ETV Bharat / state

ನಾಳೆ ಬಜೆಟ್: ಮೈಸೂರು ಭಾಗದ ಜನರ ನಿರೀಕ್ಷೆಗಳೇನು?

ನಾಳೆ ಸಿಎಂ ಬೊಮ್ಮಾಯಿ ಅವರು ಚುನಾವಣಾ ಪೂರ್ವ ಬಜೆಟ್ ಮಂಡಿಸಲಿದ್ದಾರೆ.

ETV India interview with Suresh Jain from Mysore
ಮೈಸೂರಿನ ಸುರೇಶ್ ಜೈನ್ ಅವರೊಂದಿಗೆ ಈಟಿವಿ ಭಾರತ ಸಂದರ್ಶನ
author img

By

Published : Feb 16, 2023, 9:57 PM IST

ಮೈಸೂರು: ಈ ಬಾರಿಯ ಬಜೆಟ್‌ ಮೇಲೆ ಹಳೇ ಮೈಸೂರು ಭಾಗದ ನಿರೀಕ್ಷೆಗಳೇನು?. ಚಿತ್ರನಗರಿಯ ಕನಸು, ದಸರಾ ಪ್ರಾಧಿಕಾರ ರಚನೆ, ಶಿಥಿಲಾವಸ್ಥೆ ತಲುಪಿರುವ ಪಾರಂಪರಿಕ ಕಟ್ಟಡಗಳ ಪುನಶ್ಚೇತನಕ್ಕೆ ಅನುದಾನ ಹೀಗೆ ಬಜೆಟ್‌ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿವೆ. ಈ ಬಗ್ಗೆ ಜಿಲ್ಲಾ ಸಣ್ಣ ಕೈಗಾರಿಕೆ ಸಂಘಗಳ ಪ್ರಧಾನ ಕಾರ್ಯದರ್ಶಿ ಸುರೇಶ್ ಜೈನ್ ಹಾಗು ಮೈಸೂರು ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ ಗೌಡ ಹಂಚಿಕೊಂಡಿರುವ ವಿಚಾರಗಳನ್ನು ಸಂಕ್ಷಿಪ್ತವಾಗಿ ಇಲ್ಲಿ ಕೊಡಲಾಗಿದೆ.

1. ಮೈಸೂರಿಗೆ ಕೇಂದ್ರ ಸರ್ಕಾರ ರಫ್ತು ಕೇಂದ್ರ ಸ್ಥಾಪನೆಗೆ 3 ಕೋಟಿ ರೂ ಕೊಟ್ಟಿದೆ. ಅದೇ ರೀತಿ 4 ಕೋಟಿ ಅನುದಾನವನ್ನೂ ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಅದರಲ್ಲಿ ಈಗಾಗಲೇ ಒಂದು ಕೋಟಿ ಕೊಟ್ಟಿದ್ದು ಉಳಿದ 3 ಕೋಟಿಯನ್ನು ಈ ಬಜೆಟ್‌ನಲ್ಲಿ ನೀಡಬೇಕು.

2. ಕೈಗಾರಿಕಾ ಪ್ರಾಧಿಕಾರದ ರಚನೆಗೆ 50 ಕೋಟಿ ರೂ ನೀಡಬೇಕು. 40 ಕೋಟಿ ರೂಪಾಯಿಗಳಲ್ಲಿ ಕೈಗಾರಿಕಾ ಪ್ರದೇಶಗಳ ಮೂಲಭೂತ ಸೌಕರ್ಯ ಅಭಿವೃದ್ದಿಗೆ ಈ ಬಜೆಟ್‌ನಲ್ಲಿ ಹಣ ನೀಡಬೇಕು. ಕೆ ಐ ಡಿ ಬಿ ಅಥವಾ ಸ್ಥಳೀಯ ಸಂಸ್ಥೆಗಳ ಅನುದಾನಕ್ಕೆ 3 ಕೋಟಿ ನೀಡಬೇಕು. ಕೈಗಾರಿಕಾ ಕ್ಲಸ್ಟರ್ ಅಭಿವೃದ್ಧಿಗೆ ಕೇಂದ್ರ ಸರ್ಕಾರ 10 ರಿಂದ 20 ಕೋಟಿ ರೂ ನೀಡುತ್ತದೆ. ಅದೇ ರೀತಿ ರಾಜ್ಯ ಸರ್ಕಾರ ಹೆಚ್ಚಿನ ಹಣ ನೀಡಬೇಕು.

3. ದಸರಾ ಹಾಗೂ ಪ್ರವಾಸಿ ತಾಣದ ಖ್ಯಾತಿಯ ಮೈಸೂರಿನಲ್ಲಿ ಈ ಬಾರಿ ಪ್ರವಾಸೋದ್ಯಮದ ಅಭಿವೃದ್ಧಿಗೆ ಪ್ಯಾಕೇಜ್ ಘೋಷಣೆ ಮಾಡಬೇಕು. 365 ದಿನಗಳ ಪ್ರವಾಸೋದ್ಯಮಕ್ಕೆ ಉಪಯುಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು.

4. ಶಾಶ್ವತ ದಸರಾ ಪ್ರಾಧಿಕಾರದ ರಚನೆಯ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ. ದಸರಾ ಪ್ರಾಧಿಕಾರದ ರಚನೆ ಆಗಬೇಕು. ಶಿಥಿಲಾವಸ್ಥೆಯಲ್ಲಿರುವ ಪಾರಂಪರಿಕ ಕಟ್ಟಡಗಳ ದುರಸ್ತಿಗೆ ಹೆಚ್ಚಿನ ಹಣ ಮಿಸಲಿಡಬೇಕು.

ಇದನ್ನೂಓದಿ: ಹಳ್ಳಿಹಕ್ಕಿ ಪರ ಕಾಂಗ್ರೆಸ್ ಸದಸ್ಯ ಪ್ರಶ್ನೆ ಕೇಳಿದ್ದಕ್ಕೆ ಸಿಎಂ ಉದ್ಘಾರ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.