ETV Bharat / state

ನಕಲಿ ಔಷಧಿ ನೀಡಿ ವಂಚಿಸುತ್ತಿದ್ದ ಜಾಲ ಪತ್ತೆ; ನಾಲ್ವರ ಬಂಧನ

author img

By

Published : Jan 9, 2021, 7:23 AM IST

ಆರೋಪಿ ಕುಮಾರ್ ಗುರಪ್ಪ ಬಾಗಲ್​ಕೋಟ್ ಬೆಳಗಾವಿಯ ತನ್ನ ಊರುಗಳ ಕಡೆಯಿಂದ ಮುಗ್ದ ಹುಡುಗರನ್ನ ಕರೆದುಕೊಂಡು ಬಂದು ಈ ದಂಧೆಯಲ್ಲಿ ಬಳಸಿಕೊಳ್ಳುತ್ತಿದ್ದ ಎಂದು ತಿಳಿದುಬಂದಿದೆ.

fraud
ವಂಚನೆ

ಮೈಸೂರು: ನಕಲಿ ಆಯುರ್ವೇದಿಕ್ ಔಷಧಿ ಅಂಗಡಿಗಳನ್ನು ತೆರೆದು ಸಾರ್ವಜನಿಕರಿಗೆ ವಂಚಿಸುತ್ತಿದ್ದ ನಾಲ್ವರು ಬೆಳಗಾವಿ ಮೂಲದ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತರು ಬೆಳಗಾವಿ ಜಿಲ್ಲೆಯ ಪ್ರಶಾಂತ ಅರ್ಜುನ್ ತಳವಾರ, ಚಂದ್ರು ಮುನ್ನವ್ವ ಇರಗಾರ್, ಹರ್ಷದ್ ಮೋಹನ್ ಪವಾರ ಹಾಗೂ ಪ್ರಮುಖ ಆರೋಪಿ ಕುಮಾರ್ ಗುರಪ್ಪ ಬಾಗಲಕೋಟ. ಈ ನಾಲ್ವರು ಮೈಸೂರು, ಬೆಂಗಳೂರು, ಹೈದರಾಬಾದ್, ಹುಬ್ಬಳ್ಳಿ ಸೇರಿದಂತೆ ಹಲವು ಕಡೆ ನಕಲಿ ಆಯುರ್ವೇದಿಕ್ ಔಷಧಿ ಕೇಂದ್ರಗಳನ್ನು ತೆರೆದು ಅಮಾಯಕ ಜನರಿಗೆ ನಕಲಿ ಆಯುರ್ವೇದಿಕ್ ಔಷಧಿ ನೀಡಿ ವಂಚಿಸುತ್ತಿದ್ದರು.

ಬಂಧಿತರು ಈ ಹಿಂದೆ ಹುಬ್ಬಳ್ಳಿ ಹಾಗೂ ಆಂಧ್ರ ಪ್ರದೇಶಗಳಲ್ಲಿ ನಕಲಿ ಆಯುರ್ವೇದಿಕ್ ಔಷಧಿ ಮಾರಾಟ ಮಾಡಿದ ಪ್ರಕರಣಗಳಲ್ಲಿ ಬಂಧಿತರಾಗಿದ್ದರು ಎಂದು ವಿಚಾರಣೆಯಿಂದ ತಿಳಿದು ಬಂದಿದೆ. ಇನ್ನು ಆರೋಪಿಗಳು ನಾಲ್ವರು ವಿಮಾನದಲ್ಲೇ ಓಡಾಟ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ.

ಪ್ರಮುಖ ಆರೋಪಿ ಕುಮಾರ್ ಗುರಪ್ಪ ಬಾಗಲಕೋಟ ಬೆಳಗಾವಿಯ ತನ್ನ ಊರುಗಳ ಕಡೆಯಿಂದ ಮುಗ್ದ ಹುಡುಗರನ್ನು ಕರೆದುಕೊಂಡು ಬಂದು ಈ ದಂಧೆಯಲ್ಲಿ ಬಳಸಿಕೊಳ್ಳುತ್ತಿದ್ದ. ನಕಲಿ ಆಯುರ್ವೇದಿಕ್ ಸೆಂಟರ್​ಗಳ ಮೇಲೆ ನಗರದ ಸಿಸಿಬಿ ಪೊಲೀಸರು ದಾಳಿ ಮಾಡುತ್ತಿದ್ದಂತೆ ಆರೋಪಿ ಕುಮಾರ್ ಮೈಸೂರು ವಿಮಾನ ನಿಲ್ದಾಣದಿಂದ ಬೆಳಗಾವಿಗೆ ಪರಾರಿ ಆಗಲು ಯತ್ನಿಸುತ್ತಿದ್ದಾಗ ಸಿಸಿಬಿ ಪೊಲೀಸರು ಮೈಸೂರು ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗ: ಹೆತ್ತ ಮಕ್ಕಳನ್ನು ಕೊಂದ ತಾಯಿ ನಿಧನ

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅಂತಾರಾಜ್ಯ ನಕಲಿ ಆಯುರ್ವೇದಿಕ್ ಔಷಧ ಜಾಲದಲ್ಲಿ ನಾಲ್ವರನ್ನು ಬಂಧಿಸಿ, ವಿಚಾರಣೆ ನಡೆಸಿದ್ದು ನಕಲಿ ಆಯುರ್ವೇದಿಕ್ ಔಷಧಿಗಳನ್ನು ವಶ ಪಡಿಸಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.