ಮೈಸೂರು: 10 ವರ್ಷಗಳ ಹಿಂದೆ ಮೈಸೂರು ಖಾಸಗಿ ಹೋಟೆಲ್ನಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್ ಕೊನೆಯುಸಿರೆಳೆದ ರೂಂಗೆ ಬಂದು ವಿಷ್ಣು ಅವರನ್ನು ನೆನೆದು ಭಾರತಿ ವಿಷ್ಣುವರ್ಧನ್ ಬೆಡ್ನ ಹತ್ತಿರ ಕಣ್ಣೀರು ಹಾಕಿದ್ದಾರೆ.
ನಗರದ ಕಿಂಗ್ಸ್ ಕೋರ್ಟ್ ಹೋಟೆಲ್ನಲ್ಲಿ 2009ರಲ್ಲಿ ನಿಧನರಾದ ವಿಷ್ಣುವರ್ಧನ್ ಅವರು ತಂಗಿದ್ದ ರೂಂ ನಂಬರ್ 334 ಹಾಗೂ 335ಕ್ಕೆ ಭಾರತಿ ವಿಷ್ಣುವರ್ಧನ್ ಬಂದಿದ್ದರು. ವಿಷ್ಣು ಸ್ಮರಣೆಯ ಪೂಜಾ ಕಾರ್ಯಕ್ರಮಕ್ಕೆ ಉದ್ಬೂರ್ನಲ್ಲಿರುವ ಸ್ಥಳಕ್ಕೆ ಹೋಗುವ ಮುನ್ನ ಈ ರೂಂಗೆ ಬಂದು ವಿಷ್ಣುವರ್ಧನ್ ಕೊನೆಯುಸಿರೆಳೆದ ಬೆಡ್ ಬಳಿ ಕುಳಿತು ಕಣ್ಣೀರಿಟ್ಟಿದ್ದಾರೆ.
ಮೈಸೂರಿಗೆ ಬಂದಾಗಲೆಲ್ಲಾ ಸಾಹಸ ಸಿಂಹ ವಿಷ್ಣುವರ್ಧನ್ ಇದೇ ಹೋಟೆಲ್ನ ಇದೇ ರೂಂಗಳಲ್ಲಿ ಉಳಿದುಕೊಳ್ಳುತ್ತಿದ್ದರು. ಇಂದು ವಿಷ್ಣುವರ್ಧನ್ ಅವರ 10ನೇ ವರ್ಷದ ಪುಣ್ಯ ಸ್ಮರಣೆಯ ದಿನವಾದ್ದರಿಂದ ಸ್ಮಾರಕ ನಿರ್ಮಾಣವಾಗುವ ಸ್ಥಳದಲ್ಲಿ ವಿಷ್ಣು ಕುಟುಂಬದವರು ಪೂಜೆ ಸಲ್ಲಿಸಿದರು.