ಮೈಸೂರು: ಬಿಜೆಪಿ ಸಂಸದರನ್ನು ಬೈಯ್ದು ಬೈಯ್ದು ಸಾಕಾಗಿದ್ದು ಈಗ ಮೋದಿಯವರನ್ನು ಬೈಯುವುದಕ್ಕೆ ಶುರು ಮಾಡಿದ್ದಾರೆ. ಈ ತರಹದ ಪ್ರಯತ್ನಕ್ಕೆ ಕೈ ಹಾಕದೆ ಇರುವುದು ಒಳ್ಳೆಯದು. ಏಕೆಂದರೆ ಆಕಾಶವನ್ನು ನೋಡಿ ಉಗುಳಿದಂಗೆ ಆಗುತ್ತದೆ ಅದು ಅವರ ಮುಖಕ್ಕೆ ಬಂದು ಬೀಳುತ್ತದೆ. ಯೋಚನೆ ಮಾಡಿ ಎಂದು ಸಂಸದ ಪ್ರತಾಪ್ ಸಿಂಹ ಟೀಕಾಕಾರಿಗಳಿಗೆ ತಿರುಗೇಟು ನೀಡಿದ್ದಾರೆ.
ಇಂದು ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ ವಿರೋಧ ಪಕ್ಷದವರು ನೆರೆ ಪರಿಹಾರದಲ್ಲಿ ಕೇಂದ್ರದಿಂದ ಯಾವುದೇ ಪರಿಹಾರ ಬಂದಿಲ್ಲ ಎಂದು ಎಲ್ಲಾ ಕಡೆ ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಜೊತೆಗೆ ಬಿಜೆಪಿ ಸಂಸದರನ್ನು ಬೈದು ಸಾಕಾಯಿತು ಇನ್ನೂ ಪ್ರಧಾನಿ ಮೋದಿಯವರ ವಿರುದ್ಧ ಮಾತನಾಡುತ್ತಿದ್ದು. ಇದೊಂದು ರೀತಿ ಆಕಾಶಕ್ಕೆ ಉಗುಳಿದಂಗೆ ಆಗುತ್ತದೆ. ಅದು ನಮ್ಮ ಮೇಲೆ ಬೀಳಲಿದೆ ಎಚ್ಚರ ಎಂದಿದ್ದಾರೆ.
ನೆರೆಯಿಂದ ಹಾನಿ ಉಂಟಾದ ಪ್ರದೇಶಗಳಿಗೆ ಎಸ್.ಡಿ.ಆರ್.ಎಫ್ ಮತ್ತು ಎನ್.ಡಿ.ಆರ್.ಎಫ್ ನಿಂದ ಹಣ ನೀಡಲಾಗಿದ್ದು, ಅತಿ ಹೆಚ್ಚು ಪರಿಹಾರವನ್ನು ನಾವೇ ನೀಡಿದ್ದೇವೆ. ಕರ್ನಾಟಕಕ್ಕೆ ಪ್ರಧಾನಿ ಮೋದಿಯವರ ಅಧಿಕಾರದಲ್ಲಿ ಅತಿ ಹೆಚ್ಚು ಅನುದಾನ ಬಂದಿದೆ, ಅದರಿಂದಲೇ 25 ಸಂಸದರನ್ನು ಗೆಲ್ಲಿಸಿದ್ದಾರೆ. ಕಾಂಗ್ರೆಸ್ ಈ ಹಿಂದೆ ನೀಡಿದ್ದ ಅನುದಾನಕ್ಕಿಂತ 3 ಪಟ್ಟು ಹೆಚ್ಚು ಅನುದಾನವನ್ನು ಬಿಜೆಪಿ ಸರ್ಕಾರ ಕರ್ನಾಟಕಕ್ಕೆ ನೀಡಿದೆ ಎಂದರು.
ಇನ್ನೂ ಬರೀ ಟೀಕೆ ಮಾಡುವುದನ್ನು ಪ್ರತಿಪಕ್ಷದವರು ಬಿಡಬೇಕು. ಬರ ಇದ್ದ ರಾಜ್ಯದಲ್ಲಿ ಯಡಿಯೂರಪ್ಪ ನವರು ಮುಖ್ಯಮಂತ್ರಿಗಳಾದ ನಂತರ ಅತಿ ಹೆಚ್ಚು ಮಳೆ ಬಂದಿದೆ. ಕೆಲವು ಪ್ರದೇಶಗಳಲ್ಲಿ ತೊಂದರೆ ಆಗಿದೆ. ಕೇಂದ್ರದಿಂದ ಇನ್ನೂ ಅತಿ ಹೆಚ್ಚಿನ ಅನುದಾನ ಬರಲಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.