಟಲ್ ಹಾಗೂ ಕವರ್​

ಪ್ಲಾಸ್ಟಿಕ್ ನಿಷೇಧ ಅಷ್ಟೊಂದು ಸುಲಭದ ಕೆಲಸವಲ್ಲ. ಆದರೆ ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಇಂತಹ ಕಷ್ಟದ ಕೆಲಸವನ್ನು ಸುಲಭವಾಗಿಸಿ, ಮೃಗಾಲಯವನ್ನ ಸಂಪೂರ್ಣ ಪ್ಲಾಸ್ಟಿಕ್​ ಮುಕ್ತವನ್ನಾಗಿ ಮಾಡಲಾಗಿದೆ.

ಮೈಸೂರಿನ ಚಾಮರಾಜೇಂದ್ರ ಮೃಗಾಲಯ ಈಗ ಸಂಪೂರ್ಣ​ ಪ್ಲಾಸ್ಟಿಕ್ ಮುಕ್ತ
author img

By

Published : Jul 31, 2019, 6:22 PM IST

ಮೈಸೂರು: ಪ್ಲಾಸ್ಟಿಕ್ ನಿಷೇಧ ಅಷ್ಟೊಂದು ಸುಲಭದ ಕೆಲಸವಲ್ಲ. ಆದರೆ ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಇಂತಹ ಕಷ್ಟದ ಕೆಲಸವನ್ನು ಸುಲಭವಾಗಿಸಿ, ಮೃಗಾಲಯವನ್ನ ಸಂಪೂರ್ಣ ಪ್ಲಾಸ್ಟಿಕ್​ ಮುಕ್ತವನ್ನಾಗಿ ಮಾಡಲಾಗಿದೆ.

ಮೈಸೂರಿನ ಚಾಮರಾಜೇಂದ್ರ ಮೃಗಾಲಯ ಈಗ ಸಂಪೂರ್ಣ​ ಪ್ಲಾಸ್ಟಿಕ್ ಮುಕ್ತ

ಮೈಸೂರು ಮೃಗಾಲಯದಲ್ಲಿ 1500ಕ್ಕೂ ಹೆಚ್ಚಿನ ಪ್ರಾಣಿ ಪಕ್ಷಿಗಳಿವೆ. ಪ್ರತಿ ವರ್ಷ ಅಂದಾಜು 20ರಿಂದ 25 ಲಕ್ಷ ಪ್ರವಾಸಿಗರು ಈ ಮೃಗಾಲಯಕ್ಕೆ ಭೇಟಿ ನೀಡುತ್ತಾರೆ. ಇಂತಹ ಪ್ರವಾಸಿಗರು ಪ್ರಾಣಿ ಪಕ್ಷಿಗಳನ್ನು ನೋಡಲು ಹೋಗುವ ಸಂದರ್ಭದಲ್ಲಿ ಕೈಯಲ್ಲಿ ಪ್ಲಾಸ್ಟಿಕ್​ ಕವರ್​ನಲ್ಲಿ ತಿಂಡಿ‌-ತಿನಿಸುಗಳನ್ನು ತೆಗೆದುಕೊಂಡು ಹೋಗಿ ಮೃಗಾಲಯದಲ್ಲಿ ತಿಂದು ಎಲ್ಲಂದರಲ್ಲಿ ಬಿಸಾಡುವುದು ಸಾಮಾನ್ಯವಾಗಿದೆ.‌

ಹೀಗೆ ಬಿಸಾಡಿದ ಪ್ಲಾಸ್ಟಿಕ್ ಬಾಟಲ್ ಹಾಗೂ ಕವರ್​ಗಳನ್ನು ತೆಗೆದು ಹಾಕುವುದೇ ಮೃಗಾಲಯದ ಕೆಲಸಗಾರರಿಗೆ ದೊಡ್ಡ ಸವಾಲಾಗಿತ್ತು. ಇಂತಹ ಸಮಸ್ಯೆಯನ್ನು ಹೋಗಲಾಡಿಸಲು ಮೃಗಾಲಯ ಹೊಸ ಉಪಾಯವನ್ನು ಕಳೆದ ವರ್ಷ ಕಂಡು ಹಿಡಿದಿದೆ. ಇದಕ್ಕಾಗಿ ಮೃಗಾಲಯದ ಒಳಗಡೆ ಪ್ರವೇಶ ದ್ವಾರದ ಪಕ್ಕದಲ್ಲಿ ಒಂದು ಕೌಂಟರ್ ತೆರೆಯಲಾಗಿದೆ. ಈ ಕೌಂಟರ್​ನಲ್ಲಿ 5 ಜನ ಸಿಬ್ಬಂದಿ ಇದ್ದು, ಪ್ರವಾಸಿಗರು ತರುವ ತಿಂಡಿಗಳ ಪ್ಲಾಸ್ಟಿಕ್ ಕವರ್​ಗಳನ್ನ ಅಲ್ಲೇ ತೆಗೆದು ಪೇಪರ್ ಕವರ್​ನಲ್ಲಿ ಹಾಕಿ ಕೊಡಲಾಗುತ್ತದೆ.

