ETV Bharat / state

ಕೊರೊನಾ ಕಂಟ್ರೋಲ್​ನತ್ತ ಸಾಂಸ್ಕೃತಿಕ ನಗರಿ: ಲಾಕ್​ಡೌನ್​ ಸಡಿಲಿಕೆ ಬಗ್ಗೆ ಚರ್ಚಿಸಿ ತೀರ್ಮಾನವೆಂದ ಸಚಿವ - mysore basava jayanti news

ಬಸವ ಜಯಂತಿ ಹಿನ್ನೆಲೆಯಲ್ಲಿ ಬಸವೇಶ್ವರರ ಪುತ್ಥಳಿಗೆ ಮಾರ್ಲಾಪಣೆ ಮಾಡಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಎಸ್.ಟಿ.ಸೋಮಶೇಖರ್, ಜಿಲ್ಲೆಯಲ್ಲಿ ಕೊರೊನಾ ಕಂಟ್ರೋಲ್‌ಗೆ ಬರುತ್ತಿದೆ. ಆದರೆ ಲಾಕ್‌ಡೌನ್ ಸಡಿಲಿಕೆ ಮಾಡುವ ಬಗ್ಗೆ ಚರ್ಚೆ ಆಗಬೇಕಿದೆ ಎಂದರು.

basava-jayanti
ಕೊರೊನಾ ಕಂಟ್ರೋಲ್​ನತ್ತ ಸಾಂಸ್ಕೃತಿಕ ನಗರಿ
author img

By

Published : Apr 26, 2020, 2:32 PM IST

ಮೈಸೂರು: ಜಿಲ್ಲೆ ಕೊರೊನಾ ಹಾಟ್​ಸ್ಪಾಟ್ ಆಗಿರುವುದರಿಂದ ಲಾಕ್‌ಡೌನ್ ಸಡಿಲಿಕೆ ವಿಚಾರದಲ್ಲಿ ತೀರ್ಮಾನ ಆಗಿಲ್ಲವೆಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

ಬಸವ ಜಯಂತಿ ಹಿನ್ನೆಲೆಯಲ್ಲಿ ಬಸವೇಶ್ವರರ ಪುತ್ಥಳಿಗೆ ಮಾರ್ಲಾಪಣೆ ಮಾಡಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೊರೊನಾ ಕಂಟ್ರೋಲ್‌ಗೆ ಬರುತ್ತಿದೆ. ಆದರೆ ಲಾಕ್‌ಡೌನ್ ಸಡಿಲಿಕೆ ಮಾಡುವ ಬಗ್ಗೆ ಚರ್ಚೆ ಆಗಬೇಕಿದೆ ಎಂದರು. ಎಂ.ಜಿ. ರಸ್ತೆ ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸಾಧ್ಯವಿಲ್ಲ, ಹಾಗಾಗಿ ಮಾರುಕಟ್ಟೆಯನ್ನು ಸ್ಥಳಾಂತರ ಮಾಡಲು ಸೂಚನೆ ನೀಡಲಾಗಿದೆ. ಏಕಾಏಕಿ ಬೇರೆ ಕಡೆ ಹೋಗಿ ವ್ಯಾಪಾರ ಮಾಡಿ ಎಂದು ಹೇಳಲು ಸಾಧ್ಯವಿಲ್ಲ. ಸ್ಥಳಾಂತರ ಆಗುವ ಜಾಗದಲ್ಲಿ ಮೂಲ ಸೌಕರ್ಯ ಒದಗಿಸಬೇಕು ಎಂದರು.

ಕೊರೊನಾ ಕಂಟ್ರೋಲ್​ನತ್ತ ಸಾಂಸ್ಕೃತಿಕ ನಗರಿ

ನಂತರ ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಮಾತನಾಡಿ, ಹಿಂದೆ ವಾರದಲ್ಲಿ 20 ಪಾಸಿಟಿವ್ ಕೇಸ್ ಬರುತ್ತಿದ್ದವು. ಈಗ ಅಂತಹ ಪರಿಸ್ಥಿತಿಯಿಂದ ಹೊರ ಬಂದಿದ್ದೇವೆ. ಜುಬಿಲಂಟ್​ ಕಾರ್ಖಾನೆ ಪ್ರೈಮರಿ, ಸೆಕೆಂಡರಿ ಕಾಂಟ್ಯಾಕ್ಟ್ ಟೆಸ್ಟಿಂಗ್ ಮುಕ್ತಾಯವಾಗಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.