ಇನ್ನು, ನೀರಿನ ಬಾಟಲ್​ಗೆ ಬಾರ್​ ಕೋಡ್ ಇರುವ ಒಂದು ಸ್ಟಿಕ್ಕರ್ ಹಾಕಲಾಗುತ್ತದೆ. ಸ್ಟಿಕ್ಕರ್ ಹಾಕಿದ ತಕ್ಷಣ ಅವರಿಂದ 10 ರೂಪಾಯಿ ಹಣ ಪಡೆಯಲಾಗುತ್ತದೆ. ಮೃಗಾಲಯವನ್ನು ನೋಡಿದ ಪ್ರವಾಸಿಗರು ಮೃಗಾಲಯದಿಂದ ಹೊರ ಹೋಗುವಾಗ ಬಾರ್ ​ಕೋಡ್ ಇರುವ ಬಾಟಲ್ ನೀಡಿದರೆ 10 ರೂ. ವಾಪಾಸ್ ನೀಡಲಾಗುವುದು. ನಂತರ ಆ ಪ್ಲಾಸ್ಟಿಕ್ ಬಾಟಲ್​ನ್ನು ಅಲ್ಲೇ ಡಬ್ಬದಲ್ಲಿ ಹಾಕಲಾಗುವುದು. ಈ ವ್ಯವಸ್ಥೆ ಕಳೆದ 1 ವರ್ಷದ ಹಿಂದೆ ಮೃಗಾಲಯದಲ್ಲಿ ಜಾರಿಗೆ ಬಂದಿದ್ದು, ಇದರಿಂದ ಮೃಗಾಲಯದ ಒಳಗೆ ಪ್ಲಾಸ್ಟಿಕ್ ಸಮಸ್ಯೆಯೇ ಇಲ್ಲದಂತಾಗಿದೆ.

Intro:ಮೈಸೂರು: ಮೃಗಾಲಯದಲ್ಲಿ ಪ್ಲಾಸ್ಟಿಕ್ ನಿಷೇಧ ಮಾಡಿ ಒಂದು ವರ್ಷ ಕಳೆದಿದ್ದು ಇಲ್ಲಿ ಪ್ಲಾಸ್ಟಿಕ್ ಅನ್ನೂ ಸಂಪೂರ್ಣವಾಗಿ ನಿಷೇಧ ಮಾಡುವ ಪ್ರಯತ್ನ ಯಶಸ್ವಿ ಆಗಿದೆ.
‌ಇದು ಯಾವ ರೀತಿ ಯಶಸ್ವಿ ಆಯಿತು ಎಂಬ ಇಟ್ರೆಂಸ್ಟಿಗ್ ಸುದ್ದಿ ಇಲ್ಲಿದೆ.

Body:ಪ್ಲಾಸ್ಟಿಕ್ ನಿಷೇಧ ಅಷ್ಟೊಂದು ಸುಲಭದ ಕೆಲಸವಲ್ಲ, ಆದರೆ ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಇಂತಹ ಕಷ್ಟದ ಕೆಲಸವನ್ನು ಬಹಳ ಸುಲಭವಾಗಿಸಿದ್ದಾರೆ. ಹೇಗೆ ಎನ್ನೂತ್ತಿರ ಇಲ್ಲಿ ನೋಡಿ!
ಮೈಸೂರು ಮೃಗಾಲಯದಲ್ಲಿ ೧೫೦೦ ಕ್ಕೂ ಹೆಚ್ಚಿನ ಪ್ರಾಣಿ ಪಕ್ಷಿಗಳಿವೆ. ಪ್ರತಿವರ್ಷ ಅಂದಾಜು ೨೦ ರಿಂದ ೨೫ ಲಕ್ಷ ಪ್ರವಾಸಿಗರು ಈ ಮೃಗಾಲಯಕ್ಕೆ ಭೇಟಿ ನೀಡುತ್ತಾರೆ. ಇಂತಹ ಪ್ರವಾಸಿಗರು ಪ್ರಾಣಿ ಪಕ್ಷಿಗಳನ್ನು ನೋಡಲು ಹೋಗುವ ಸಂದರ್ಭದಲ್ಲಿ ತಮ್ಮ ಕೈಯಲ್ಲಿ ಪ್ಲಾಸ್ಟಿಕ್ ನಲ್ಲಿ ಹಾಕಿದ ತಿಂಡಿ‌-ತಿನಿಸುಗಳನ್ನು ತೆಗೆದುಕೊಂಡು ಹೋಗಿ ಮೃಗಾಲಯದಲ್ಲಿ ತಿಂದು ಎಲ್ಲಂದರಲ್ಲಿ ಬಿಸಾಡುವುದು ಸಾಮಾನ್ಯವಾಗಿದೆ.‌ ಹೀಹೆ ಬಿಸಾಡಿದ ಪ್ಲಾಸ್ಟಿಕ್ ಬಾಟಲ್ ಹಾಗೂ ಪ್ಲಾಸ್ಟಿಕ್ ಕವರ್ ಗಳನ್ನು ತೆಗೆದು ಹಾಕುವುದೇ ಮೃಗಾಲಯದ ಕೆಲಸಗಾರರಿಗೆ ದೊಡ್ಡ ಸವಾಲಾಗಿತ್ತು. ಇಂತಹ ಕೆಲಸವನ್ನು ಸಮಸ್ಯೆಯನ್ನು ಹೋಗಲಾಡಿಸಲು ಮೃಗಾಲಯ ಹೊಸ ಉಪಾಯವನ್ನು ಕಳದ ವರ್ಷ ಕಂಡು ಹಿಡಿದಿದೆ.

ಏನಿದು ಉಪಾಯ:- ಮೃಗಾಲಯಕ್ಕೆ ಭೇಟಿ ನೀಡುವ ಪ್ರವಾಸಿಗರು ಮೃಗಾಲಯದ ಒಳಗಡೆ ಪ್ರವೇಶ ದ್ವಾರದ ಪಕ್ಕದಲ್ಲಿ ಒಂದು ಕೌಂಟರ್ ತೆರೆಯಲಾಗಿದೆ. ಈ ಕೌಂಟರ್ ನಲ್ಲಿ ೩ ಜನ ಸಿಬ್ಬಂದಿಗಳು ಪ್ಲಾಸ್ಟಿಕ್ ಕವರ್ ನಲ್ಲಿ ತರುವ ತಿಂಡಿಗಳನ್ನು ಅಲ್ಲೇ ಪ್ಲಾಸ್ಟಿಕ್ ಕವರ್ ತೆಗೆದು ಪೇಪರ್ ಕವರ್ ನಲ್ಲಿ ಹಾಕಿ ಕೊಡಲಾಗುತ್ತದೆ.
ಮತ್ತು ನೀರಿನ ಬಾಟಲ್ ಗೆ ಬಾರ್ ಕೋಡ್ ಇರುವ ಒಂದು ಸ್ಟಿಕ್ಕರ್ ಹಾಕಲಾಗುತ್ತದೆ. ಸ್ಟಿಕ್ಕರ್ ಹಾಕಿದ ತಕ್ಷಣ ಅವರಿಂದ ೧೦ ರೂಪಾಯಿ ಹಣ ಪಡೆಯಲಾಗುತ್ತದೆ.
ಮೃಗಾಲಯವನ್ನು ನೋಡಿದ ಪ್ರವಾಸಿಗರು ಮೃಗಾಲಯದಿಂ ಹೊರ ಹೋಗುವಾಗ ಬಾರ್ ಕೋಡ್ ಇರುವ ಬಾಟಲ್ ಅನ್ನು ನೀಡಿದರೆ ಹತ್ತು ರೂಪಾಯಿ ವಾಪಾಸ್ ನೀಡಲಾಗುವುದು.
ನಂತರ ಆ ಪ್ಲಾಸ್ಟಿಕ್ ಬಾಟಲ್ ಅನ್ನು ಅಲ್ಲೇ ಡಬ್ಬದಲ್ಲಿ ಹಾಕಲಾಗುವುದು.
ಈ ವ್ಯವಸ್ಥೆ ಕಳೆದ ೧ ವರ್ಷದ ಹಿಂದೆ ಮೃಗಾಲಯದಲ್ಲಿ ಜಾರಿಗೆ ಬಂದಿದ್ದು ಇದರಿಂದ ಮೃಗಾಲಯದ ಒಳಗೆ ಪ್ಲಾಸ್ಟಿಕ್ ಸಮಸ್ಯೆ ಇಲ್ಲ. ಪ್ರಾಣಿಗಳಿಗೂ ಕಿರಿ ಕಿರಿ ಇಲ್ಲ, ಮೃಗಾಲಯ ಈಗ ಶೇಕಡಾ ೧೦೦ಕ್ಕೇ ೧೦೦% ರಷ್ಟು ಪ್ಲಾಸ್ಟಿಕ್ ಮುಕ್ತವಾಗಿದೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.